ಜನತೆಯ ಹತ್ತಿರ ಜನತಾ ಮಿತ್ರ

janata mitra

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿವೆ. ಅವಧಿ ಪೂರ್ವ ಚುನಾವಣೆ ನಡೆಯುವ ಲೆಕ್ಕಾಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಕಣಕ್ಕೆ ಧುಮುಕಿವೆ.

ಈಗಾಗ್ಲೇ ರಾಜಕೀಯ ಸಮಾವೇಶಗಳು, ಉತ್ಸವಗಳು, ಮೇಳಗಳನ್ನು ಹಮ್ಮಿಕೊಂಡು ಮತದಾರರನ್ನು ಓಲೈಸುವ ಪ್ರಕ್ರಿಯೆಯಲ್ಲಿ ತೊಡಗಿವೆ.

ಆದ್ರೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ (BJP)ಪಕ್ಷಕ್ಕಿಂತಲೂ ಹೆಚ್ಚು ಜಾತ್ಯತೀಯ ಜನತಾದಳ (JDS Janatha mithra)ಚುನಾವಣಾ ತಯಾರಿಯಲ್ಲಿ ಮುಂಚೂಣಿಯಲ್ಲಿದೆ.

            ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆಲ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನೂ ಘೋಷಿಸಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅಲ್ಲದೆ ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿಸಲು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

https://vijayatimes.com/siddaramaiah-allegation-on-by-vijayendra/

ಅದ್ರಲ್ಲಿ ಜನತಾ ಮಿತ್ರ(JDS Janatha mithra) ಕಾರ್ಯಕ್ರಮವನ್ನು ವಾರ್ಡ್‌ ವಾರ್ಡ್‌ಗಳಲ್ಲಿ ಮಾಡಿ ಮತದಾರರನ್ನು ಓಲೈಸುತ್ತಿದ್ದಾರೆ. ಜನತಾ ಜಲಧಾರೆಯ  ಅದ್ಭುತ ಯಶಸ್ಸಿನ ನಂತರ ಜನತಾ ಮಿತ್ರ ಕಾರ್ಯಕ್ರಮವನ್ನು ಎಚ್ ಡಿ ಕುಮಾರಸ್ವಾಮಿ ಅವರು ಜುಲೈ 1 ರಂದು ಜೆಪಿ ಭವನದಲ್ಲಿ ಚಾಲನೆ ನೀಡಿದ್ರು.

ಜನತಾ ಮಿತ್ರ ವಿಶೇಷತೆ ಏನು?

ಜನತಾ ಮಿತ್ರ (JDS Janatha mithra) ವಾಹನಗಳು ವಿಶೇಷ ರೀತಿಯಲ್ಲಿ ನಿರ್ಮಾಣಗೊಂಡಿವೆ. ಜನರು ತಮ್ಮ ನಿರೀಕ್ಷೆಯ ಸರ್ಕಾರ ಹೇಗಿರಬೇಕು?  ಅವರ ಸಲಹೆ, ಅಭಿಪ್ರಾಯ, ಸರ್ಕಾರ ಹೇಗೆ ಆಡಳಿತ ನಡೆಸಬೇಕು? ಜನತಾ ಸರ್ಕಾರದಿಂದ ಜನರು ಬಯಸುವ ಕಾರ್ಯಗಳೇನು? ಇವೆಲ್ಲವುದರ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ಕಾಗದದಲ್ಲಿ ತಮ್ಮ ಅಭಿಪ್ರಾಯ ಬರೆದು ‘ಜನತಾ ಮಿತ್ರ’ ಪೆಟ್ಟಿಗೆಯಲ್ಲಿ ಹಾಕಬಹುದು.ಆ ವಾಹನದಲ್ಲೇ ಒಂದು ಟ್ಯಾಬ್‌ ಅಡಕವಾಗಿರಲಿದ್ದು, ಅದರಲ್ಲೂ ತಮ್ಮ ಅಭಿಪ್ರಾಯ ನಮೂದಿಸಿ ಸೇವ್‌ ಮಾಡಬಹುದು. ವಾಹನದ ಕಲಾತ್ಮಕ ವಿನ್ಯಾಸದ ಕಂಬಗಳ ಮೇಲಿನ ‘ಕ್ಯೂ ಆರ್‌’ ಕೋಡ್‌ ಸ್ಕ್ಯಾ‌ನ್‌ ಮಾಡಿಯೂ ಅಭಿಪ್ರಾಯ ದಾಖಲಿಸಬಹುದು.

ಜನತಾ ಮಿತ್ರ ಕಾರ್ಯಕ್ರಮವನ್ನು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ವರಿಷ್ಠರಾದ ಎಚ್‌. ಡಿ. ದೇವೇಗೌಡರು ಪ್ರಧಾನಮಂತ್ರಿಯಾಗಿ ಹಾಗೂ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಗಳ ಮಾಹಿತಿಯನ್ನು ಮನೆ ಮನೆಗೂ ತಲುಪಿಸುವ ಜವಾಬ್ದಾರಿಯನ್ನು ವಾರ್ಡ್‌ ಹಾಗೂ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಮುಖಂಡರಿಗೆ ಪಕ್ಷ ವಹಿಸಿದೆ.

https://vijayatimes.com/state-bjp-slams-congress-party/

ಈಗಾಗಲೇ 15 ಜನತಾ ಮಿತ್ರ ಹೆಸರಿನ ಎಲ್​ಇಡಿ ವಾಹನ ಮತ್ತು ಜನತಾ ಮಿತ್ರ ವಿಶೇಷ ವಿನ್ಯಾಸದ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಒಂದು ವಾಹನ ತಲಾ ಎರಡು ಕ್ಷೇತ್ರಗಳಿಗೆ ತೆರಳಿದೆ, ಅಷ್ಟೂ ವಾಹನಗಳಿಗೆ ಶಾಸಕರು ಅಥವಾ ಹಿರಿಯ ಮುಖಂಡರ ನೇತೃತ್ವದಲ್ಲಿ ಉಸ್ತುವಾರಿ ತಂಡವು ಜನರ ಅಭಿಪ್ರಾಯ ಸಂಗ್ರಹ, ಸಭೆ, ಜಾಥಾ, ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಲಿವೆ.

ಜುಲೈ 17ರಂದು ಬೃಹತ್ ಸಮಾವೇಶ

ಜುಲೈ 17 ರಂದು ‘ಜನತಾ ಮಿತ್ರ’ ಕಾರ್ಯಕ್ರಮ ಮುಕ್ತಾಯವಾಗಲಿದೆ. ಆ ದಿನ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಬೃಹತ್‌ ಸಮಾವೇಶ ನಡೆಯಲಿದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಎಚ್ ಡಿ ಕುಮಾರಸ್ವಾಮಿ,  ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಎಲ್ಲ ಪ್ರಮುಖರು ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.

ಪಂಚರತ್ನದ ಮೂಲಕ ಜನಯಾತ್ರೆ

            ಜೆಡಿಎಸ್‌ ಅಧಿಕಾರಕ್ಕೆ ಬಂದ್ರೆ ರಾಜ್ಯದಲ್ಲಿ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿ ಮತದಾರರ ಮನಗೆಲ್ಲುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಈ ಬಾರಿ ಬಹುಮತ ಪಡೆದು ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ರಚಿಸುವ ಕನಸು ಕಾಣುತ್ತಿರುವ ಜೆಡಿಎಸ್ ಮುಖಂಡರಿಗೆ ಮತದಾರ ಪ್ರಭು ಆಶೀರ್ವಾದ ಮಾಡ್ತಾನಾ? ರಾಜ್ಯದಲ್ಲಿ ಮತ್ತೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಲು ಯಶಸ್ವಿಯಾಗುತ್ತಾ? ಕಾದು ನೋಡೋಣ.
Exit mobile version