Bengaluru: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ (jds new president gtdevegowda) ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಹಿರಿಯ ನಾಯಕ
ಜಿ.ಟಿ.ದೇವೇಗೌಡ ಅವರನ್ನು ಪಕ್ಷದ ಕೋರ್ ಕಮಿಟಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ (H D Kumaraswamy)
ಅವರು, ಜೆಪಿ ಭವನದಲ್ಲಿ (JP Bhavan) ಪಕ್ಷದ ನಾಯಕರ ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಪಕ್ಷ ಸಂಘಟನೆ ಹಾಗು ಬಲವರ್ಧನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಚರ್ಚೆಯ ನಂತರ, ಪಕ್ಷದ ಹಿರಿಯ ಮುಖಂಡರನ್ನೊಳಗೊಂಡ ಕೋರ್ ಕಮಿಟಿಯನ್ನು
(Core Committee) ಮಾಜಿ ಸಚಿವರು ಹಾಗು ಶಾಸಕರಾದ ಜಿ. ಟಿ. ದೇವೇಗೌಡರ (G T Devegowda) ನೇತೃತ್ವದಲ್ಲಿ ರಚಿಸಲಾಯಿತು. ನಂತರ ಮಾಜಿ ಸಚಿವರು ಹಾಗು ಶಾಸಕರಾದ
ಜಿ. ಟಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಇಂದು, ಜನತಾದಳ (ಜಾತ್ಯತೀತ) ಪಕ್ಷದ ಕೋರ್ (jds new president gtdevegowda) ಕಮಿಟಿಯ ಮೊದಲ ಸಭೆ ನಡೆಯಿತು.
ಸಭೆಯಲ್ಲಿ ಕೋರ್ ಕಮಿಟಿ ಸಂಚಾಲಕರಾದ ವೈ.ಎಸ್.ವಿ ದತ್ತ (Y S V Datta) ಅವರು, ಹಾಗೂ ಕೋರ್ ಕಮಿಟಿ ಸದಸ್ಯರುಗಳಾದ ಬಂಡೆಪ್ಪ ಖಾಶಂಪೂರ್, ಹೆಚ್. ಕೆ.ಕುಮಾರಸ್ವಾಮಿ,
ವೆಂಕಟರಾವ್ ನಾಡಗೌಡ (Venkatarao Nadagowda), ಸಿ.ಎಸ್.ಪುಟ್ಟರಾಜು, ಆಲ್ಕೋಡ್ ಹನುಮಂತಪ್ಪ, ನೇಮಿರಾಜ್ ನಾಯಕ್, ಎಂ.ಕೃಷ್ಣ ರೆಡ್ಡಿ (M Krishna Reddy),
ರಾಜು ಗೌಡ ಪಾಟೀಲ್, ಸುಧಾಕರ್ ಶೆಟ್ಟಿ (Sudhakar Shetty) ಹಾಗೂ ಈ ಸಭೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ (C M Ibrahim) ಹಿರಿಯ ನಾಯಕರಾದ
ಅಲ್ಕೋಡ್ ಹನುಮಂತಪ್ಪ, ಬಿ.ಎಂ.ಫಾರೂಕ್ (BM Farooq), ಬಂಡೆಪ್ಪ ಕಾಶೆಂಪೂರ್, ಎ.ಬಿ.ಮಾಲಕರೆಡ್ಡಿ, ಕೆ.ಎಂ.ಕೃಷ್ಣಾರೆಡ್ಡಿ (K M Krishna Reddy), ವೀರಭದ್ರಪ್ಪ ಹಾಲರವಿ,
ದೊಡ್ಡನಗೌಡ ಪಾಟೀಲ್ (Doddanagowda Patil), ಚಂದ್ರಶೇಖರ್, ಸುಧಾಕರಶೆಟ್ಟಿ, ತಿಮ್ಮರಾಯಪ್ಪ (Timmarayappa) ಸೇರಿ ಅನೇಕ ನಾಯಕರು ಹಾಜರಿದ್ದರು.

ಇನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಸ್ಪರ್ದೆಮಾಡುವ ಇಚ್ಚೆ ಹೊಂದಿರುವ ಜೆಡಿಎಸ್ (JDS) ನಾಯಕರು ಈಗಿನಿಂದಲೇ ಲೋಕಸಭಾ ಚುನಾವಣೆಗೆ ಸಿದ್ದತೆ
ನಡೆಸಲು ಮುಂದಾಗಿದ್ದಾರೆ. ಬಿಜೆಪಿಯೊಂದಿಗೆ (BJP) ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕುಮಾರಸ್ವಾಮಿ ಅವರು ಹೆಚ್ಚು ಉತ್ಸುಕರಾಗಿದ್ದರು. ಆದರೆ ಹಿರಿಯ ನಾಯಕ ಜಿ.ಟಿ.ದೇವೇಗೌಡ
ಮತ್ತು ಎಚ್.ಡಿ.ರೇವಣ್ಣ (H D Revanna) ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಹೀಗಾಗಿಯೇ ಹಳೇ ಮೈಸೂರು (Mysore) ಭಾಗದಲ್ಲಿ ಪ್ರಬಲವಾಗಿರುವ ಜಿ.ಟಿ.ದೇವೇಗೌಡರ ನೇತೃತ್ವದಲ್ಲೇ ಪಕ್ಷ ಸಂಘಟನೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಮುಂಬರುವ
ಲೋಕಸಭಾ ಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ಜಿ.ಟಿ.ದೇವೇಗೌಡರಿಗೆ (G T Devegowda) ನೀಡಲಾಗಿದೆ.
ಮಹೇಶ್