1,999 ರೂ.ಗೆ ವಿಶ್ವದ ಅತ್ಯಂತ ಅಗ್ಗದ 4G ಫೋನ್ !

Kannada online news portal

ನವದೆಹಲಿ ಅ 30 : ರಿಲಯನ್ಸ್ ಮತ್ತು ಗೂಗಲ್ (Reliance Jio and Google) ಒಟ್ಟಿಗೆ ಸೇರಿ ವಿಶ್ವದ ಅತ್ಯಂತ ಅಗ್ಗದ 4G ಸ್ಮಾರ್ಟ್‌ಫೋನ್‌ ಗಾಗಿ ಬಹಳ ಸಮಯದಿಂದ ಕೆಲಸ ಮಾಡುತ್ತಿವೆ. ಈ ಹೊಸ ಫೋನ್ ಬಿಡುಗಡೆಗಾಗಿ ದೇಶದ ಜನರು ಕುತೂಹಲದಿಂದ ಕಾಯುತ್ತಿದ್ದರು. JioPhone Next ಅನ್ನು ವಿಶ್ವದ ಅತ್ಯಂತ ಅಗ್ಗದ 4G ಸ್ಮಾರ್ಟ್‌ಫೋನ್ ಎಂದು ಪರಿಗಣಿಸಲಾಗಿದೆ. ದೀರ್ಘ ವಿಳಂಬದ ಬಳಿಕ ಕಂಪನಿಯು ಅಂತಿಮವಾಗಿ ಈ ಫೋನ್‌ನ ಬೆಲೆ ಮತ್ತು ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

JioPhone Next ಸ್ಮಾರ್ಟ್ಫೋನ್ ಖರೀದಿಸಿ

ಈ ಫೋನ್ ಅನ್ನು ಹೇಗೆ ಖರೀದಿಸಬಹುದು ಎಂಬುದರ ಬಗ್ಗೆ ಈ ಹಿಂದೆ ಕಂಪನಿಯು ಮಾಹಿತಿಯನ್ನು ನೀಡಿತ್ತು. ಸದ್ಯ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 6,499 ರೂ.ಗಳಿಗೆ ಬಿಡುಗಡೆಯಾಗುತ್ತಿದ್ದರೂ, ನೀವು ಇದನ್ನು 1,999 ರೂ.ಗೆ ಮನೆಗೆ ಕೊಂಡೊಯ್ಯಬಹುದು. JioPhone Next ಅನ್ನು ದೀಪಾವಳಿ ಹಬ್ಬದಂದು ಅಂದರೆ ನವೆಂಬರ್ 4ರಿಂದ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ.  

1,999 ರೂ.ಗೆ ವಿಶ್ವದ ಅತ್ಯಂತ ಅಗ್ಗದ 4G ಫೋನ್  

JioPhone Next ಖರೀದಿಸಲು ನೀಡಲಾದ EMI ಯೋಜನೆಯೊಂದಿಗೆ ನೀವು ಈ ಫೋನ್ ಅನ್ನು 1,999 ರೂ.ಗೆ ಖರೀದಿಸಬಹುದು. ಈ ಸುಲಭ EMI ಆಯ್ಕೆಯಲ್ಲಿ ನೀವು ಆರಂಭದಲ್ಲಿ 1,999 ರೂ. ಪಾವತಿಸಬೇಕಾಗುತ್ತದೆ. ನಂತರ ನೀವು ಉಳಿದ ಮೊತ್ತವನ್ನು ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಇಲ್ಲಿ ನೀವು 1,999 ರೂ. ಜೊತೆಗೆ 501 ರೂ. ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. EMI ಯೋಜನೆಗಳು 18 ತಿಂಗಳು ಮತ್ತು 24 ತಿಂಗಳುಗಳ ಆಯ್ಕೆಯೊಂದಿಗೆ ಬರುತ್ತದೆ

JioPhone Next ಖರೀದಿಸಲು ಹಲವು ಮಾರ್ಗಗಳಿವೆ. ನಿಮ್ಮ ಹತ್ತಿರದ ಜಿಯೋ ಮಾರ್ಟ್ ಡಿಜಿಟಲ್ ರಿಟೇಲರ್‌ಗೆ ಹೋಗಿ ನೀವು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ನೀವು ಈ ಫೋನ್‌ ಖರೀದಿಗಾಗಿ Jioನ ವೆಬ್‌ಸೈಟ್ ಅಥವಾ WhatsApp ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

WhatsAppನಲ್ಲಿ ನೋಂದಾಯಿಸಲು ನೀವು 7018270182 ಗೆ ‘Hi’ ಎಂದು SMS ಮಾಡಿದರೆ ಸಾಕು. ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮಗೆ ದೃಢೀಕರಣವನ್ನು ಕಳುಹಿಸಲಾಗುತ್ತದೆ. ಅದರ ನಂತರ ನಿಮ್ಮ ಹತ್ತಿರದ ಚಿಲ್ಲರೆ ವ್ಯಾಪಾರಿಗಳ ಕುರಿತು ನಿಮಗೆ ತಿಳಿಸಲಾಗುವುದು. ಇಲ್ಲಿ ನೀವು ನಿಮ್ಮ ಸ್ಮಾರ್ಟ್‌ಫೋನ್ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

Kannada live news

Exit mobile version