ಜ್ಞಾನಪೀಠ ಪುರಸ್ಕೃತ‌ರು ಅಧ್ಯಯನ ಮಾಡಿದ ಶಾಲೆ ಅಭಿವೃದ್ಧಿ‌ಗೆ ಸರ್ಕಾರ ನಿರ್ಧಾರ.

ಬೆಂಗಳೂರು ಸೆ 28 : ರಾಜ್ಯದ ಎಂಟು ಜ್ಞಾನಪೀಠ ಪುರಸ್ಕೃತ‌ರು ಶಿಕ್ಷಣ ಪಡೆದ 11 ಸರ್ಕಾರಿ ಶಾಲೆಗಳ ಅಭಿವೃದ್ಧಿ‌ಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ.

16.88 ಕೋಟಿ ರೂ. ಗಳನ್ನು ಈ ಸಲುವಾಗಿ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಈ ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆಯನ್ನು ಸಹ ಸಿದ್ಧಪಡಿಸಲಾಗಿದೆ. ಇದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದಲೂ ಅನುಮೋದನೆ ದೊರೆತಿದೆ.

ಈ ಯೋಜನೆಯನ್ನು ಆರು ತಿಂಗಳ ಕಾಲಮಿತಿ‌ಯಲ್ಲಿ ಅನುಷ್ಠಾನ ಮಾಡಲು ಸೂಚಿಸಲಾಗಿದೆ. ಶಾಲೆಗಳ ಪ್ರಯೋಗಾಲಯ‌ಗಳು, ಗ್ರಂಥಾಲಯ, ಶೌಚಾಲಯ, ಸ್ಮಾರ್ಟ್ ತರಗತಿಗಳು, ಪೀಠೋಪಕರಣ, ಕುಡಿಯುವ ನೀರು, ಕ್ರೀಡಾ ಸಾಮಗ್ರಿ‌ಗಳ, ಶಾಲೆಗಳಿಗೆ ಸುಣ್ಣ ಬಣ್ಣ ಬಳಿಯುವುದಕ್ಕೆ ಸಂಬಂಧಿಸಿದಂತೆ ಈ ಯೋಜನೆಯಲ್ಲಿ ಸೂಚಿಸಲಾಗಿದೆ. ಹಾಗೆಯೇ ಜ್ಞಾನಪೀಠ ಪುರಸ್ಕೃತ‌ರ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಸರ್ಕಾರ ಅನುದಾನ ನೀಡಿದೆ.

Exit mobile version