“ದೇವರ ಜಾತಿ” : ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ JNU ಉಪಕುಲಪತಿ

ನವದೆಹಲಿ : “ಮಾನವಶಾಸ್ತ್ರೀಯವಾಗಿ ದೇವರುಗಳು ಮೇಲ್ಜಾತಿಗೆ ಸೇರಿದವರಲ್ಲ” ಎಂದು ತಮ್ಮ ಉಪನ್ಯಾಸದಲ್ಲಿ ಹೇಳಿಕೆ ನೀಡಿದ್ದ, ಜೆಎನ್‍ಯು ಉಪಕುಲಪತಿ(JNU Vice Chancellor) ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು,

ಗೌತಮ ಬುದ್ಧನಿಂದ(Gowthama Buddha) ಹಿಡಿದು ಬಿ.ಆರ್.ಅಂಬೇಡ್ಕರ್(BR Ambedkar)ವರೆಗೆ ಭಿನ್ನಾಭಿಪ್ರಾಯ ಹೊಂದಿರುವ ಚಿಂತನೆಗಳನ್ನು ತಾರ್ಕಿಕವಾಗಿ ಎದುರಿಸಿದ ಶ್ರೇಯಸ್ಸು ಹಿಂದೂ ಧರ್ಮಕ್ಕೆ ಸಲ್ಲುತ್ತದೆ ಎಂದು ಹೇಳಿದ್ದಾರೆ. ಲಿಂಗ ನ್ಯಾಯದ ಕುರಿತು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಎಂಬ ಶೀರ್ಷಿಕೆಯಡಿ ಡಾ.ಬಿ.ಆರ್.ಅಂಬೇಡ್ಕರ್ ಉಪನ್ಯಾಸ ಮಾಲಿಕೆಯನ್ನು ನಡೆಸಿಕೊಟ್ಟ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು,

ಇದನ್ನೂ ಓದಿ : https://vijayatimes.com/siddaramaiah-takes-a-step-back/

ಅಂಬೇಡ್ಕರ್ ಮತ್ತು ಲಿಂಗ ನ್ಯಾಯದ ಕುರಿತು ಮಾತನಾಡುತ್ತಾ, ನಾನು ಏಕರೂಪ ನಾಗರಿಕ ಸಂಹಿತೆಯನ್ನು ಸಮರ್ಥಿಸಿಕೊಂಡಿದ್ದೆ. ಇನ್ನು ಹಿಂದೂ ಧರ್ಮ ಒಂದೇ ಧರ್ಮವಲ್ಲ, ಅದೊಂದು ಜೀವನ ವಿಧಾನ ಎಂದು ನಾನು ಹೇಳಿದೆ. ಸನಾತನ ಧರ್ಮವು ಭಿನ್ನಾಭಿಪ್ರಾಯ, ವೈವಿಧ್ಯತೆ ಮತ್ತು ವ್ಯತ್ಯಾಸವನ್ನು ಸ್ವೀಕರಿಸುತ್ತದೆ.

ಬೇರೆ ಯಾವುದೇ ಧರ್ಮವು ಅದನ್ನು ಮಾಡುವುದಿಲ್ಲ ಮತ್ತು ಗೌತಮ ಬುದ್ಧನಿಂದ ಅಂಬೇಡ್ಕರ್ವರೆಗೆ ಅಂತಹ ಮಹಾನ್ ಭಿನ್ನಾಭಿಪ್ರಾಯಗಳನ್ನು ಆಚರಿಸುವ ಶ್ರೇಯ ಹಿಂದೂ ಧರ್ಮಕ್ಕೆ ಸಲ್ಲುತ್ತದೆ ಎಂದು ತಿಳಿಸಿದ್ದೆ ಎಂದಿದ್ದಾರೆ. ಮನುಸ್ಮೃತಿಯ ಪ್ರಕಾರ ಎಲ್ಲಾ ಮಹಿಳೆಯರು ಶೂದ್ರರು ಎಂಬ ಅವರ ಟೀಕೆಗಳನ್ನು ಉಲ್ಲೇಖಿಸಿದ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು, ಅಂಬೇಡ್ಕರ್ ಅವರು ಮನುಸ್ಮೃತಿಯ ಮೇಲೆ ಬಹಳಷ್ಟು ಬರೆದಿದ್ದಾರೆ.

https://fb.watch/f4t1RsD5LU/

ನಾನು ಅವರ ದೃಷ್ಟಿಕೋನವನ್ನು ಮಾತ್ರ ವಿಶ್ಲೇಷಿಸಿದ್ದೇನೆ. ಬಾಬಾ ಸಾಹೇಬರು ಭಾರತೀಯ ಸಂವಿಧಾನದ ಪಿತಾಮಹ ಮತ್ತು ಕರಡು ಸಮಿತಿಯ ಅಧ್ಯಕ್ಷರು – ಅವರ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಾನು ಲಿಂಗ ನ್ಯಾಯದ ಬಗ್ಗೆ ಮಾತನಾಡುವಾಗ, ಈ ದೃಷ್ಟಿಕೋನವನ್ನು ವಿಶ್ಲೇಷಿಸುವುದು ನನಗೆ ಬಹಳ ಮುಖ್ಯವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

Exit mobile version