ಆಯಿಲ್ ಇಂಡಿಯಾ ಲಿಮಿಟೆಡ್ನಲ್ಲಿ ಐಟಿಐ, ಡಿಪ್ಲೊಮ, ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ

ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited) ಐಟಿಐ, ಡಿಪ್ಲೊಮ, ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ ಲಭ್ಯವಿದ್ದು ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಕುರಿತು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ಆಯಿಲ್ ಇಂಡಿಯಾ ಲಿಮಿಟೆಡ್
ಹುದ್ದೆ ಹೆಸರು : ವರ್ಕ್ ಪರ್ಸನ್
ಹುದ್ದೆಗಳ ಸಂಖ್ಯೆ : 421

ವೇತನ ಶ್ರೇಣಿ : 20,000-35000.

ವಿದ್ಯಾರ್ಹತೆ : ವಿವಿಧ ಟ್ರೇಡ್ಗಳಲ್ಲಿ ITI ಮತ್ತು ಡಿಪ್ಲೊಮ (Diploma) ಪಾಸಾದವರು, ಗ್ರೇಡ್-5 ಹುದ್ದೆಗೆ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ಮೀರಿರಬಾರದು. SC / ST ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು. OBC ಅಭ್ಯರ್ಥಿಗಳಿಗೆ 36 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಶುಲ್ಕ :
GM ಮತ್ತು OBC ಅಭ್ಯರ್ಥಿಗಳಿಗೆ ರೂ.200.
SC / ST / EWS/ Pwd / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್ಲೈನ್ (Online) ಮೂಲಕ ಪಾವತಿ ಮಾಡಬಹುದು.

ಆಯ್ಕೆ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ. ನಂತರ ಮೆಡಿಕಲ್ ಟೆಸ್ಟ್ (Medical Test) ನಡೆಸಿ ಅಭ್ಯರ್ಥಿಗಳ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 30-12-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 30-01-2024

Exit mobile version