ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Department of Women and Child Welfare)ಯು ಕೋಲಾರ (Job Recruitment in WCD) ಜಿಲ್ಲೆಯಾದ್ಯಂತ 6 ಶಿಶು ಅಭಿವೃದ್ಧಿ
ಯೋಜನೆಗಳಡಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಶಿಶು ಅಭಿವೃದ್ಧಿ ಯೋಜನೆಗಳಡಿ ಒಟ್ಟು 513 ಹುದ್ದೆಗಳನ ನೇಮಕಾತಿಗೆ
ಅಧಿಸೂಚನೆ ಬಿಡುಗಡೆ ಮಾಡಿದೆ. ಅಂಗನವಾಡಿ ಕಾರ್ಯಕರ್ತೆ- 120, ಅಂಗನವಾಡಿ ಸಹಾಯಕಿ- 393 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಹುದ್ದೆಗಳ ವಿವರ
ಅಂಗನವಾಡಿ ಕಾರ್ಯಕರ್ತೆ : 120
ಅಂಗನವಾಡಿ ಸಹಾಯಕಿ : 393
ಒಟ್ಟು ಹುದ್ದೆಗಳು : 513
ಶೈಕ್ಷಣಿಕ ವಿದ್ಯಾರ್ಹತೆ :
ಅಂಗನವಾಡಿ ಕಾರ್ಯಕರ್ತೆ : PUC / ಡಿಪ್ಲೊಮ ECCE
ಅಂಗನವಾಡಿ ಸಹಾಯಕಿ ಹುದ್ದೆ: SSLC ಉತ್ತೀರ್ಣರಾಗಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ತುಂಬಿರಬೇಕು. 35 ವರ್ಷ ವಯಸ್ಸು ಮೀರಿರಬಾರದು.
ವೇತನ : ರೂ.6000 ರಿಂದ 10000
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು :
- ಜನನ ಪ್ರಮಾಣ ಪತ್ರ
- SSLC / PUC ಅಂಕಪಟ್ಟಿ.
- ವಾಸಸ್ಥಳ ದೃಢೀಕರಣ ಪತ್ರ.
- 4. ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ.
- ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ (Job Recruitment in WCD) ಪಡೆದ ಪ್ರಮಾಣ ಪತ್ರ.6. ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.
- ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 12-03-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 19-04-2024
ಅಧಿಕೃತ ವೆಬ್ಸೈಟ್ ವಿಳಾಸ : https://karnemakaone.kar.nic.in/abcd/home.aspx
ಇದನ್ನು ಓದಿ: ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ