ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ (job vacancy in bel) ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.
ಮೆಕ್ಯಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್ (Computer Science), ಇಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ರಕ್ಷಣಾ ಸಚಿವಾಲಯ
ಅಧೀನದ ಒಂದು ನವರತ್ನ ಪಬ್ಲಿಕ್ ಸೆಕ್ಟಾರ್ ಎಂಟರ್ಪ್ರೈಸಸ್ ಆಗಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ ಒಟ್ಟು 120 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ಇಲೆಕ್ಟ್ರಾನಿಕ್ಸ್ ಇಂಜಿನಿಯರ್ : 40
ಮೆಕ್ಯಾನಿಕಲ್ ಇಂಜಿನಿಯರ್ : 40
ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ : 10
ಸಿವಿಲ್ ಇಂಜಿನಿಯರ್ : 30
ವೇತನ : 17,500 ರೂ.ಗಳು
ವಿದ್ಯಾರ್ಹತೆ : ಅಧಿಸೂಚನೆ ಪ್ರಕಾರ ಮೆಕ್ಯಾನಿಕಲ್ / ಕಂಪ್ಯೂಟರ್ ಸೈನ್ಸ್ / ಇಲೆಕ್ಟ್ರಾನಿಕ್ಸ್ / ಸಿವಿಲ್ ಇಂಜಿನಿಯರಿಂಗ್ನಲ್ಲಿ ಪದವಿ ಅಥವಾ ಬಿ.ಟೆಕ್ ಪದವಿ ಪಡೆದಿರಬೇಕು.
ವಯೋಮಿತಿ : ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. OBC ಅಭ್ಯರ್ಥಿಗಳಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಗೆ ಅವಕಾಶವಿದೆ.
ಪ್ರಮುಖ ದಿನಾಂಕಗಳು
ಆನ್ಲೈನ್ ಅಪ್ಲಿಕೇಶನ್ (Online Applcation) ಸಲ್ಲಿಸುವ ಆರಂಭಿಕ ದಿನಾಂಕ : 30-09-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-10-2023
ಸಂದರ್ಶನ ದಿನಾಂಕ : 18-10-2023 ರಿಂದ 20-10-2023 ರವರೆಗೆ .
ಆಯ್ಕೆ ಪ್ರಕ್ರಿಯೆ : ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ನಂತರ ನೇರ ಸಂದರ್ಶನ, ದಾಖಲೆಗಳ (job vacancy in bel) ಪರಿಶೀಲನೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು :
ಶೈಕ್ಷಣಿಕ ದಾಖಲೆಗಳು (SSLC, PUC, BE or B.Tech)
ಆಧಾರ್ ಕಾರ್ಡ್(Aadhar Card)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಇ-ಮೇಲ್ ವಿಳಾಸ
ಮೊಬೈಲ್ ಸಂಖ್ಯೆ
ಅಧಿಕೃತ ವೆಬ್ಸೈಟ್ (Website) ವಿಳಾಸ : https://bel-india.in/
ಇದನ್ನು ಓದಿ: ಬೆಂಕಿ ಅವಘಡ: ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ, 7 ಮಂದಿ ಸಜೀವ ದಹನ