ಕರ್ನಾಟಕ (Karntaka) ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (Job Vacancy in KUWSDB) ಹಲವು ಹುದ್ದೆಗಳ ನೇಮಕಾತಿಗೆ ಅಧಿಕೃತ ಅರ್ಜಿ
ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority)
ಮೂಲಕ ಈ ನೇಮಕಾತಿ ನಡೆಯಲಿದೆ. ಈ ಕುರಿತ (Job Vacancy in KUWSDB) ಸಂಪೂರ್ಣ ವಿವರ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಇಲಾಖೆ : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು.
ಹುದ್ದೆಗಳ ವಿವರ
ಸಹಾಯಕ ಇಂಜಿನಿಯರ್ (ಸಿವಿಲ್) : 50 (ಆರ್ಪಿಸಿ 43+ 07ಎಚ್ಕೆ)
ಪ್ರಥಮ ದರ್ಜೆ ಲೆಕ್ಕ ಸಹಾಯಕರು : 14 (11 ಆರ್ಪಿಸಿ + 03 ಎಚ್ಕೆ)
ಒಟ್ಟು ಹುದ್ದೆಗಳ ಸಂಖ್ಯೆ : 64
ವೇತನ ಶ್ರೇಣಿ
ಸಹಾಯಕ ಇಂಜಿನಿಯರ್ (ಸಿವಿಲ್) : 43100-83900. ರೂ.ಗಳು
ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಗ್ರೂಪ್ ಸಿ) :27650-52650. ರೂ.ಗಳು
ಶೈಕ್ಷಣಿಕ ಅರ್ಹತೆ
ಸಹಾಯಕ ಇಂಜಿನಿಯರ್ (ಸಿವಿಲ್) : BE
ಪ್ರಥಮ ದರ್ಜೆ ಲೆಕ್ಕ ಸಹಾಯಕರು : B.Com ಪದವಿ
ವಯೋಮಿತಿ :
GM ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು. 2A, 2B, 3A, 3B, ಅಭ್ಯರ್ಥಿಗಳಿಗೆ 38 ವರ್ಷ ಮತ್ತು SC ST , ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಪ್ರಾರಂಭಿಕ ದಿನಾಂಕ: 10-02-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 10-03-2024
ಅರ್ಜಿ ಶುಲ್ಕ ವಿವರ
GM ಹಾಗೂ OBC ಅಭ್ಯರ್ಥಿಗಳಿಗೆ ರೂ.750
SC, ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ. 500.
ವಿಕಲಚೇತನ ಅಭ್ಯರ್ಥಿಗಳಿಗೆ ರೂ.500.
ಆಯ್ಕೆ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ
ಪರೀಕ್ಷೆಯ ಕೇಂದ್ರಗಳು: ದಾವಣಗೆರೆ (Davanagere), ಧಾರವಾಡ, ಬೆಂಗಳೂರು, ಮೈಸೂರು (Mysore), ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ತುಮಕೂರು.
KUWSDB Job Notification 2024 : https://cetonline.karnataka.gov.in/keawebentry456/kbknrk2023/gazette_notification_Urban_Water_supplykannada.pdf
ಅಧಿಕೃತ ವೆಬ್ಸೈಟ್ : https://cetonline.karnataka.gov.in/kea/