Mangalore: ದಕ್ಷಿಣ ಕೆನರಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್ 125 ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ದಕ್ಷಿಣ ಕೆನರಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಸೆಕೆಂಡ್ ಡಿವಿಷನ್ ಕ್ಲರ್ಕ್ (Second Division Clerk), ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು? ವಿದ್ಯಾರ್ಹತೆ ಏನಿರಬೇಕು?, ಎಷ್ಟು ಸಂಬಳ ದೊರೆಯುತ್ತದೆ? ವಯೋಮಿತಿ ಏನಿರಬೇಕು? ಅರ್ಜಿಯನ್ನು ಸಲ್ಲಿಸುವ ವಿಧಾನ? ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸಂಸ್ಥೆಯ ಹೆಸರು : ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (SCDCC ಬ್ಯಾಂಕ್)
ಹುದ್ದೆಗಳು : ಸೆಕೆಂಡ್ ಡಿವಿಷನ್ ಕ್ಲರ್ಕ್, ಕಂಪ್ಯೂಟರ್ ಪ್ರೋಗ್ರಾಮರ್
ಕಂಪ್ಯೂಟರ್ ಪ್ರೋಗ್ರಾಮರ್ : 2
ಸೆಕೆಂಡ್ ಡಿವಿಷನ್ ಕ್ಲರ್ಕ್ : 123
ಉದ್ಯೋಗ ಸ್ಥಳ: ಮಂಗಳೂರು
ಒಟ್ಟು ಹುದ್ದೆಗಳು: 125
ಶೈಕ್ಷಣಿಕ ಅರ್ಹತೆ:
ಕಂಪ್ಯೂಟರ್ ಪ್ರೋಗ್ರಾಮರ್ : BE/ B.Tech / M.Sc in Computer Science, MCA
ಸೆಕೆಂಡ್ ಡಿವಿಷನ್ ಕ್ಲರ್ಕ್ : ಪದವಿ, ಸ್ನಾತಕೋತ್ತರ ಪದವಿ
ಸಂಬಳ :
ಕಂಪ್ಯೂಟರ್ ಪ್ರೋಗ್ರಾಮರ್ : ರೂ. 36,985 – 89,600/-
ಸೆಕೆಂಡ್ ಡಿವಿಷನ್ ಕ್ಲರ್ಕ್ : ರೂ. 24,910 – 55,655/-

ವಯೋಮಿತಿ: ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (South Canara District Central Co-Operative Bank Limited) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 20-Sep-2023 ರಂತೆ 35 ವರ್ಷಗಳು.
ವಯೋಮಿತಿ ಸಡಿಲಿಕೆ : BC ಅಭ್ಯರ್ಥಿಗಳು: 03 ವರ್ಷಗಳು SC/ST ಅಭ್ಯರ್ಥಿಗಳು: 05 ವರ್ಷಗಳು
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು: ರೂ.590/-
ಇತರ ಅಭ್ಯರ್ಥಿಗಳು: ರೂ.1180/-
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯ ಮೂಲಕ ಅರ್ಜಿ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಂಬಂಧಿತ ದಾಖಲೆಗಳೊಂದಿಗೆ : ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸೌತ್ ಕೆನರಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್, ಕೊಡಿಯಾಲ್ಬೈಲ್, ಮಂಗಳೂರು – 575003 ಈ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ (Online) ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-08-2023
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-9-2023
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ : scdccbank.com ಭೇಟಿ ನೀಡಿ