ಇಂಡಿಯಾ ಏರ್ಪೋರ್ಟ್ ಅಥಾರಿಟಿಯಲ್ಲಿ ಉದ್ಯೋಗಾವಕಾಶ : ಇಂದೇ ಅರ್ಜಿ ಆಹ್ವಾನ

ದೇಶದ ಪ್ರತಿಷ್ಠಿತ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾವು 185 ಹುದ್ದೆಗಳ (Jobs in Airport Authority) ನೇಮಕಾತಿಗೆ ಅಧಿಕೃತ ಅರ್ಜಿ ಆಹ್ವಾನಿಸಿದೆ. ಅಪ್ರೆಂಟಿಸ್ ತರಬೇತುದಾರ ಹುದ್ದೆಗಳು ಇವಾಗಿದ್ದು,

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ (Jobs in Airport Authority) ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಹುದ್ದೆಗಳ ವಿವರ
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆ : 22
ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆ : 90
ITI ಟ್ರೇಡ್ ಅಪ್ರೆಂಟಿಸ್ ಹುದ್ದೆ : 73

ವಿದ್ಯಾರ್ಹತೆ
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆ : ಪದವಿ / BE
ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆ : ಡಿಪ್ಲೊಮ
ITI ಟ್ರೇಡ್ ಅಪ್ರೆಂಟಿಸ್ ಹುದ್ದೆ :ITI

ನೇಮಕಾತಿ ವಿಧಾನ: ಅಂಕಗಳ ಆಧಾರದಲ್ಲಿ ಆಯ್ಕೆ ಪಟ್ಟಿ ಸಿದ್ಧಪಡಿಸಿ ನೇಮಕ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 16-11-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 03-12-2023

ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 26 ವರ್ಷ. ವರ್ಗಾವಾರು ವಯಸ್ಸಿನ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ : ಅರ್ಹ ಅಭ್ಯರ್ಥಿಗಳು ನ್ಯಾಷನಲ್ ಅಪ್ರೆಂಟಿಸ್ ಟ್ರೈನಿಂಗ್ ಸ್ಕೀಮ್ ಪೋರ್ಟಲ್ನಲ್ಲಿ ರಿಜಿಸ್ಟ್ರೇಷನ್ ಆಗಬೇಕು. ನಂತರ AAI ವೆಬ್ಸೈಟ್ ಅಥವಾ

https://www.apprenticeshipindia.gov.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ವಿಳಾಸ : https://www.aai.aero/

ಇದನ್ನು ಓದಿ: ಸ್ಮಾರ್ಟ್​ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿಟ್ಟು ಉಪಯೋಗಿಸುತ್ತೀರಾ? ಹಾಗಾದ್ರೆ ಇದರಿಂದಾಗುವ ಪ್ರಯೋಜನಗಳೇನು?

Exit mobile version