ಮಕ್ಕಳು ಅಥವಾ ವೃದ್ಧರು ಎಂದೆನ್ನದೆ ಎಲ್ಲಾ ವಯಸ್ಸಿನ ಜನರು (dark mode in smartphone) ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದು, ಹೀಗೆ ಬಳಸುವಾಗ ಡಾರ್ಕ್
ಮೋಡ್ನಲ್ಲಿ ಇಟ್ಟರೆ ತುಂಬಾ ಒಳ್ಳೆಯದಾಗಿದ್ದು, ಇದು ಅನೇಕ ಉಪಯುಕ್ತ (dark mode in smartphone) ಪ್ರಯೋಜನಗಳನ್ನು ನೀಡುತ್ತದೆ.
ಪ್ರತಿಯೊಂದು ಫೋನ್ನಲ್ಲಿ ಡಾರ್ಕ್ ಮೋಡ್ ಆಯ್ಕೆಯನ್ನು ಕಂಪನಿಗಳು ತಮ್ಮ ಬಳಕೆದಾರರ ಅನುಕೂಲಕ್ಕಾಗಿ ಒದಗಿಸುತ್ತವೆ. ಆದರೆ, ಅನೇಕ ಜನರು ಈ ವೈಶಿಷ್ಟ್ಯವನ್ನು ಬಳಸುವುದಿಲ್ಲ
ಅಥವಾ ಅವರಿಗೆ ಈ ವೈಶಿಷ್ಟ್ಯದ ಬಗ್ಗೆ ತಿಳಿದಿರುವುದಿಲ್ಲ. ನೀವು ಸ್ಮಾರ್ಟ್ಫೋನ್ ಅನ್ನು ಡಾರ್ಕ್ ಮೋಡ್ನಲ್ಲಿಟ್ಟು ಉಪಯೋಗಿಸುತ್ತಿದ್ದರೆ ಇದು ಒಳ್ಳೆಯ ವಿಚಾರ.
ನಿಮ್ಮ ಕಣ್ಣುಗಳ ಸುರಕ್ಷತೆಗಾಗಿ ಈ ವೈಶಿಷ್ಟ್ಯವನ್ನು ಸ್ಮಾರ್ಟ್ಫೋನ್ನಲ್ಲಿ ಒದಗಿಸಲಾಗಿದೆ. ಇದನ್ನು ಪ್ರತಿಯೊಬ್ಬ ಬಳಕೆದಾರರು ಬಳಸಬೇಕು. ಮುಖ್ಯವಾಗಿ ಸ್ಮಾರ್ಟ್ಫೋನ್ಗಳಿಂದಾಗಿ ಮಕ್ಕಳು
ಕನ್ನಡಕವನ್ನು ಧರಿಸುವ ಪ್ರಸಂಶೆ ಬರುವುದಿಲ್ಲ.
ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬೀರುವುದಿಲ್ಲ ಸ್ಮಾರ್ಟ್ಫೋನ್ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಿದ ನಂತರ, ಡಿಸ್ ಪ್ಲೇ ಮೇಲೆ ಗೋಚರಿಸುವ ಎಲ್ಲ ವಿಷಯಗಳು ಕಪ್ಪು ಬಣ್ಣದಲ್ಲಿ ಇರುತ್ತದೆ.
ಇದು ನಿಮ್ಮ ಕಣ್ಣುಗಳ ಮೇಲೆ ಹೆಚ್ಚು ಒತ್ತಡವನ್ನು ಬೀರುವುದಿಲ್ಲ. ಇದರ ಹೊರತಾಗಿ ಡಾರ್ಕ್ ಮೋಡ್ ಆನ್ ಮಾಡಿದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾಂಟ್ರಾಸ್ಟ್ ಅನ್ನು ಹೆಚ್ಚಿಸಬಹುದು ಅಥವಾ
ಕಡಿಮೆ ಮಾಡಬಹುದು.
ಕಡಿಮೆ ಬ್ಯಾಟರಿ ಬಳಕೆ
ಹೆಚ್ಚಿನ ಜನರು ಮೊಬೈಲ್ ಮೇಲೆ ಅವಲಂಬಿತರಾಗಿದ್ದು, ಇದರಿಂದಾಗಿ ದಿನವಿಡೀ ಮೊಬೈಲ್ ಬಳಸುತ್ತಾರೆ. ಹೀಗಾಗಿ ಇದು ಬ್ಯಾಟರಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಿಮ್ಮ
ಫೋನ್ನಲ್ಲಿ ನೀವು ಡಾರ್ಕ್ ಮೋಡ್ ಅನ್ನು ಆನ್ ಮಾಡಿದರೆ, ಸ್ಮಾರ್ಟ್ಫೋನ್ ಬ್ಯಾಟರಿ ಬೇಗನೆ ಖಾಲಿ ಆಗುವುದಿಲ್ಲ.
ಸ್ಪಷ್ಟ ಮಾಹಿತಿ
ಡಾರ್ಕ್ ಮೋಡ್ ಅನ್ನು ಆನ್ ಮಾಡಿದ ನಂತರ, ಸ್ಮಾರ್ಟ್ಫೋನ್ನಲ್ಲಿರುವ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ನೀವು ಯಾವುದೇ ವಿಷಯವನ್ನು ಸುಲಭವಾಗಿ ಓದಬಹುದು.
ನಿದ್ರೆಯ ಸಮಸ್ಯೆ
ಡಾರ್ಕ್ ಮೋಡ್ ಅನ್ನು ಆನ್ ಮಾಡಿದ ನಂತರ, ಇದು ಡಿಸ್ ಪ್ಲೇಯಿಂದ ಹೊರಸೂಸುವ ನೀಲಿ ಬೆಳಕನ್ನು ಕಡಿಮೆ ಮಾಡುತ್ತದೆ. ನೀವು ಫೋನ್ ಅನ್ನು ಡಾರ್ಕ್ ಮೋಡ್ನಲ್ಲಿ ಬಳಸದಿದ್ದರೆ,
ನೀವು ನಿದ್ದೆಯ ಸಮಸ್ಯೆಯನ್ನು ಕೂಡ ಎದುರಿಸಬಹುದು.
ಇದನ್ನು ಓದಿ: ಖಾಸಗಿ ಬಸ್ ಮಾಲೀಕರಿಂದ 2 ಕೋಟಿ 13 ಲಕ್ಷ ರೂ. ದಂಡ, 1470 ಬಸ್ ಮೇಲೆ ಕೇಸ್: ಆರ್ಟಿಓ
- ಭವ್ಯಶ್ರೀ ಆರ್ ಜೆ