Jobs in SBI : ದೇಶದ ಪ್ರತಿಷ್ಠಿತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (Jobs in SBI 2024) 8283 ಜೂನಿಯರ್ ಅಸೋಸಿಯೇಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ
ಅಧಿಸೂಚನೆ (Jobs in SBI 2024) ಬಿಡುಗಡೆ ಮಾಡಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ವಿವರ ಇಲ್ಲಿದೆ.
ನೇಮಕಾತಿ ಬ್ಯಾಂಕ್ : ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ)
ಹುದ್ದೆಯ ಹೆಸರು: ಜೂನಿಯರ್ ಅಸೋಸಿಯೇಟ್
ಹುದ್ದೆಗಳ ಸಂಖ್ಯೆ : 8283
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ : 450
ಶೈಕ್ಷಣಿಕ ಅರ್ಹತೆ :
ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ
ಪದವಿಯ ಅಂತಿಮ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ :
ದಿನಾಂಕ 01-04-2023 ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು.
ವರ್ಗಾವಾರು ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ : ರೂ.17900 – 47920.
ಅರ್ಜಿ ಶುಲ್ಕ ವಿವರ :
GM / OBC / EWS ಅಭ್ಯರ್ಥಿಗಳಿಗೆ 750ರೂ.ಗಳು
ಆಯ್ಕೆ ಪ್ರಕ್ರಿಯೆ : ಆನ್ಲೈನ್ ಮೂಲಕ ಪ್ರಿಲಿಮ್ಸ್ ಪರೀಕ್ಷೆ, ಮೇನ್ಸ್ ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 17-11-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 07-12-2023
ಸೂಚನೆ : ಅರ್ಜಿ ಸಲ್ಲಿಕೆಗೆ https://sbi.co.in/web/careers ವೆಬ್ಸೈಟ್ಗೆ ಭೇಟಿ ನೀಡಬಹುದು. ಒಬ್ಬ ಅಭ್ಯರ್ಥಿ ಒಂದು ರಾಜ್ಯದ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ: ರೋಹಿತ್ ಶರ್ಮಾ ವಿರುದ್ದ ಆರೋಪ: ಟಾಸ್ ವೇಳೆ ಮೋಸ ಎಂದು ಸಿಕಂದರ್ ಬಖ್ತ್ ಗಂಭೀರ ಆರೋಪ