ಜಾನ್ಸನ್ ಅಂಡ್ ಜಾನ್ಸನ್ ಅವರ ಕೋವಿಡ್ ಲಸಿಕೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ

ಹೊಸದಿಲ್ಲಿ, ಆ. 07: ಜಾನ್ಸನ್‌ ಅಂಡ್‌ ಜಾನ್ಸನ್‌ ಅಭಿವೃದ್ಧಿ ಪಡಿಸಿರುವ ಏಕ ಡೋಸ್‌ ಕೋವಿಡ್‌-19 ಲಸಿಕೆ ಬಳಕೆಗೆ ಭಾರತ ಅನುಮತಿ ನೀಡಿದೆ.

ಭಾರತದಲ್ಲಿ ಈ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಜಾನ್ಸನ್‌ ಅಂಡ್‌ ಜಾನ್ಸನ್‌ ಕಂಪೆನಿ ಆಗಸ್ಟ್ 5ರಂದು ಮನವಿ ಸಲ್ಲಿಸಿತ್ತು. ಹೀಗಾಗಿ ಭಾರತದಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಬಯಾಲಾಜಿಕಲ್ ಇ ಲಿಮಿಟೆಡ್ ಸಹಯೋಗದೊಂದಿಗೆ ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ ಏಕ ಡೋಸ್‌ನ ಕೋವಿಡ್ ಲಸಿಕೆ ಪೂರೈಕೆ ಮಾಡುವುದು ಮಹತ್ವದ ಮೈಲಿಗಲ್ಲಾಗಿದೆ ಎಂದು ಕಂಪೆನಿಯ ವಕ್ತಾರರು ಹೇಳಿದ್ದರು.

ಭಾರತದಲ್ಲಿ ಏಕ ಡೋಸ್ ಕೋವಿಡ್ ಲಸಿಕೆ ನೀಡಲು ಬದ್ಧರಾಗಿದ್ದೇವೆ ಎಂದೂ ಸಹ ತಿಳಿಸಿದ್ದರು.

Exit mobile version