ಕಾಂಗ್ರೆಸ್ ಈಗ ‘ಅಣ್ಣ-ತಂಗಿ’ ಪಕ್ಷವಾಗಿದೆ : ಜೆ.ಪಿ.ನಡ್ಡಾ!

JP Nadda

ಕಾಂಗ್ರೆಸ್ ಪಕ್ಷ(Congress Party) ಪ್ರಜಾಸತ್ತಾತ್ಮಕವೂ ಅಲ್ಲ, ಭಾರತೀಯವೂ ಅಲ್ಲ, ರಾಷ್ಟ್ರೀಯವೂ ಅಲ್ಲ. ಅದು ಈಗ ‘ಭಾಯಿ-ಬೆಹನ್’ (ಅಣ್ಣ-ತಂಗಿ) ಪಕ್ಷವಾಗಿದೆ ಎಂದು ಬಿಜೆಪಿ(BJP) ರಾಷ್ಟ್ರೀಯ ಅಧ್ಯಕ್ಷ(President) ಜೆ.ಪಿ. ನಡ್ಡಾ(JP Nadda) ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ(NewDelhi) ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಜನನದ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ನಮ್ಮ ಸಂವಿಧಾನದಲ್ಲೇ ಹೇಳಲಾಗಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಕುಟುಂಬದ ಆಳ್ವಿಕೆಯಿರುವ ಅನೇಕ ಪ್ರಾದೇಶಿಕ ಪಕ್ಷಗಳಲ್ಲಿ ಜನನದ ಆಧಾರದ ಮೇಲೆ ನಾಯಕತ್ವವನ್ನು ನೀಡಲಾಗುತ್ತಿದೆ. ಭಾರತದಲ್ಲಿ ರಾಜಕೀಯ ನಾಯಕತ್ವ ಜನನದ ಆಧಾರದ ಮೇಲೆ ನೀಡಲಾಗುತ್ತಿದೆ. ಕುಟುಂಬ ರಾಜಕೀಯ ಇಂದು ದೇಶದ ನಾಯಕತ್ವವನ್ನು ನಿರ್ಧರಿಸುತ್ತಿದೆ.

ಇದು ಅತ್ಯಂತ ಅಪಾಯಕಾರಿ. ಕುಟುಂಬ ಕೇಂದ್ರೀತ ರಾಜಕೀಯ ಪಕ್ಷಗಳ ಆಡಳಿತವು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ. ಕುಟುಂಬ ಕೇಂದ್ರೀತ ರಾಜಕೀಯ ಪಕ್ಷಗಳಲ್ಲಿ ಒರ್ವ ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇಂತ ಪಕ್ಷಗಳಲ್ಲಿ ಸಿದ್ದಾಂತದ ಕೊರತೆಯಿದ್ದು, ವ್ಯಕ್ತಿಯ ಹಿತಾಸಕ್ತಿ ಸರ್ವೋಚ್ಚವಾಗಿರುತ್ತದೆ ಎಂದರು.

ಇನ್ನು ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಆರೋಪಿಸಿದ ಅವರು, ಸ್ವಾತಂತ್ರ್ಯ ನಂತರ ರಾಷ್ಟ್ರೀಯ ರಾಜಕೀಯದಲ್ಲಿ ಕುಟುಂಬ ಪ್ರಾಬಲ್ಯ ಹೊಂದಿದ್ದ ಕಾಲದಲ್ಲಿ, ಪ್ರಾದೇಶಿಕ ನಾಯಕರ ಹಿತಾಸಕ್ತಿಗಳನ್ನು ನಿರ್ಲಕ್ಷ್ಯ ಮಾಡಿ, ಪ್ರಾದೇಶಿಕ ಆಕಾಂಕ್ಷಿಗಳಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಪ್ರಾದೇಶಿಕ ನಾಯಕತ್ವದ ಕೂಗು ಬಲಗೊಂಡಿದೆ.

ಆದರೆ ಇಂದು ನಮ್ಮ ಸರ್ಕಾರ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ತತ್ವದೊಂದಿಗೆ ಪ್ರಾದೇಶಿಕ ಹಿತಾಸಕ್ತಿಗಳಿಗೆ ಗೌರವ ನೀಡಿದೆ. ಪ್ರಾದೇಶಿಕ ನಾಯಕರಿಗೆ ಅವಕಾಶ ನೀಡುವುದರೊಂದಿಗೆ ಕೇಂದ್ರವನ್ನು ಬಲಿಷ್ಠಗೊಳಿಸಿದೆ ಎಂದರು.

Exit mobile version