Bengaluru: ರಾಜ್ಯದ ಮಹಿಳೆಯರು ಭಾರೀ ನಿರೀಕ್ಷೆಯಿಂದ ಕಾಯುತ್ತಿರುವ ಗೃಹ ಲಕ್ಷ್ಮಿ ಯೋಜನೆಗೆ (July 19 gruhalakshmi scheme) ಅರ್ಜಿ ಸ್ವೀಕಾರ ಆರಂಭ ಜು.19ರಿಂದ ಜಾರಿಯಾಗಲಿದೆ.

ಇದರ ಕುರಿತಂತೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜು.15ರ ಶನಿವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಬುಧವಾರದಿಂದ ಅರ್ಜಿ
ಸಲ್ಲಿಕೆ ಶುರುವಾಗುತ್ತದೆ. ಸೇವಾ ಕೇಂದ್ರಗಳಲ್ಲಿ ಅಥವಾ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಪಡೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮತ್ತೊಂದು ನೀರಿಕ್ಷೆಯ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯು (ಜು. 19) ಜಾರಿಯಾಗಲಿದೆ. ಈ ಯೋಜನೆಯಡಿ ಪ್ರತಿ ಮನೆಯ ಒಡತಿಗೆ ಪ್ರತಿ
ತಿಂಗಳು 2 ಸಾವಿರ ರೂ.ಗಳನ್ನು ಆ.18ರಿಂದ ನೀಡಲಾಗುತ್ತದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಹಿಳಾ ಮತ್ತು ಕುಟುಂಬ ಕಲ್ಯಾ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ವಿಚಾರ
ತಿಳಿಸಿದರು. ಅರ್ಜಿ ಸಲ್ಲಿಕೆಗೆ ಯಾವುದೇ ಡೆಡ್ಲೈನ್ ಇಲ್ಲ ಎಂದು ಇದೆ ವೇಳೆ (July 19 gruhalakshmi scheme) ಹೇಳಿದರು.
ಸರ್ಕಾರಿ ಬಿಲ್ ಪಾವತಿ ಹಾಗೂ ಇತರ ಸೇವಾ ಕೇಂದ್ರಗಳಾದ ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳು, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರಗಳು ಹಾಗೂ ತಾಲೂಕು ಕಚೇರಿಗಳು,
ನಾಡ ಕಚೇರಿಗಳಲ್ಲಿ ಈ ಯೋಜನೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅವರು ಹೇಳಿದರು . ಅರ್ಜಿದಾರರು ಆನ್ ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯು ತೆರಿಗೆದಾರರಲ್ಲದ, ಜಿಎಸ್ ಟಿ ಪಾವತಿಸದವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಆನ್ ಲೈನ್ ಫೆಸಿಲಿಟಿ ಇಲ್ಲದ ಕಡೆ ಜನಪ್ರತಿನಿಧಿಗಳು’ ಬರುತ್ತಾರೆ
ಆನ್ ಲೈನ್ ಸೌಲಭ್ಯಗಳು ಇಲ್ಲದ ಕಡೆಗಳಲ್ಲಿ ಅಂದರೆ ಗ್ರಾಮಗಳಲ್ಲಿ ಸರ್ಕಾರದಿಂದ ಕಳಿಸಲಾಗುವ ಜನಪ್ರತಿನಿಧಿಗಳು ಪ್ರತಿ ಮನೆಗಳಿಗೆ ಹೋಗಿ ದಾಖಲೆಗಳನ್ನು ಪರಿಶೀಲಿಸಿ ಗೃಹ ಲಕ್ಷ್ಮಿ
ಯೋಜನೆಗೆ ಅರ್ಜಿಯನ್ನು ಸ್ವೀಕರಿಸಲಿದ್ದಾರೆ. ಜನಪ್ರತಿನಿಧಿಗಳು ಅರ್ಜಿ ಸ್ವೀಕರಿಸಿದ ಕೆಲ ದಿನಗಳ ನಂತರ ಆ ಮನೆಗಳಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ಬಗ್ಗೆ ದೃಢೀಕರಣ ಪತ್ರವನ್ನು
ಜನಪ್ರತಿನಿಧಿಗಳ ಮೂಲಕ ಅಥವಾ ಅಂಚೆಯ ಮೂಲಕ ಕಳುಹಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಬೇಕಾಗುವ ದಾಖಲೆಗಳು ?
ಈ ಯೋಜನೆಗೆ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ವಿವರಿಸಿದ ಅವರು, ಎಲ್ಲಾ ಪಡಿತರ ಕಾರ್ಡುಗಳಲ್ಲಿ ಮನೆ ಯಜಮಾನತಿ ಯಾರು ಎಂದು ನಮೂದಾಗಿರುತ್ತದೋ, ಅವರ ಹೆಸರಿಗೇ
ಹಣ ನೀಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಅರ್ಜಿ ಸಲ್ಲಿಸಲು ಹೋಗುವವರು ತಮ್ಮ ಜೊತೆ ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಗಳನ್ನು
ತಮ್ಮೊಂದಿಗೆ ಕೊಂಡೊಯ್ಯಬೇಕು. ಒಂದು ವೇಳೆ ಆಧಾರ್ ಕಾರ್ಡ್ ಗಳು ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ ಅಂತಾದರೆ ಅರ್ಜಿ ಸಲ್ಲಿಕೆಯ ಕೇಂದ್ರಕ್ಕೆ ಪಡಿತರ ಚೀಟಿ, ಆಧಾರ್ ಕಾರ್ಡ್, ತಮ್ಮ ಬ್ಯಾಂಕ್
ಖಾತೆಯ ಪಾಸ್ ಪುಸ್ತಕ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.
ಇದನ್ನು ಓದಿ: ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’
ಅರ್ಜಿ ಸಲ್ಲಿಕೆಗೆ ಸಮಯ?
ಸಂಜೆ 5 ಗಂಟೆಯಿಂದ 7 ರವರೆಗೆ ಅರ್ಜಿ ಸಲ್ಲಿಕೆಯನ್ನು ಮಾಡಬಹುದು. ಪಡಿತರ ಚೀಟಿಯಲ್ಲಿರುವ ಮನೆ ಯಜಮಾನ್ತಿಯ ಹೆಸರಿಗೆ ಲಿಂಕ್ ಆಗಿರುವ ಮೊಬೈಲ್ ಗೆ ಸದ್ಯದಲ್ಲೇ ಸರ್ಕಾರದಿಂದ ಮೆಸೇಜ್ ಬರಲಿದೆ.
ಮನೆಯ ಗೃಹಲಕ್ಷ್ಮಿಯು ವಾಸಿಸುವ ಸ್ಥಳದಿಂದ ಹತ್ತಿರದಲ್ಲಿರುವ ಸರ್ಕಾರಿ ಸೇವಾ ಕೇಂದ್ರಗಳಿಗೆ ಯಾವ ದಿನ, ಯಾವ ಸಮಯಕ್ಕೆ ಹೋಗಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಾವಣೆ ಮಾಡಿಸಿಕೊಳ್ಳಬೇಕು ಎಂಬ
ಸಂದೇಶ ಬರಲಿದೆ. ಆ ಸಂದೇಶವನ್ನು ಆಧರಿಸಿ ಮನೆಯೊಡತಿಯು ಸೂಕ್ತ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಎಂದರು.
ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡದವರು, ಅರ್ಜಿ ಸಲ್ಲಿಸುವಾಗ ತಮ್ಮೊಂದಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ಮೊಬೈಲ್ ಜೊತೆಗೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನೂ ಕೊಂಡೊಯ್ಯಬೇಕು.
ಸಿಡಿಪಿಒಗಳು ಈ ಬಗ್ಗೆ ಪ್ರತ್ಯೇಕವಾಗಿ ಅರ್ಜಿಗಳನ್ನು ತುಂಬಿಕೊಳ್ಳುತ್ತಾರೆ. ಈ ಅರ್ಜಿಗಳನ್ನು ತಹಶೀಲ್ಡಾರ್, ತಾಲೂಕು ಪಂಚಾಯ್ತಿ ನಿರ್ವಣಾಧಿಕಾರಿಗಳು ಕ್ರಾಸ್ ಚೆಕ್ ಮಾಡುತ್ತಾರೆ. ಪಡಿತರ ಚೀಟಿಗಳಲ್ಲಿ
ನಮೂದಾಗಿರುವ ಮನೆಯ ಯಜಮಾನತಿ ಹೆಸರಲ್ಲೇ ಬ್ಯಾಂಕ್ ಖಾತೆ ಇದೆ ಎಂಬುದನ್ನು ಕನ್ಫರ್ಮ್ ಮಾಡಿಕೊಂಡು ಹಣ ಹಾಕುವಂತೆ ಶಿಫಾರಸು ಮಾಡುತ್ತಾರೆ. ಅವರ ಶಿಫಾರಸಿನ ಆಧಾರದ ಮೇಲೆ
ಮನೆಯ ಒಡತಿಗೆ ಹಣ ಸಿಗುತ್ತದೆ ಎಂದು ತಿಳಿಸಿದರು.
ಹೆಲ್ಪ್ ಲೈನ್ ಸಂಖ್ಯೆಗಳು:
ಈ ಯೋಜನೆಯನ್ನು ಎಲ್ಲಿ ನೋಂದಾಯಿಸಿಕೊಳ್ಳಬೇಕು, ಎಲ್ಲಿ ಹೋಗಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು, ಯೋಜನೆಯ ಅರ್ಜಿ ಸಲ್ಲಿಕೆ ಬಗ್ಗೆ ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು
ಸರ್ಕಾರ ಟೋಲ್ ಫ್ರೀ ಸಂಖ್ಯೆಯೊಂದನ್ನು ಬಿಡುಗಡೆ ಮಾಡಲಾಗಿದೆ. ಆ ನಂಬರ್ ಈ ರೀತಿಯಾಗಿದ್ದು 8147500500 ಹಾಗೂ 1902 ಸಂಖ್ಯೆಗೆ ಕರೆ ಮಾಡಿ, ಯೋಜನೆಯ ಫಲಾನುಭವಿಗಳು ತಮಗೆ
ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಈ ಯೋಜನೆಗೆ ಸಂಬಂಧಪಟ್ಟಂತೆ ಯಾರಾದರೂ ಲಂಚ ಕೇಳಿದರೆ ಅಂಥ ಸಂದರ್ಭಗಳಲ್ಲಿಯೂ ಜನರು ಈ ಮೇಲಿನ ಸಂಖ್ಯೆಗೆ
ಕರೆ ಮಾಡಿ ತಮ್ಮ ದೂರು ದಾಖಲಿಸಬಹುದು ಎಂದು ಸಚಿವರು ವಿವರಿಸಿದರು.
ಭವ್ಯಶ್ರೀ ಆರ್.ಜೆ