ಪಾಕ್‌ ಮಣಿಸಿ ಏಷ್ಯಾಕಪ್ ಗೆದ್ದ ಭಾರತದ ಜೂನಿಯರ್ ಹಾಕಿ ತಂಡ

Oman : ಭಾರತದ ಜೂನಿಯರ್ ಹಾಕಿ ತಂಡವು (hockey team) ಎದುರಾಳಿಯದ ಪಾಕಿಸ್ತಾನ ತಂಡವನ್ನು (Pakistan team) 2-1 ಅಂತರದಿಂದ ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಭಾರತವು ಜೂನಿಯರ್ ಏಷ್ಯಾಕಪ್ ಪ್ರಶಸ್ತಿಯನ್ನು (Junior Asia Cup Award) ಗೆದ್ದುಕೊಂಡಿದೆ. ಭಾರತ-ಪಾಕಿಸ್ತಾನ ತಂಡಗಳು 8 ವರ್ಷಗಳ (Junior Asia Cup Award) ಸುದೀರ್ಘ ಕಾಯುವಿಕೆಯ ನಂತರ ಈ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು.

ಹೀಗಾಗಿ ಎಲ್ಲರೂ ಕಾತುರದಿಂದ ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು.

ಆದರೆ ಈ ಎರಡೂ ತಂಡಗಳು ಮುಖಾಮುಖಿಯಾದ ಮೊದಲ 19 ನಿಮಿಷಗಳಲ್ಲಿ ಭಾರತ ತಂಡವು,

ಪಾಕಿಸ್ತಾನಕ್ಕೆ ತರಬೇತಿ ನೀಡಿದ್ದ ಭಾರತದ ಮಾಜಿ ಕೋಚ್ : ಅರಿಜಿತ್ ಸಿಂಗ್ 19ನೇ ನಿಮಿಷದಲ್ಲಿ,ಮತ್ತು ಅಂಗದ್ ಬೀರ್ ಸಿಂಗ್ 12ನೇ ನಿಮಿಷದಲ್ಲಿ ಭಾರತದ ಪರ ಗೋಲು ಗಳಿಸಿದರು.

ಪಾಕಿಸ್ತಾನಿ ತಂಡದ ಪರ ಆಟಗಾರ ಬಶರತ್ ಅಲಿ ಭಾರತದ ಮಾಜಿ ಕೋಚ್ ರೋಲೆಂಟ್ ಓಲ್ಟ್‌ಮನ್ಸ್ ಅವರಡಿಯಲ್ಲಿ ತರಬೇತಿ ಪಡೆದಿದ್ದರು, ಇವರು 37ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು.

ಪಾಕ್ ಪರ ಇವರನ್ನು ಹೊರತುಪಡಿಸಿದರೆ ಇನ್ಯಾವುದೆ ಗೋಲು ಸಿಡಿಯಲಿಲ್ಲ. ಅಂತಿಮವಾಗಿ ಭಾರತವು 2-1 ಗೋಲುಗಳಿಂದ ಪಾಕ್ ತಂಡವನ್ನು ಮಣಿಸಿ (Junior Asia Cup Award) ದಾಖಲೆಯಾಗಿ 4ನೇ ಭಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.

ಇದಕ್ಕೂ ಮುನ್ನ 2004, 2005 ಮತ್ತು 2015ರಲ್ಲಿ ಭಾರತವು ಪ್ರಶಸ್ತಿ ಗೆದ್ದಿತ್ತು.

ಭಾರತ ಪಾಕಿಸ್ತಾನ ಫೈನಲ್‌ನಲ್ಲಿ ನಾಲ್ಕನೇ ಹಣಾಹಣಿ :
ಭಾರತ (India) ಮತ್ತು ಪಾಕಿಸ್ತಾನ ಎರಡೂ ತಂಡಗಳು ಇದಕ್ಕೂ ಮುನ್ನ 3 ಬಾರಿ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು.

2004ರಲ್ಲಿ ಭಾರತ ತಂಡವು ಗೆದ್ದಿತ್ತು, ಇದಕ್ಕೂ ಮುನ್ನ 1996ರಲ್ಲಿ ಪಾಕಿಸ್ತಾನ ಗೆದ್ದಿತ್ತು.ಅಷ್ಟೇ ಅಲ್ಲದೆ 2015 ರಲ್ಲಿ ಸಹ 6-2 ಅಂತರದಲ್ಲಿ ಭಾರತ ಫೈನಲ್‌ನಲ್ಲಿ ಪಾಕ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು.

ಕೊನೆಗೂ ಪಾಕ್ ತಂತ್ರ ಫಲಿಸಲಿಲ್ಲ :
ಭಾರತ ತಂಡವು ಪಂದ್ಯದ ಆರಂಭದಿಂದಲೂ ಸಹ ಪಾಕಿಸ್ತಾನದ ಪ್ರತಿಯೊಂದು ಪ್ರಯತ್ನವನ್ನು ವಿಫಲಗೊಳಿಸಿತು.

ಪಾಕಿಸ್ತಾನಕ್ಕೆ 50ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ (Penalty corner) ಸಿಕ್ಕಿತ್ತಾದರೂ ಆ ಅವಕಾಶವನ್ನು ಬಳಸಿಕೊಳ್ಳಲು ಪಾಕ್ ತಂಡಕ್ಕೆ ಸಾಧ್ಯವಾಗಲಿಲ್ಲ.

ಪಾಕ್ ತಂಡಕ್ಕೆ 2 ಪೆನಾಲ್ಟಿ ಕಾರ್ನರ್‌ ಆ ಬಳಿಕ 4 ನಿಮಿಷಗಳ ನಂತರ ಸಿಕ್ಕಿತ್ತಾದರೂ ಭಾರತ ತಂಡ ಅದನ್ನು ಗೋಲಾಗಿ ಪರಿವರ್ತಿಸಲು ಅವಕಾಶ ನೀಡಲಿಲ್ಲ.

ಇದನ್ನೂ ಓದಿ : https://vijayatimes.com/congress-government-guarantees/

7ನೇ ನಿಮಿಷದಲ್ಲಿ ಪಾಕಿಸ್ತಾನ ತನ್ನ ಖಾತೆ ತೆರೆಯಿತು :

ಭಾರತ ಪಾಕಿಸ್ತಾನದ ಮೇಲೆ ಮೊದಲ ಕ್ವಾರ್ಟರ್‌ನಲ್ಲಿಯೇ (First quarter) ಒತ್ತಡ ಹೇರಿತು. ಏಕಪಕ್ಷೀಯವಾಗಿ ವಿರಾಮದ ವೇಳೆಗೆ ಭಾರತ 2-0 ಮುನ್ನಡೆ ಸಾಧಿಸಿತು.

ಪಾಕಿಸ್ತಾನ ತಂಡಕ್ಕೆ ಹಾಫ್ ಟೈಮ್ಗೂ ಮುನ್ನವೇ ಖಾತೆ ತೆರೆಯಲು ಅವಕಾಶವಿದ್ದರೂ ಭಾರತದ ಗೋಲ್ ಕೀಪರ್ ಮೋಹಿತ್ ಅದಕ್ಕೆ ಅವಕಾಶ ನೀಡಲಿಲ್ಲ.

ಆದರೆ 7ನೇ ನಿಮಿಷದಲ್ಲಿ ಮೂರನೇ ಕ್ವಾರ್ಟರ್ನ ಪಾಕಿಸ್ತಾನ ತನ್ನ ಖಾತೆ ತೆರೆಯಿತು.

ಲೀಗ್ ಹಂತದಲ್ಲೂ ಕೂಡ ಪೈಪೋಟಿ :
ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಈ ಫೈನಲ್ ಪಂದ್ಯಕ್ಕೂ ಮೊದಲು 2023 ರ ಜೂನಿಯರ್ ಏಷ್ಯಾಕಪ್ ಲೀಗ್ (Junior Asia Cup League) ಹಂತದಲ್ಲೂ ಕೂಡ ಮುಖಾಮುಖಿಯಾಗಿದ್ದವು.

ಆದರೆ ಒಂದೊಂದು ಗೋಲು ಬಾರಿಸುವ ಮೂಲಕ ಆ ಪಂದ್ಯದಲ್ಲಿ ಉಭಯ ತಂಡಗಳು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದವು.

ಈ ಉಭಯ ತಂಡಗಳು ಇನ್ನುಳಿದಂತೆ ಲೀಗ್ ಹಂತದಲ್ಲಿ ಒಂದೂ ಪಂದ್ಯ ಸೋತಿರಲಿಲ್ಲ.ಲೀಗ್ ಹಂತದಲ್ಲಿ ಭಾರತ ತಂಡವು ಅತ್ಯುತ್ತಮ ಗೋಲು ಸರಾಸರಿಯ ಆಧಾರದ ಮೇಲೆ ಅಗ್ರಸ್ಥಾನ ಪಡೆದು ಫೈನಲ್ಗೆ ಎಂಟ್ರಿಕೊಟ್ಟಿತ್ತು.

Exit mobile version