ನಾನು ಕಣ್ಣು ಮಿಟುಕಿಸುತ್ತಿಲ್ಲ ; ಮುಖದ ಪಾರ್ಶ್ವವಾಯುದಿಂದ ಬಳಲುತ್ತಿದ್ದೇನೆ : ಜಸ್ಟಿನ್ ಬೈಬರ್!

ಕೆನಡಾದ(Canada) ಜನಪ್ರಿಯ ಗಾಯಕ ಜಸ್ಟಿನ್ ಬೈಬರ್(Justin Bieber) ಅವರು ತಮ್ಮ ಅಭಿಮಾನಿಗಳಿಗೆ ರಾಮ್ಸೆ ಹಂಟ್ ಸಿಂಡ್ರೋಮ್(Ramsay Hunt Syndrome) ಎಂಬ ಅಪರೂಪದ ಸಿಂಡ್ರೋಮ್ ಅನ್ನು ತಾವು ಹೊಂದಿದ್ದು, ಅದು ಮುಖದ ಪಾರ್ಶ್ವವಾಯುವಿಗೆ(Facial Paralysis) ಕಾರಣವಾಗಿದೆ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಲೈವ್(Instagram Live) ಬಂದು ಹೇಳಿಕೊಂಡಿದ್ದಾರೆ.

ಈ ಕಾರಣದಿಂದಾಗಿ, ಗ್ರ್ಯಾಮಿ ವಿಜೇತ ಜಸ್ಟಿನ್ ಬೀಬರ್ ಮುಖದ ಬಲಭಾಗವು ಪಾರ್ಶ್ವವಾಯುವಿಗೆ ಒಳಗಾಗಿದೆ ಎಂದು ಹೇಳಿದರು. ಶುಕ್ರವಾರ, ಜೂನ್ 10 ರಂದು ವೀಡಿಯೊವನ್ನು ಮಾಡಿದ ಅವರು, ಅಸ್ವಸ್ಥತೆಯನ್ನು ವಿವರಿಸಿದ್ದಾರೆ ಮತ್ತು ಅದಕ್ಕೆ ಪ್ರಮುಖ ಕಾರಣವನ್ನು ಹೇಳಿದ್ದಾರೆ. ಈ ವೀಡಿಯೊವನ್ನು ಪೋಸ್ಟ್ ಮಾಡುವ ಮುನ್ನ ದಯವಿಟ್ಟು ವೀಕ್ಷಿಸಿ ಎಂದು ಶೀರ್ಷಿಕೆಯಲ್ಲಿ(Caption) ಹೇಳಿದ್ದರು. ಮೇಯೊ ಕ್ಲಿನಿಕ್ ಪ್ರಕಾರ, ರಾಮ್ಸೆ ಹಂಟ್ ಸಿಂಡ್ರೋಮ್ ಮುಖದ ನರಗಳ ಮೇಲೆ ದಾಳಿ ಮಾಡುತ್ತದೆ ಮತ್ತು ಚಿಕನ್ಪಾಕ್ಸ್ಗೆ(Chicken Pox) ಕಾರಣವಾಗುವ ಅದೇ ವೈರಸ್ನಿಂದ ಉಂಟಾಗುತ್ತದೆ.

ವೀಡಿಯೊದಲ್ಲಿ, ಅವರು ಭಾಗಶಃ ಪಾರ್ಶ್ವವಾಯುವಿನ ಕಾರಣದಿಂದಾಗಿ ತನ್ನ ಮುಖದ ಬಲ ಅರ್ಧವನ್ನು ಹೇಗೆ ಚಲಿಸಬಹುದು ಎಂಬುದನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ. “ನನ್ನ ಮುಖದಿಂದ ನೀವು ನೋಡುವಂತೆ, ನಾನು ರಾಮ್ಸೆ ಹಂಟ್ ಸಿಂಡ್ರೋಮ್ ಎಂಬ ಈ ಸಿಂಡ್ರೋಮ್ ಅನ್ನು ಹೊಂದಿದ್ದೇನೆ ಮತ್ತು ಈ ವೈರಸ್‌ನಿಂದ ನನ್ನ ಕಿವಿಯಲ್ಲಿನ ಮುಖದ ನರಗಳ ಮೇಲೆ ಪ್ರಭಾವ ಬೀರಿದೆ ಮತ್ತು ಪಾರ್ಶ್ವವಾಯು ಉಂಟಾಗುತ್ತದೆ. ನಾನು ಕಣ್ಣು ಮಿಟುಕಿಸುತ್ತಿಲ್ಲ ಬದಲಾಗಿ ಖಾಯಿಲೆಯ ಕಾರಣ ಅದೇ ಪದೇ ಪದೇ ಮಿಟುಕಿಸುತ್ತಿದೆ ಎಂಬುದನ್ನು ತೋರಿಸಿದ್ದಾರೆ.

“ನನ್ನ ಮುಖದ ಈ ಭಾಗದಲ್ಲಿ ನಗಲು ಸಾಧ್ಯವಿಲ್ಲ. ಆದ್ದರಿಂದ ನನ್ನ ಮುಖದ ಈ ಭಾಗದಲ್ಲಿ ಸಂಪೂರ್ಣ ಪಾರ್ಶ್ವವಾಯು ಇದೆ ಎಂದು ಜಸ್ಟಿನ್ ವೀಡಿಯೊದಲ್ಲಿ ಸ್ಪಷ್ಟಪಡಿಸಿದ್ದಾರೆ.

Exit mobile version