ತಾರಕಕ್ಕೇರುತ್ತಿದೆ ಸಿದ್ದು-ಸುಧಾಕರ್‌ ಜಟಾಪಟಿ: ನಿಮ್ಮ ಬಳಿ ಏನಾದರೂ ದಾಖಲೆ ಇದ್ರೆ ಕೊಡಿ ಎಂದು ಸುಧಾಕರ್‌ ಸವಾಲು

Karnataka: ನಿಮ್ಮ ಬಳಿ ಏನಾದರೂ ದಾಖಲೆ ಇದ್ದರೆ ಅದನ್ನ ಜನರ ಮುಂದಿಡಿ. ನಿಮ್ಮ ಆರೋಪಗಳಲ್ಲಿ ಕೊಂಚವಾದರೂ(K Sudhakar slams Siddaramaiah) ಹುರುಳಿದ್ದರೆ ಸಕ್ಷಮ ಸಂಸ್ಥೆಗಳಿಗೆ ದೂರು ಸಲ್ಲಿಸಿ.

ಅದು ಬಿಟ್ಟು ಹೀಗೆ ಹಿಟ್ ಅಂಡ್ ರನ್ ರಾಜಕೀಯ ಮಾಡುವುದು ನಿಮ್ಮ ಘನತೆಗೆ ಸರಿಹೊಂದುವಂಥದ್ದಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರ(Siddaramaiah) ವಿರುದ್ದ ಸಚಿವ ಸುಧಾಕರ್‌(Dr.K Sudhakar) ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ಅವರು, ಕೊರೋನಾದಂತಹ(Corona) ಶತಮಾನದ ಭೀಕರ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿರ್ವಹಿಸಿ ನಾಡಿನ ಜನರನ್ನು ರಕ್ಷಿಸಿದ ಸಂತೃಪ್ತಿ ಇದೆ.

ಕೋವಿಡ್ ನಿರ್ವಹಣೆಯ ಖರ್ಚು ವೆಚ್ಚದ ಬಗ್ಗೆ ಪ್ರತೀ ಪೈಸೆಗೂ ಲೆಕ್ಕ ನೀಡಬಲ್ಲೆ. ಈ ಕುರಿತು ಶ್ವೇತ ಪತ್ರ ಹೊರಡಿಸಲೂ ಸಹ ನಮ್ಮ ಸರ್ಕಾರ ಸಿದ್ಧ.

ಕೊರೋನಾ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಳೆದ 3 ವರ್ಷಗಳಿಂದ ಹಾದಿ ಬೀದಿಯಲ್ಲಿ, ಟ್ವಿಟ್ಟರ್ ನಲ್ಲಿ ಬೊಬ್ಬೆ ಹೊಡೆಯುತ್ತಿದ್ದೀರಿ.

ನಿಮ್ಮ ಆರೋಪಗಳಿಗೆ ಸದನದಲ್ಲಿ ಉತ್ತರ ನೀಡಲು ಮುಂದಾದಾಗ ಸತ್ಯ ಕೇಳುವ ಧೈರ್ಯವಿಲ್ಲದೆ ಪಲಾಯನ ಮಾಡಿದಿರಿ ಎಂದು ಟೀಕಿಸಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, ಮಾನ್ಯ ಸಿದ್ದರಾಮಯ್ಯನವರೇ, ಪ್ರಜಾಧ್ವನಿ(Praja dhwani) ಯಾತ್ರೆ ಹೆಸರಿನಲ್ಲಿ ನಮ್ಮ ಚಿಕ್ಕಬಳ್ಳಾಪುರಕ್ಕೆ(Chikballapur) ಬಂದಿದ್ದ ನೀವು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು,

ಭರವಸೆಯನ್ನು ಜನರ ಮುಂದಿಡುವುದು ಬಿಟ್ಟು ಡಾ.ಸುಧಾಕರ್ ಅನ್ನ ಹೇಗಾದರೂ ಮಾಡಿ ಸೋಲಿಸಿ ಎಂದು ಜನರ ಬಳಿ ಅಂಗಲಾಚಿಕೊಂಡಿದ್ದೀರಿ.

ನಿಮ್ಮ ಹತಾಶ ಪರಿಸ್ಥಿತಿಯ ಬಗ್ಗೆ ನನಗೆ ಕನಿಕರವಿದೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: 3,455.39 ಕೋಟಿ ರೂ ಮೌಲ್ಯದ 59 ಕೈಗಾರಿಕಾ ಯೋಜನೆಗಳಿಗೆ ಕರ್ನಾಟಕ ಒಪ್ಪಿಗೆ ನೀಡಿದೆ : ಮುರುಗೇಶ್ ನಿರಾಣಿ

ಇದಕ್ಕೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಚಿಕ್ಕಬಳ್ಳಾಪುರದಲ್ಲಿ ನಡೆದ ʼಪ್ರಜಾಧ್ವನಿʼ ಯಾತ್ರೆಯಲ್ಲಿ ಮಾತನಾಡಿ, ಭ್ರಷ್ಟಾಚಾರ ಎಂದರೆ ಏನು ಗೊತ್ತಾ ಸುಧಾಕರ್‌?

ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ(K Sudhakar slams Siddaramaiah) ಮೂರು ಸಾವಿರ ಕೋಟಿ ರೂಪಾಯಿ ನುಂಗಿದ್ದಿರಲ್ಲಾ ಅದು ಭ್ರಷ್ಟಾಚಾರ.

ಈ ಸುಧಾಕರ್‌ ಸತ್ಯಹರಿಶ್ಚಂದ್ರರ ಸಂತಾನದವರಾಗಿದ್ದರೆ ಕೊರೊನಾ ಭ್ರಷ್ಟಾಚಾರದ ಬಗ್ಗೆ ಮರು ಅಡಿಟ್ ನಡೆಸಲು ಅನುಮತಿ ಯಾಕೆ ನಿರಾಕರಿಸಿದ್ದರು. ಇದು ಕಳ್ಳರ ಮನಸ್ಸು ಹುಳ್ಳಗೆ 2021-22 ರ ಕಾಲದ ಕೊರೊನಾ ಭ್ರಷ್ಟಾಚಾರದ ಬಗ್ಗೆ ಮರು ಅಡಿಟ್(Audit) ನಡೆಸಲು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಎಜಿಯವರಿಗೆ ಪತ್ರ ಬರೆದು ಕೋರಿತ್ತು,

ಆದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಮರು ಅಡಿಟ್ ಗೆ ಎಜಿಯವರಿಗೆ ಅನುಮತಿ ನೀಡಲು ನಿರಾಕರಿಸಿದ್ದವು ಎಂದು ಟೀಕಿಸಿದ್ದರು.

Exit mobile version