ಕಬ್ಬಿನ ಹಾಲಿನಿಂದ ಆರೋಗ್ಯ ಲಾಭಗಳು

ಕಬ್ಬಿನ ಹಾಲಿನಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿರುವ ಗ್ಲುಕೋಸ್ ದೇಹಕ್ಕೆ ಹೆಚ್ಚಿನ  ಪ್ರಮಾಣದ ಶಕ್ತಿಯನ್ನು ದೊರಕಿಸುವ ಮೂಲಕ ಶಕ್ತಿದಾಯಕ ವಾದ ಪಾನೀಯ ಇದಾಗಿದೆ.

ಇದನ್ನು ಕುಡಿದರೆ ಕಾಮಾಲೆ ರೋಗ ನಿವಾರಣೆಯಾಗುತ್ತದೆ. ಕಾಮಾಲೆಯನ್ನು ಗಣಪಡಿಸುವ  ಅದ್ಭುತ  ಶಕ್ತಿ ಇದರಲ್ಲಿದೆ. ಸಕ್ಕರೆ (ಗ್ಲುಕೋಸ್) ಪ್ರಮಾಣ ಹೆಚ್ಚಾಗಿದ್ದು ಇದು ನೈಸರ್ಗಿಕವಾದ ಪೇಯವಾದುದರಿಂದ ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ದೇಹಕ್ಕೆ ಶಕ್ತಿ ಒದಗಿಸುತ್ತದೆ.

ಕಬ್ಬಿನ ರಸಕ್ಕೆ ಪುದಿನಾ ಶುಂಠಿ ಲಿಂಬೆ ಸೇರಿಸಿ ಕಡಿದರೆ ರುಚಿಯಷ್ಟೇ ಅಲ್ಲಾ ಅದ್ಭುತವಾದ ಆರೋಗ್ಯ ಲಾಭಗಳೂ ಇವೆ.ಇದರಲ್ಲಿ ಕ್ಯಾಲ್ಸಿಯಂ ರಂಜಕ ಸಮೃದ್ಧವಾಗಿವೆ. ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ, ಕರುಳಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮೂತ್ರ ಪಿಂಡಗಳ ಸಮಸ್ಯೆಗಳು ನಿವಾರಣೆಯಾಗಿ ಮೂತ್ರವಿಸರ್ಜನೆ ಸರಾಗವಾಗಿ ಆಗುತ್ತದೆ.

ರೋಗ ನಿರೋಧಕ ಶಕ್ತಿಯು ಅತ್ಯುತ್ತಮವಾಗಿದ್ದು ನಿಯಮಿತ ಸೇವನೆಯಿಂದ ಹೊಟ್ಟೆ ಯಕ್ರತ್ತು ಮೂತ್ರ ಪಿಂಡ ಶ್ವಾಸ ಕೋಶದ ತೊಂದರೆಗಳಲ್ಲಿ  ಸೋಂಕಿದ್ದರೆ ಇದನ್ನೆಲ್ಲಾ ತಡೆಯಲು ಸಹಾಯಕವಾಗಿದೆ. ತೂಕ ಇಳಿಸುವವರು ಇದಕ್ಕೆ ಲಿಂಬೆ ಶುಂಠಿ ಚಿಟಿಕೆ ಜೀರಿಗೆ ಪುಡಿ ಸೇರಿಸಿ ಕುಡಿದರೆ ತೂಕ ಇಳಿಸಬಹುದು. ಈ ಶಕ್ತಿವರ್ಧಕ ಪಾನೀಯವನ್ನು ನಿತ್ಯವೂ ಒಂದು ಗ್ಲಾಸ್ ಸೇವಿಸಿ ಆರೋಗ್ಯವಂತರಾಗಿರಿ.

Exit mobile version