ಇನ್ಮುಂದೆ ಕಚ್ಚಾ ಬಾದಾಮ್ ಹಾಡು ಹಾಡೋದಿಲ್ಲ’ : ಭುಬನ ಹಾಡಿನ ಹಕ್ಕು ಬೇರೆ ಕಂಪೆನಿ ಪಾಲು !

ಕಚ್ಚಾ ಬಾದಾಮ್ ಈ ಹಾಡನ್ನು ಶೋಷಿಯಲ್ ಮೀಡಿಯಾದಲ್ಲಿ ನೀವೆಲ್ಲ ಕೇಳಿಯೇ ಇರ್ತೀರಿ. ಅಷ್ಟೇ ಅಲ್ಲ ರೀಲ್ಸ್ ಗೂ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿರ್ತೀರಿ. ಜನರನ್ನು ಅಷ್ಟು ಮರಳು ಮಾಡಿತ್ತು (kacha badam copy right) ಕಚ್ಚಾ ಬಾದಾಮ್‌ ಹಾಡು.

ಒಂದೇ ರಾತ್ರಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ(Social Media) ಈ ಹಾಡು ಭರ್ಜರಿ ಪೇಮಸ್ ಆಗಿತ್ತು.

ಈ ಹಾಡು ಹಾಡಿದ್ದ ಗಾಯಕ, ಕಡಲೆ ಕಾಯಿ ಮಾರಾಟಗಾರ ಭುಬನ್( Bhuban) ಸ್ಟಾರ್‌ ಆಗಿ ಬಿಟ್ಟಿದ್ದರು. ಆದ್ರೆ ಇನ್ಮುಂದೆ ಭುಬನ್ ಕಚ್ಚಾ ಬಾದಾಮ್‌ ಹಾಡನ್ನು ಹಾಡುವ ಹಾಗಿಲ್ಲ. ಯಾಕೆ ಗೊತ್ತಾ?

ಕಚ್ಚಾ ಬಾದಾಮ್(Kacha Badam) ಹಾಡಿನ ಹಕ್ಕು ಬೇರೆ ಕಂಪನಿಯೊಂದು ಪಡೆದಿದುಕೊಂಡಿದೆ. ಪಶ್ಚಿಮ ಬಂಗಾಳದ ಕಂಪನಿಯೊಂದು ಕಚ್ಚಾ ಬಾದಾಮ್ ಹಾಡಿನ ಹಕ್ಕನ್ನು ಪಡೆದಿದೆಯಂತೆ.

ಕಾನೂನಿನ ಪ್ರಕಾರ ಭುಬನ ಇನ್ಮುಂದೆ ಈ ಹಾಡನ್ನು ಹಾಡುವಂತಿಲ್ಲ. ಹಾಡಿನ ಹಕ್ಕು ಬೇರೆಯವರ ಪಾಲಾಗಿದ್ದರ ಬಗ್ಗೆ ಭುವನ್‌ ಬಾರೀ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಾಡು ತನ್ನದೇ, ಬೇರೆಯವರದ್ದಲ್ಲ ಎಂದು ಹೇಳುತ್ತಿದ್ದಾರೆ.


ಭುಬನ ಫೇಮಸ್‌ ಆಗಿದ್ದು ಹೇಗೆ? : ಪಶ್ಚಿಮ ಬಂಗಾಳದ ಹಳ್ಳಿಗಳಲ್ಲಿ ಕಚ್ಚಾ ಬಾದಾಮ್ ಹಾಡು ಹೇಳುತ್ತ ಕಡಲೆಕಾಯಿ (ಶೇಂಗಾ) ಮಾರಿ ಭುಬನ್ ಜೀವನ ನಡೆಸುತ್ತಿದ್ದರು.

ಭುಬನ್ ಇದೇ ಹಾಡು ಹೇಳಿ ಜನರನ್ನು ಆಕರ್ಷಿಸಿ ಕಡಲೆಕಾಯಿ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದರು. ಈ ಹಾಡನ್ನು ಊರಿನವರೇ ರೆಕಾರ್ಡ್ ಮಾಡಿ ಶೋಶೀಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು.

ಅಲ್ಲಿ ಕಚ್ಚಾ ಬಾದಾಮ್ ಹಾಡು ಸಖತ್ ಸೌಂಡ್ ಮಾಡಿತ್ತು. ರಾತೋ ರಾತ್ರಿ ಈ ಹಾಡಿನಿಂದ ಸ್ಟಾರ್ ಕೂಡ ಆಗಿದ್ರೂ,. ಆದ್ರೆ ಈಗ ಈ ಹಾಡನ್ನು ಭುಬನ್ ಹಾಡುವಂತಿಲ್ಲ.


ಇದು ನನ್ನದೇ ಹಾಡು: ಭುವನ್‌ ಪ್ರಕಾರ ಇದು ಅವರ ಸ್ವರಚನೆಯ ಹಾಡು. ಹಾಗಾಗಿ ತನ್ನ ಒಪ್ಪಿಗೆ ಇಲ್ಲದೆ ಈ ಹಾಡನ್ನು ಯಾರು ಕೊಂಡುಕೊಳ್ಳಲು ಸಾಧ್ಯ ಅನ್ನೋದು ಅವರ ಪ್ರಶ್ನೆಯಾಗಿದೆ.

ತನಗೆ ಓದಲು ಬರೆಯಲು ಬರುವುದಿಲ್ಲ ತನ್ನ ಹಾಡಿನ ಕಾಪಿ ರೈಟನ್ನು(Copy Right) ಅಕ್ರಮವಾಗಿ ಪಡೆದು ಈಗ ತಮ್ಮದು ಎಂದು ಹೇಳುತ್ತಿದ್ದಾರೆ ಅನ್ನೋದು ಭುಬನ ಆರೋಪ.


ಹಾಡಿನ ಹಕ್ಕು ಪಡೆದ ಕಂಪೆನಿಯವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಭುಬನ ಬೇಸರ ವ್ಯಕ್ತಪಡಿಸಿದ್ದಾರೆ.ಭುಬನ ಅವರು ಈಗ ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ದುಬರಾಜಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಾಡಿಗೆ ಮನೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರಂತೆ. ಈಗ ತನಗೆ ಆದಾಯವೇ ಇಲ್ಲದಂತಾಗಿದೆ.

ಇನ್ನು ಎಷ್ಟು ದಿನ ಈ ರೀತಿ ನಡೆಯುತ್ತದೆ ಎಂಬುದು ನನಗೆ ತಿಳಿದಿಲ್ಲ. ‘ಕಚ್ಚಾ ಬಾದಾಮ್..’ ಹಾಡು ನನಗೆ (kacha badam copy right) ಜನಪ್ರಿಯತೆ ತಂದಿದೆ.

ಹಾಗಾಗಿ ನಾನು ನನ್ನ ಹಿಂದಿನ ಹರಕಲು ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ’ ಎಂದು ದುಃಖ ತೋಡಿಕೊಂಡಿದ್ದಾರೆ ಭುಬನ್.


ರಾತೋ ರಾತ್ರಿ ಬಂದ ಜನಪ್ರಿಯತೆಯೇ ಭುವನ್‌ಗೆ ನುಂಗಲಾರದ ತುತ್ತಾಗಿದೆ. ಇನ್ನಷ್ಟು ಸಾಲಗಾರರನನ್ನಾಗಿಸಿ ಆತನನ್ನು ಬೀದಿಗೆ ತಳ್ಳುತ್ತಿದೆ.

-Basavaraj k

Exit mobile version