ಕತ್ತಲಲ್ಲಿ ನರಳುತ್ತಿದೆ ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮ

People of Tumkur district Shira taluk Kwadikunte village are living without electrical power.

ಇವತ್ತಿನ ಸಿಟಿಜನ್ ಜರ್ನಲಿಸ್ಟ ಕಾರ್ಯಕ್ರಮದಲ್ಲಿ ನಾವು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ಜನರ ಸಮಸ್ಯೆ ನೋಡೋಣ. ನಮಗೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳೇ ಕಳೆದಿವೆ. ಆದ್ರೆ ತುಮಕೂರಿನ ಕ್ಯಾದಿಗುಂಟೆ ಗ್ರಾಮದ ಕೆಲ ಕಾಲನಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕವೇ ಇಲ್ಲ. ಇದರಿಂದ ಅಲ್ಲಿನ ಜನ ಕತ್ತಲಲ್ಲಿ ನರಳುತ್ತಿದ್ದಾರೆ.

ಇದು ತುಮಕೂರಿನ ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮ. ಈ ಗ್ರಾಮದ ಜನರು ಅಕ್ಷರಶ: ಪ್ರಾಣಿಗಳ ರೀತಿ ಬದುಕುತ್ತಿದ್ದಾರೆ. ಯಾವುದೇ ಮೂಲಭೂತ  ಸೌಕರ್ಯಗಳಿಲ್ಲದೆ ಜೀವನ ಸಾಗಿಸುತ್ತಿರೋ ಇವರ ಬದುಕು ಅತ್ಯಂತ  ಶೋಚನೀಯವಾಗಿದೆ.  ಎತ್ತ ಕಣ್ಣು ಹಾಯಿಸಿದ್ರೂ ಕಾರ್ಗತ್ತಲು. ಕತ್ತಲೆಯಲ್ಲೇ ಕರಗುತ್ತಿದೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ಏ.ಕೆ ಕಾಲನಿ ಹಾಗೂ ಒಕ್ಕಲಿಗ ಕಾಲನಿ ಮಂದಿಯ ಬದುಕು.  ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳೇ ಕಳೆದಿವೆ. ಆದ್ರೆ ನಾಚಿಕೆಗೇಡಿನ ವಿಚಾರ ಅಂದ್ರೆ ಈ ಕಾಲನಿಗಳಿಗೆ ಇವತ್ತಿನ ವರೆಗೂ ವಿದ್ಯುತ್‌ ಸಂಪರ್ಕವೇ ಕಲ್ಪಿಸಲಾಗಿಲ್ಲ. ಈ ಊರಿಗೆ ದಾರಿ ದೀಪ ಬಿಡಿ, ಇಲ್ಲಿನ ಮಂದಿಯ ಮನೆಯೊಳಗೆ ಒಂದು ವಿದ್ಯುತ್‌ ದೀಪ ಕೂಡ ಉರಿಯುತ್ತಿಲ್ಲ. ಇದಕ್ಕೆ ಕಾರಣ ಇವರು ದಲಿತರು, ದಮನಿತರು, ದನಿಹೀನರು ಅನ್ನೋ ಕಾರಣ.

ಇಡೀ ಗ್ರಾಮದಲ್ಲಿ ಸರಿಯಾದಚರಂಡಿಗಳಿಲ್ಲ. ಇದರ  ಪರಿಣಾಮ ಮನೆಗಳ ಮುಂದೆಯೇ ಕಲುಷಿತ ನೀರು ಹಾದು ಹೋಗುತ್ತಿದೆ.   ರಸ್ತೆ ತುಂಬಾ ಚರಂಡಿ ನೀರು ತುಂಬಿರೋದ್ರಿಂದ ಜನರಿಗೆ ಇಲ್ಲಿ ಓಡಾಡೋದೇ ಕಷ್ಟಸಾಧ್ಯವಾಗಿದೆ. ಅಲ್ಲದೆ ಚರಂಡಿ ನೀರಿನ ವಾಸನೆ ಇವರ ಬದುಕು ದುಸ್ತರಗೊಳಿಸಿದೆ. ನೋಣ, ಸೊಳ್ಳೆಗಳ ಕಾಟದಿಂದ ರೋಗ ರುಜಿನಗಳು ಹೆಚ್ಚುತ್ತಿವೆ. ವಾಸಿಸುತ್ತಿದ್ದಾರೆ. ಇವರ ಪಾಲಿಗೆ ಸರ್ಕಾರದ ಆಶ್ರಯ ಯೋಜನೆ ಬರೀ ಭರವಸೆಯಾಗಿ ಉಳಿದಿದೆ.   ಕ್ವಾದಿಗ್ರಾಮದ ಮಂದಿ ಪರದಾಡುತ್ತಿದ್ದಾರೆ. ನೀರಿನ ಬವಣೆ ಇಲ್ಲಿನ ಹೆಣ್ಣುಮಕ್ಕಳನ್ನು ಹೈರಾಣಾಗಿಸಿದೆ. ಇನ್ನು ಅಂಗನವಾಡಿ ಕತೆ ಕೇಳೋದೇ  ಬೇಡ. ಇಲ್ಲಿನ ಅಂಗನವಾಡಿಯನ್ನು ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದೆ. ಆದ್ರೆ ಆ ಬಾಡಿಗೆ ಮನೆಯ ಶೀಟ್ ಗಳು ಒಡೆದು ಹೋಗಿ ದೊಡ್ಡ ದೊಡ್ಡ ರಂಧ್ರಗಳಾಗಿವೆ. ಮಳೆಗಾಲದಲ್ಲಿ ಈ ರಂಧ್ರಗಳಿಂದ  ನೀರು ಸೋರಿ, ಮಕ್ಕಳಿಗೆ ಕಟ್ಟಡದ ಒಳಗೆ ನಿಲ್ಲಲು ಸಾಧ್ಯವೆ ಇಲ್ಲದಂತಾಗಿದೆ.

ಇನ್ನು ಇಲ್ಲಿ ಜನರಿಗೆ ಅನುಕೂಲವಾಗಲೆಂದು ಇಲ್ಲಿ 4 ವರ್ಷಗಳ ಹಿಂದೆ ವಾಟರ್ ಫಿಲ್ಟರ್ ನಿರ್ಮಿಸಲಾಗಿದೆ. ಆದ್ರೆ ಅದರ ನೀರನ್ನು ಇದುವರೆಗೂ ಯಾರೂ ಕುಡಿದಿಲ್ಲ. ಯಾಕಂದ್ರೆ ಅದರ ಮೆಷಿನ್‌ ಕೆಟ್ಡು ಕುಡಿಯಲು ಯೋಗ್ಯವಲ್ಲದ ನೀರು ಬರುತ್ತಿದೆ ಅನ್ನೋದು ಸ್ಥಳೀಯರ ದೂರು. ಇಲ್ಲಿನ ಜನರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗ್ಲೇ  ಸ್ಥಳಿಯ ಗ್ರಾಮ ಪಂಚಾಯಿತಿ ಲೋಕೋಪಯೋಗಿ ಇಲಾಖೆ, ತಾಲೂಕು ಪಂಚಾಯಿತಿ,  ಬೆಸ್ಕಾಂ ಇಲಾಖೆ, ತಹಶೀಲ್ದಾರ್ ತುಮಕೂರು ಸಿ ಇ ಓ ಅವರ ಕಚೇರಿಗಳಿಗೆ ಮನವಿ ಮಾಡಿದ್ದು ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂಬುದು ಜನರ ದೂರು. ಸತತವಾಗಿ ಬೆಸ್ಕಾಂ AEE ಹಾಗೂ ಸಬ್ ಡಿವಿಜನ್ ಆಫೀಸರ್ ಗೆ ಲಿಖಿತ ರೂಪದಲ್ಲಿ ಲೆಟರ್ ಕೊಟ್ಟು ಹಾಗೂ ಆನ್ ಲೈನ್ ಕಂಪ್ಲೇಂಟ್ ಮಾಡಿ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದ್ರೆ ಅಧಿಕಾರಿಗಳು 4 ತಿಂಗಳಿನಿಂದ ಇವತ್ತು ಬರುತ್ತೇವೆ ನಾಳೆ ಬರುತ್ತೇವೆ ಅಂತ ಸುಳ್ಳು ಹೇಳಿ ಸತಾಯಿಸುತ್ತಿದ್ದಾರೆಂಬುದು ಗ್ರಾಮಸ್ಥರ ಆರೋಪ.

ಮೂಲಭೂತ ಸೌಕರ್ಯಕ್ಕಾಗಿ ಮನವಿ ನೀಡಿದ ಕಾಲ್ ರೆಕಾರ್ಡ್ಸ್ ಗಳು ಇವೆ.  ಒಕ್ಕಲಿಗರ ಕಾಲೊನಿಯು ಈ ಗ್ರಾಮಕ್ಕೆ ಸೇರುವುದಿಲ್ಲವೆಂಬ ಕಾರಣಕ್ಕಾಗಿ  ಯಾರೂ ಸಹ ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲವೆಂಬುದು ಜನರ ಆರೋಪ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು  ಕ್ಯಾದಿಗುಂಟೆ ಗ್ರಾಮಕ್ಕೆ ಭೇಟಿ ನೀಡಲಿ. ಜನರ ಸಮಸ್ಯೆ ಆಲಿಸಿ ಅದಕ್ಕೆ ಸೂಕ್ತ ಪರಿಹಾರ ಸೂಚಿಸಲಿ. ಜೊತೆಗೆ ತಮ್ಮ ಬೇಡಿಕೆ  ಈಡೇರಿಸಲಿ ಅನ್ನೋದು ಈ ಗ್ರಾಮದ ಜನರ ಕಳಕಳಿಯಾಗಿ ಮನವಿಯಾಗಿದೆಇನ್ನಾದ್ರೂ ಇವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿ. ಇಲ್ಲಿನ ಶಾಸಕರಾದ  ರಾಜೇಶ್ ಗೌಡ ಅವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ, ಜನರ ನೋವಿಗೆ ಸ್ಪಂದಿಸಲಿ ಅನ್ನೋದು ವಿಜಯಟೈಮ್ಸ್‌ ಆಗ್ರಹ.

Exit mobile version