ನಟನೆ ಬದಿಗಿಟ್ಟು ತಾಯ್ತನ ಅನಂದಿಸುತ್ತಿರುವ ‘ಮಗಧಿರ’ ಬೆಡಗಿ!

ಬಹುಭಾಷಾ ನಟಿ(Actress) ಅಂತಲೇ ಖ್ಯಾತರಾದ ನಟಿ ಕಾಜಲ್ ಆಗರ್ವಾಲ್(Kajal Agarwal), ಕಾಲಿವುಡ್(Kollywood), ಟಾಲಿವುಡ್(Tollywood) ಹಾಗೂ ಬಾಲಿವುಡ್‌ನಲ್ಲೂ ಗುರುತಿಸಿಕೊಂಡಿರುವ ಪ್ರತಿಭಾವಂತ ನಟಿ.

ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದು, ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ಹೌದು, ವರದಿಗಳ ಪ್ರಕಾರ, ನಟಿ ಕಾಜಲ್ ಅಗರ್‌ವಾಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು, ಹಿಂದಿಯ ‘ಕ್ಯೂ! ಹೋ ಗಯಾ ನಾ’ ಸಿನಿಮಾದ ಮೂಲಕ ಕಾಜಲ್ ಅಗರ್‌ವಾಲ್ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ‘ಲಕ್ಷ್ಮೀ ಕಲ್ಯಾಣಂ’, ಬಿಗ್ ಬಜೆಟ್ ಸಿನಿಮಾ ರಾಮ್ ಚರಣ್ ತೇಜಾಗೆ ಜೋಡಿಯಾಗಿ ಮಗಧೀರ ಸಿನಿಮಾದಲ್ಲಿ ನಟನೆ,

‘ಆರ್ಯ 2’, ‘ಡಾರ್ಲಿಂಗ್’, ‘ಬೃಂದಾವನಂ’, ‘ಮಿಸ್ಟರ್ ಪರ್ಫೆಕ್ಟ್’, ‘ಸಿಂಗಂ’, ‘ಬಾದ್‌ಷಾ’, ‘ಜಿಲ್ಲಾ’, ‘ಟೆಂಪರ್’, ‘ಮೆರ್ಸಲ್’ ಮುಂತಾದ ಹಿಟ್ ಸಿನಿಮಾಗಳಲ್ಲಿ ಕಾಜಲ್ ಅಗರ್‌ವಾಲ್ ಅಭಿನಯಿಸಿದ್ದಾರೆ.
ತಾವು ಗರ್ಭಿಣಿ ಎಂದು ಗೊತ್ತಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಕಾಜಲ್ ಅಗರ್‌ವಾಲ್ ಬಹಳಾನೇ ಸಕ್ರಿಯರಾಗಿದ್ದರು. ಆಗಾಗ ತಮ್ಮ ಪ್ರೆಗ್ನೆನ್ಸಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು. ಹಾಗೇ, ಗರ್ಭಾವಸ್ತೆ ಸಮಯದಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನೂ ಮುಚ್ಚುಮರೆ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕಾಜಲ್ ಅಗರ್‌ವಾಲ್ ಬಹಿರಂಗ ಪಡಿಸುತ್ತಿದ್ದರು.

ಹಾಗೇ ಇಂತಹ ಸಮಸ್ಯೆ ಎದುರಿಸುತ್ತಿರುವವರಿಗೆ ಧೈರ್ಯ ಹೇಳುತ್ತಿದ್ದರು. ಕೂಸು ಹುಟ್ಟೋಕೆ ಮೊದಲೇ ಕುಲಾವಿ ಹೋಲಿಸಿದಂತೆ, ಈಗಾಗಲೇ ಮಗುವಿಗಾಗಿ ನರ್ಸರಿ ನಿರ್ಮಿಸಿದ್ದಾರೆ ಕಾಜಲ್ ಅಗರ್‌ವಾಲ್ ಹಾಗೂ ಗೌತಮ್ ದಂಪತಿ. ಗರ್ಭಾವಸ್ತೆ ಸಮಯದಲ್ಲಿ ಸಂತೋಷ, ಆತಂಕ, ಅಂಜಿಕೆ, ಭಯ ಸೇರಿದಂತೆ ಮಿಶ್ರ ಭಾವನೆಗಳು ಕಾಜಲ್ ಅಗರ್‌ವಾಲ್ ಅವರಿಗೆ ಕಾಡುತ್ತಿತ್ತಂತೆ. ಹಲವು ಅಭಿಮಾನಿಗಳು ನಮ್ಮ ನೆಚ್ಚಿನ ನಟಿ ತಾಯಿಯಾದ ಬಳಿಕ ನಟನೆಗೆ ವಾಪಾಸ್ ಬರದಲಿದ್ದಾರೋ? ಇಲ್ವೋ? ಎಂಬ ಪ್ರಶ್ನೆಗಳನ್ನು ವ್ಯಕ್ತಪಡಿಸಿದ್ದರು.

ಇದಕ್ಕೆ ಪರೋಕ್ಷವಾಗಿ ಉತ್ತರಿಸಿದ ಕಾಜಲ್, ನಾನು ಸಿನಿಮಾ ರಂಗದಿಂದ ದೂರಾಗುವುದಿಲ್ಲ. ಈ ವರ್ಷಾಂತ್ಯದ ವೇಳೆಗೆ ಮತ್ತೆ ಶೂಟಿಂಗ್‌ಗೆ ಹಾಜರಾಗುವ ಯೋಜನೆ ಇದೆ ಎಂದು ಇತ್ತೀಚೆಗಷ್ಟೇ ಹೇಳಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬಹಳಾನೇ ಖುಷಿ ಕೊಟ್ಟಿದೆ.
ಇನ್ನು ಪ್ರೆಗ್ನೆನ್ಸಿ ಸಮಯದಲ್ಲಿ ನಟಿ ಕಾಜಲ್ ಅಗರ್‌ವಾಲ್ ಅವರಿಗೆ ಇನ್ಸೋಮ್ನಿಯಾ (ನಿದ್ರಾಹೀನತೆ) ಕಾಡುತ್ತಿತ್ತು. ಪ್ರತಿದಿನ ರಾತ್ರಿ 2 ಗಂಟೆ ಅಥವಾ 3.30 ಗಂಟೆಗೆ ಅವರಿಗೆ ಎಚ್ಚರವಾಗುತ್ತಿತ್ತು. ಆದಾದ ಬಳಿಕ ಅವರಿಗೆ ನಿದ್ರೆಯೇ ಬರುತ್ತಿರಲಿಲ್ಲ.

ಆ ಸಮಯದಲ್ಲಿ ಅವರು ಮೊಬೈಲ್‌ನಲ್ಲಿ ಬಂದಿದ್ದ ಮೆಸೇಜ್‌ಗಳನ್ನ ನೋಡುತ್ತಿದ್ದರು. ಹಾಗೇ, ತಾವು ಮಾಡಿ ಮುಗಿಸಬೇಕಾಗಿರೋ ಕೆಲಸಗಳನ್ನು ಅವರು ಪಟ್ಟಿ ಮಾಡಿಟ್ಟುಕೊಳ್ಳುತ್ತಿದ್ದರು. ಸಕಾರಾತ್ಮಕ ಯೋಚನೆಗಳನ್ನೇ ಹೆಚ್ಚು ಮಾಡುತ್ತಿದ್ದೆ ಅಂತ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

  • ಪವಿತ್ರ ಸಚಿನ್

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.