ಗೃಹ ಮಂತ್ರಿಗಳಿಗೆ ತಾಕತ್ತಿದ್ದರೆ ಪಾದಯಾತ್ರೆ ತಡೆಯಲಿ – ಡಿ.ಕೆ. ಶಿವಕುಮಾರ್

  ಗೃಹ ಮಂತ್ರಿಗಳಿಗೆ ತಾಕತ್ತಿದ್ದರೆ ನಮ್ಮ ಪಾದಯಾತ್ರೆಯನ್ನು ತಡೆಯಲಿ ಎಂದು ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ.  ಸರ್ಕಾರ ಹೇಳಿರುವ ಕೋವಿಡ್ ನಿಯಮಗಳಿಗೆ ನಾವು ಗೌರವವನ್ನು ಕೊಡುತ್ತೇವೆ ಅದೇ ರೀತಿ ನಮ್ಮ ಪಾದಯಾತ್ರೆ ನಡೆಸುವ ನಿರ್ಧಾರಕ್ಕೆ ಸರ್ಕಾರವು ಗೌರವವನ್ನು ಕೊಡಬೇಕು.

40 ವರ್ಷಗಳಿಂದ ನಮಗೂ ರಾಜಕಾರಣದ ಅನುಭವ ಇದೆ. ರಾಜಕೀಯದ ನಿಯಮಗಳು ತಿಳಿದಿದೆ. ಸರ್ಕಾರದ ಹೆದರಿಕೆ, ಬೆದರಿಕೆಗಳು ನಮ್ಮ ಬಳಿ ನಡೆಯುವುದಿಲ್ಲ. ನಿಯಮ ಮಾಡಿದವರು ಮೊದಲು ಅದನ್ನು ಪಾಲಿಸಲಿ ನಂತರ ನಮಗೆ ಹೇಳಲಿ ಎಂದರು.

ದೇಶದ ರಾಜ್ಯದ ಬಡಪಾಯಿ ಜನರಿಗೆ ಒಂದು ನಿಯಮ, ಸರ್ಕಾರವನ್ನು ನಡೆಸುವವರಿಗೆ ಮತ್ತೊಂದು ನಿಯಮ ಸಮಾರಂಭ, ಮದುವೆಗಳಿಗೆ ಸಮಾರಂಭಗಳಿಗೆ ನೂರು ಜನರಿಗೆ ಮಾತ್ರ ಅವಕಾಶವನ್ನು ನೀಡಿದ್ದಾರೆ ಆದರೆ ಸರ್ಕಾರ ನಡೆಸುವ ಕಾರ್ಯಕ್ರಮಗಳಿಗೆ ಸಾವಿರಾರು ಜನ ಬಂದು ಸೇರುತ್ತಿದ್ದಾರೆ. ಇದು ಗೃಹಸಚಿವರಿಗೆ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದರು.

ಸರ್ಕಾರ ಹಾಕುವಂತಹ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಿ ನಮ್ಮ ಯೋಜನೆಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ, ಜೈಲಿಗೆ ಹಾಕಿದರೂ ಸಹಾ ಹೆದರುವುದಿಲ್ಲ ಪಾದಯಾತ್ರೆಯನ್ನು ನಿಲ್ಲಿಸಲು ಗೃಹ ಸಚಿವರು ಇನ್ನೊಂದು ಜನ್ಮ ಹುಟ್ಟಿ ಬರಬೇಕು, ತಾಕತ್ ಇದ್ದರೇ ನಿಲ್ಲಿಸಲಿ ನಾವು ಏನೆಂದು ತೋರಿಸುತ್ತೇವೆ ಎಂದು ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ


Exit mobile version