ಕಲ್ಬುರ್ಗಿಯಲ್ಲಿ ಕಿಂಗ್ ಮೇಕರ್ ಬೆಂಬಲ ಯಾರಿಗೆ ?

ಕಲ್ಬುರ್ಗಿ ಸೆ 08 : ಕಲ್ಬುರ್ಗಿ ಮಹಾನಗರ ಪಾಲಿಕೆ ಫಲಿತಾಂಶ ಪ್ರಕಟವಾಗಿದ್ದು, ಸ್ವತಂತ್ರವಾಗಿ ಆಧಿಕಾರಕ್ಕೇರಲು 2 ಪಕ್ಷಗಳು ವಿಫಲವಾಗಿದ್ದು, ಈ ಹಿನ್ನಲೆಯಲ್ಲಿ 2 ಪಕ್ಷಗಳಿಗೆ ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲ ಬೇಕಾಗಿದ್ದು ಜೆಡಿಎಸ್‌ ನಡೆ ಯಾವ ಕಡೆ ಎಂಬ ಕುತೂಹಲ ಎಲ್ಲರಲ್ಲೂ ಕೆರಳಿಸಿದೆ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 55 ವಾರ್ಡ್ ಗಳ ಪೈಕಿ 27 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆದ್ದು, 1  ಸ್ಥಾನ ಹಿನ್ನಡೆಯಿಂದಾಗಿ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಇನ್ನು 23 ವಾರ್ಡ್ ಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಧಿಕಾರಕ್ಕೇರಲು 5 ಸ್ಥಾನದ ಅವಶ್ಯಕತೆಯಿದೆ. ಈ ಚುನಾವಣೆಯಲ್ಲಿ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್ ಕಿಂಗ್ ಮೇಕರ್ ಆಗಿದ್ದು ದೇವೇಗೌಡರ ಒಲವು ಯಾರಿಗಿದೆಯೋ ಆ ಪಕ್ಷ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಿದೆ.

 ಕಲ್ಬುರ್ಗಿಯಲ್ಲಿ ಮೇಯರ್ ಆಯ್ಕೆಗೆ 28 ಸದಸ್ಯರ ಬೆಂಬಲ ಬೇಕಿದ್ದು, ಕಾಂಗ್ರೆಸ್ ಗೆ ಏಕೈಕ ಪಕ್ಷೇತರ ಸದಸ್ಯನ ಬೆಂಬಲ ಸಿಕ್ಕರೂ ಕೂಡ ಅಧಿಕಾರಕ್ಕೇರಲು ಸುಲಭ ಸಾಧ್ಯವಾಗಿದೆ. ಒಂದು ವೇಳೆ ಜೆಡಿಎಸ್ ನಾಲ್ವರು ಹಾಗೂ ಓರ್ವ ಪಕ್ಷೇತ್ತರ ಅಭ್ಯರ್ಥಿ ಬಿಜೆಪಿಗೆ ಬೆಂಬಲ ನೀಡಿದರೆ ಬಿಜೆಪಿ ಅಧಿಕಾರ ನಡೆಸುವ ಅವಕಾಶ ಕೂಡ ಇದೆ. ಈ ನಡುವೆ 2 ಪಕ್ಷಗಳೂ ಅಧಿಕಾರಕ್ಕೇರಲು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿವೆ.

Exit mobile version