ಕಮಲಿ ಕಣ್ಣೀರು

ಝೀ ಟಿವಿ ‘ಕಮಲಿ’ ನಿರ್ಮಾಪಕನಿಗೆ ಮೋಸ ! ‘ಕಮಲಿ’ ಸೀರಿಯಲ್‌ ನಿರ್ಮಾಪಕ ರೋಹಿತ್‌ ಎಸ್‌ಗೆ ನಿರ್ದೇಶಕನಿಂದಲೇ ವಂಚನೆ ? ಸೀರಿಯಲ್‌ ನಿರ್ಮಾಣಕ್ಕೆ 73 ಲಕ್ಷ ರೂಪಾಯಿ ಪಡೆದು ಮೋಸ ಮಾಡಿ, ಸೀರಿಯಲ್‌ನ ನಿರ್ಮಾಪಕ ಸ್ಥಾನಕ್ಕೆ ಕೋಕ್‌. ನಿರ್ದೇಶಕ ಅರವಿಂದ್‌ ಕೌಶಿಕ್‌ ಹಾಗೂ ಜಿ ಚಾನೆಲ್‌ ಬಿಸಿನೆಸ್‌ ಹೆಡ್‌ ವಿರುದ್ಧ ಪೊಲೀಸ್‌ರಿಗೆ ದೂರು.

ಝೀ ಟಿವಿ ‘ಕಮಲಿ’ ಸೀರಿಯಲ್‌ ನಿರ್ಮಾಪಕನಿಗೆ ಮೋಸ !ನಿರ್ಮಾಪಕ ರೋಹಿತ್‌ಗೆ ನಿರ್ದೇಶಕನಿಂದಲೇ ವಂಚನೆ ?ಸೀರಿಯಲ್‌ ನಿರ್ಮಾಣಕ್ಕೆ 73 ಲಕ್ಷ ರೂ. ಪಡೆದು ಮೋಸ, ಹಣ ಪಡೆದು ಸೀರಿಯಲ್‌ನ ನಿರ್ಮಾಪಕ ಸ್ಥಾನಕ್ಕೆ ಕೋಕ್‌, ನಿರ್ದೇಶಕ ಅರವಿಂದ್‌ ಕೌಶಿಕ್‌ ವಿರುದ್ಧ ಪೊಲೀಸ್‌ ದೂರು, ಝೀ ಚಾನೆಲ್‌ನ ರಾಘವೇಂದ್ರ ಹುಣಸೂರು ವಿರುದ್ಧ ದೂರು, ಎಫ್‌ಐಆರ್‌ ದಾಖಲಾಗದಂತೆ ಪ್ರಭಾವ ಬೀರುತ್ತಿರುವ ಆರೋಪ,ಸೀರಿಯಲ್ ಮಾಫಿಯಾದ ವಿರುದ್ಧ ಹೋರಾಟಕ್ಕೀಳಿದ ರೋಹಿತ್‌.

ಇದು ಕರುನಾಡಿನ ಮನೆ ಮಾತಾಗಿರುವ ಝೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರವಾಹಿಯ ನಿರ್ಮಾಪಕನಾಗಿದ್ದ ರೋಹಿತ್‌ ಎಸ್‌ನ ಕಣ್ಣೀರ ಕತೆ. ಸೀರಿಯಲ್ ನಿರ್ದೇಶಕ ಅರವಿಂದ್‌ ಕೌಶಿಕ್‌ ಅವರೇ ಇವರಿಗೆ ಮೋಸ ಮಾಡಿದ್ರು.ರೋಹಿತ್‌ ಇವತ್ತು ಈ ದುಸ್ಥಿತಿಗೆ ಬರಲು ಸೀರಿಯಲ್‌ ಮಾಫಿಯಾವೇ ಕಾರಣ ಅಂತ ನೇರವಾಗಿ ಆರೋಪಿಸುತ್ತಾರೆ.

ಸೀರಿಯಲ್‌ ನಿರ್ಮಾಣವೂ ಒಂದು ಮಾಫಿಯಾ ರೂಪ ತಾಳಿದೆ. ಯುವಕರಲ್ಲಿ ಬಣ್ಣ ಬಣ್ಣದ ಕನಸು ತುಂಬಿ ಅವರಿಂದ ಲಕ್ಷ ಲಕ್ಷ ಹಣ ಪಡೆದು, ಆಮೇಲೆ ಅವರನ್ನು ಬೀದಿಗೆ ತಳ್ಳುವ ಕೆಲಸ ನಡೀತಿದೆ ಅನ್ನೋ ಆರೋಪ ರೋಹಿತ್‌ರದ್ದು.

ಅಸಲಿಗೆ ರೋಹಿತ್‌ ಎಸ್‌ ಮೋಸ ಹೋಗಿದ್ದು ಹೇಗೆ? ಇವರು ಯಾವ ರೀತಿ ಕಮಲಿ ಸೀರಿಯಲ್ ಮೂಲಕ ವಂಚನೆಗೆ ಒಳದಾದ್ರು ಅನ್ನೋದನ್ನು ಅವರ ಬಾಯಿಯಿಂದಲೇ ತಿಳಿಯೋಣ. ರೋಹಿತ್‌ ಆರೋಪದ ಬಗ್ಗೆ ವಿಜಯಟೈಮ್ಸ್ ಕಮಲಿ ಸೀರಿಯಲ್‌ ನಿರ್ದೇಶಕ ಅರವಿಂದ್‌ ಕೌಶಿಕ್‌ ಬಳಿ ಸ್ಪಷ್ಟನೆ ಕೇಳಿದಾಗ ಅವರು ಹೇಳಿದ್ದೇನು ಗೊತ್ತಾ? ರೋಹಿತ್ ಎಸ್‌ ನಿರ್ಮಾಪಕನೇ ಅಲ್ಲ ಆತ ಫೈನಾನ್ಷಿಯರ್ ಅಂತ. ಅಲ್ಲದೆ ನಾವು ಝೀ ಚಾನೆಲ್‌ನ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಅವರನ್ನೂ ಈ ಆರೋಪಗಳ ಬಗ್ಗೆ ಸ್ಪಷ್ಟನೆ ಕೇಳಿದ್ವಿ. ಅದಕ್ಕೆ ಅವರು ಕೊಟ್ಟ ಉತ್ತರ ಕೇಳಿ ಅರವಿಂದ್‌ ಕೌಶಿಕ್ ಉತ್ತರಕ್ಕೆ ರೋಹಿತ್‌ ಅವರು ಎಳೆ ಎಳೆಯಾಗಿ ಪ್ರತಿ ಉತ್ತರ ಕೊಟ್ಟಿದ್ದಾರೆ ಕೇಳಿ.

ಈಗಾಗಲೇ ಕಮಲಿ ಸೀರಿಯಲ್‌ಗೆ  73 ಲಕ್ಷ ರೂಪಾಯಿ ಬಂಡವಾಳ ಹಾಕಿ ಬೀದಿ ಭಿಕಾರಿಯಾಗಿದ್ದಾರೆ ರೋಹಿತ್ ಎಸ್‌. ಈಗ ನ್ಯಾಯದ ಮೊರೆ ಹೋಗಿದ್ದಾರೆ. ದಾಖಲೆಗಳನ್ನ ಇಟ್ಟುಕೊಟ್ಟುಕೊಂಡು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಸತ್ಯಕ್ಕೆ ಜಯ ಸಿಗಲಿ ಅನ್ನೋದೇ ವಿಜಯಟೈಮ್ಸ್‌ ಆಶಯ.

Exit mobile version