Udaipur : ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಇಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜನ್ಮದಿನದಂದು ಒಂದು ಸಂದೇಶವನ್ನು ಕೂಡ ನೀಡಿದ್ದು, ನನ್ನ ಹೃದಯದಿಂದ (Kangana Ranaut apology) ಈ ಸಂದೇಶ ನೀಡಿದ್ದೇನೆ ಎಂದು ಹೇಳಿದ್ದಾರೆ.

ತಮ್ಮ 36 ನೇ ಜನ್ಮದಿನದಂದು ಮನಬಿಚ್ಚಿ ಕೆಲವು ಸಂಗತಿಗಳನ್ನು ಹಂಚಿಕೊಂಡಿರುವ ನಟಿ ಕಂಗನಾ ರಣಾವತ್ ಅವರು, ತಮ್ಮ ಹೇಳಿಕೆಯಿಂದ ನೋವುಂಟು ಮಾಡಿದ ಜನರಲ್ಲಿ ಕ್ಷಮೆಯನ್ನು ಕೋರಿದ್ದಾರೆ.
ಕಂಗನಾ ರಣಾವತ್ ತಮ್ಮ ಹುಟ್ಟುಹಬ್ಬದಂದು ತಮ್ಮ ಅಭಿಮಾನಿಗಳು ಮತ್ತು ವಿರೋಧಿಗಳಿಗೆ ಈ ಪೋಸ್ಟ್ ಅನ್ನು ಅರ್ಪಿಸಿದ್ದಾರೆ.
ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿರಬಹುದೆಂದು ಅವರು ಕ್ಷಮೆಯಾಚಿಸಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣದ ಖಾತೆಯಾದ ಇನ್ಸ್ಟಾಗ್ರಾಂ ನಲ್ಲಿ(Instagram) ವೀಡಿಯೋ ಹಂಚಿಕೊಂಡಿರುವ ಅವರು,
ಮೊದಲ ಬಾರಿಗೆ ನನ್ನ ಹೇಳಿಕೆಗಳಿಂದ ನೊಂದವರಿಗೆ ಕ್ಷಮೆಯನ್ನು ಕೋರುತ್ತೇನೆ. ನನ್ನ ಶತ್ರುಗಳು ನನಗೆ ವಿಶ್ರಾಂತಿ ನೀಡುವುದಿಲ್ಲ!
ನಾನು ಎಷ್ಟೇ ಯಶಸ್ವಿಯಾಗಿದ್ದರೂ, ಅವರು ನನ್ನನ್ನು ನನ್ನ ಕಾಲೆಳೆಯುವುದನ್ನು ಬಿಡುವುದಿಲ್ಲ. ಅವರು ನನಗೆ ಹೇಗೆ ಹೋರಾಡಬೇಕು (Kangana Ranaut apology) ಎಂದು ಕಲಿಸಿದ್ದಾರೆ.
ನಾನು ಇದಕ್ಕೆ ಎಂದೆಂದಿಗೂ ಕೃತಜ್ಞರಾಗಿರುತ್ತೇನೆ. ಸ್ನೇಹಿತರೇ, ನನ್ನ ಸಿದ್ಧಾಂತವು ತುಂಬಾ ಸರಳವಾಗಿದೆ.
ನಡವಳಿಕೆ, ಆಲೋಚನೆಗಳು ಸರಳವಾಗಿದೆ ಮತ್ತು ನಾನು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತೇನೆ.
ಹಾಗಾಗಿ ದೇಶದ ಕಲ್ಯಾಣದ ಬಗ್ಗೆ ನಾನು ಹೇಳಿದ ವಿಷಯಗಳಿಂದ ಯಾರಿಗಾದರೂ ನೋಯಿಸಿರಬಹುದು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಟಿ ಕಂಗನಾ ರಣಾವತ್, ಕಣ್ಣು ಸೆಳೆಯುವಂತ ಚಿನ್ನದ ನೆಕ್ಲೆಸ್ (Necklace) ಧರಿಸಿ, ಕ್ಯಾಮೆರಾ (Camera) ಮುಂದೆ ಕಾಣಿಸಿಕೊಂಡಿದ್ದಾರೆ.
ಸದಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆಯಿಂದಲೇ ಒಂದಲ್ಲ ಒಂದು ವಿವಾದಕ್ಕೆ ಸಿಲುಕುವ ನಟಿ ಕಂಗನಾ, ಇತ್ತೀಚಿಗೆ ಕೂಡ ತಮ್ಮ ಹೇಳಿಕಯಿಂದ ಭಾರಿ ವಿವಾದವೊಂದಕ್ಕೆ ಕಾರಣರಾಗಿದ್ದರು.
ಸಾಮಾಜಿಕ ಜಾಲತಾಣದಲ್ಲಿ ನಟಿ ಕಂಗನಾ ರಣಾವತ್ ಅವರ ಬಿಚ್ಚು ಮಾತುಗಳನ್ನು ವಿರೋಧಿಸುವ ಅನೇಕರ ಪೈಕಿ ಅವರನ್ನು ಟ್ರೋಲ್ ಮಾಡಿ ಅವರ ವಿರುದ್ಧ ಅಸಮಾಧಾನ ಹೊರಹಾಕುವವರ ಸಂಖ್ಯೆ ಅಧಿಕ!