Mumbai : ಚಿತ್ರರಂಗದವರು ತಮ್ಮ ಚಿತ್ರದ ಯಶಸ್ಸನ್ನು ಆನಂದಿಸಿಯೇ ಹೊರೆತು ರಾಜಕೀಯಕ್ಕೆ ಗಮನ ಹರಿಸಬೇಡಿ! ರಾಜಕೀಯದಿಂದ ದೂರವಿರಿ ಎಂದು ಟ್ವೀಟ್(kangana tweet about politics) ಮಾಡಿರುವ ನಟಿ ಕಂಗನಾ ರಣಾವತ್(Kangana Ranaut) ಬಾಲಿವುಡ್ ಚಿತ್ರರಂಗಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜನವರಿ 25 ರಂದು ದೇಶಾದ್ಯಂತ ಏಕಕಾಲಕ್ಕೆ ಬಿಡುಗಡೆಗೊಂಡ ನಟ ಶಾರುಖ್ ಖಾನ್(Shah Rukh Khan) ಅವರ ಪಠಾಣ್(Pathan) ಸಿನಿಮಾ ಬಗ್ಗೆ ಅನೇಕ ರಾಜಕಾರಣಿಗಳು ಸೇರಿದಂತೆ ಚಿತ್ರರಂಗದವರು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಜನವರಿ 25 ರಂದು ಬಿಡುಗಡೆಯಾದ ಪಠಾಣ್ ಚಿತ್ರ ಹಲವಾರು ಬಾಕ್ಸ್ ಆಫೀಸ್(Box office) ದಾಖಲೆಗಳನ್ನು ಮುರಿದು, ಅನೇಕ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದನ್ನು ಗಮನಿಸಿದ ನಟಿ
ಕಂಗನಾ ರಣಾವತ್ ಚಿತ್ರದ ಬಗ್ಗೆ ಟ್ವೀಟ್ ಮಾಡುವ ಮೂಲಕ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಾಲಿವುಡ್(Bollywood) ಚಿತ್ರರಂಗಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ, ಇದು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ : ಸಿದ್ದರಾಮಯ್ಯ
ದ್ವೇಷವನ್ನು ಹೆಚ್ಚಿಸುವ ಸಿನಿಮಾ ವಿಜಯ ಆಚರಿಸುವುದೇ? ಎಂಬ ಕಟುವಾದ ಟೀಕೆಗಳಿಗೆ (kangana tweet about politics) ಉತ್ತರಿಸಿದ ಕಂಗನಾ,
ನಮ್ಮ(ಬಾಲಿವುಡ್) ಚಿತ್ರರಂಗದ ಜನರು ತಮ್ಮ ಯಶಸ್ಸನ್ನು ಆನಂದಿಸಿ ಮತ್ತು ರಾಜಕೀಯದಿಂದ ದೂರವಿರಿ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇನ್ನು ಇದೇ ಸಾಲಿನಲ್ಲಿ ನಟಿ ಆಲಿಯಾ ಭಟ್(Aliaa Bhat) ಕೂಡ ಚಿತ್ರದ ಪರ ಟ್ವೀಟ್ ಮಾಡಿದ್ದು, ‘ಪ್ರೀತಿ ಯಾವಾಗಲೂ ಗೆಲ್ಲುತ್ತದೆ’, ವಾಟ್ ಏ ಬ್ಲಾಸ್ಟ್ ಎಂದು ಬರೆದು ಚಿತ್ರತಂಡಕ್ಕೆ ಬೆಂಬಲ ನೀಡಿದರು.
“ಬಾಲಿವುಡ್ ವಾಲೋನ್ ಯೇ ನಿರೂಪಣೆ ಬನಾನೇ ಕಿ ಕೋಶಿಶ್ ಮತ್ ಕರ್ನಾ ಕಿ ಇಸ್ಸ್ ದೇಶ್ ಮೇ ತುಮ್ ಹಿಂದೂ ದ್ವೇಷಿ ಕರ್ ರಹೇ ಹೋ ,
ಅಗರ್ ಮೈನೆ ಫಿರ್ ಸೆ ಯೆಹ್ ಪದ ಸುನಾ ‘ದ್ವೇಷ್ ಕೀ ವಿಜಯ’ ತೋ ತುಮ್ ಲೋಗೋನ್ ಕಿ ವಹಿ ಕ್ಲಾಸ್ ಲಗೇಗಿ ಜೋ ಕಲ್ ಲಗೀ ಥಿ”! ಎಂದು ಹಿಂದಿಯಲ್ಲಿ ಹೇಳಿದ ನಟಿ ಕಂಗನಾ,
ಬಾಲಿವುಡ್ ಜನರೇ, ನಿಮ್ಮ ಯಶಸ್ಸನ್ನು ನೀವು ಆನಂದಿಸಿ ಮತ್ತು ಒಳ್ಳೆಯ ಕೆಲಸ ಮಾಡಿ, ರಾಜಕೀಯದಿಂದ ದೂರವಿರಿ ಎಂದು ಬಾಲಿವುಡ್ ಮಂದಿಗೆ ಎಚ್ಚರಿಕೆಯ ಘಂಟೆಯನ್ನು ಬಾರಿಸಿದ್ದಾರೆ.
ನಟಿ ಕಂಗನಾ ರಣಾವತ್ ಅವರ ಈ ಒಂದು ಟ್ವೀಟ್‌ಗೆ ಹಲವು ಪಾಸಿಟಿವ್ ಕಮೆಂಟ್‌ಗಳ ಜೊತೆಗೆ ನೆಗಟಿವ್ ಕಮೆಂಟ್‌ಗಳು ಕೂಡ ವ್ಯಕ್ತವಾಗಿವೆ!