ಮತ್ತೆ ಕೈಕೊಟ್ಟ ಫೇಸ್‌ಬುಕ್‌

ಮುಂಬೈ ಅ 9 ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಒಂದು ವಾರದಲ್ಲಿ ಎರಡನೇ ಬಾರಿಗೆ ಬಳಕೆದಾರರ ಸೇವೆಗಳಿಗೆ ಧಕ್ಕೆಯಾಗಿದ್ದು ಈ ಹಿನ್ನಲೆಯಲ್ಲಿ ಕಂಪನಿ ಟ್ವೀಟ್‌ ಮುಖೇನ ಕ್ಷಮೆ ಕೇಳಿದೆ.

ನಮ್ಮ ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವಲ್ಲಿ ಕೆಲವರಿಗೆ ತೊಂದರೆಯಾಗುತ್ತಿದೆ ಎಂದು ನಮಗೆ ಗೊತ್ತಾಗಿದೆ. ಸಾಧ್ಯವಾದಷ್ಟು ಬೇಗನೆ ಸಾಮಾನ್ಯ ಸ್ಥಿತಿಗೆ ಮರಳಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು  ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು  ರಾತ್ರಿ 12:52 ರಲ್ಲಿ ಫೇಸ್‌ಬುಕ್ ಟ್ವೀಟ್ ಮಾಡಿದೆ.

ಕಳೆದ ಸೋಮವಾರ, ಭಾರತ ಸೇರಿದಂತೆ ವಿಶ್ವದಾದ್ಯಂತ ಫೇಸ್ಬುಕ್, ವಾಟ್ಸಪ್ ಮತ್ತು ಇನ್ಟಾಗ್ರಾಂ ಸೇವೆಗಳು ಕೆಲಕಾಲ ಸ್ಥಗಿತಗೊಂಡಿದ್ದವು. ಇವು 6 ಗಂಟೆಗಳವರೆಗೆ ಸೇವೆಯಲ್ಲಿ ದೋಷ ಹೊಂದಿದ್ದು, ಇದನ್ನು ಫೇಸ್‌ಬುಕ್‌ನ ಅತಿದೊಡ್ಡ ನಿಲುಗಡೆ ಎಂದು ಪರಿಗಣಿಸಲಾಗಿದೆ.

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್ ವಾಟ್ಸಾಪ್ ಸೇರಿದಂತೆ ತಮ್ಮ ಕಾರ್ಪೊರೇಟ್ ಸೈಟ್‌ಗಳಲ್ಲಿ ಸೇವೆ ನಿಲುಗಡೆಗೆ ವಿಷಾದ ವ್ಯಕ್ತಪಡಿಸಿದ್ದರು.

ಫೇಸ್‌ಬುಕ್‌ನಲ್ಲಿನ ಪೋಸ್ಟ್‌ನಲ್ಲಿ, ಜನರು ತಮ್ಮ ಸೇವೆಯನ್ನು ಎಷ್ಟರ ಮಟ್ಟಿಗೆ ಅವಲಂಬಿಸಿದ್ದಾರೆ ಎಂಬುದನ್ನು ಅರಿತುಕೊಂಡಿದ್ದೇನೆ ಮತ್ತು ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದರು.

ಕಂಪನಿಯ ಪ್ರಕಾರ, ವಿಶ್ವಾದ್ಯಂತ ಸುಮಾರು 1.6 ಮಿಲಿಯನ್ ಜನರು ಸಂವಹನ ಮಾಡಲು ಅಸಮರ್ಥತೆಯಿಂದ ಪ್ರಭಾವಿತರಾಗಿದ್ದಾರೆ. ಫೇಸ್ಬುಕ್ ನ ಷೇರಿನ ಬೆಲೆ ಕುಸಿದಿದ್ದರಿಂದ ಜುಕರ್ ಬರ್ಗ್ 600 ಮಿಲಿಯನ್ ಡಾಲರ್ ಕಳೆದುಕೊಂಡರು.

ಈ ಸಂದರ್ಭದಲ್ಲಿ, ಶುಕ್ರವಾರ ರಾತ್ರಿ  ಮತ್ತೆ ಮತ್ತು ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಮಸ್ಯೆ ಕಂಡುಬಂದಿದೆ.

ಕೆಲವೇ ಕ್ಷಣದಲ್ಲಿ ಅನೇಕ ಬಳಕೆದಾರರು ಈ ಬಗ್ಗೆ ದೂರು ನೀಡಿದರು. ಕೆಲವರು ಮೇಮ್‌ಗಳನ್ನು ಬಿಡುಗಡೆ ಮಾಡಿದರು ಮತ್ತು ಕೆಲವರು ಲೇವಡಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಫೇಸ್‌ಬುಕ್‌ ಕೆಲವು ಜನರು ಕಳೆದ ಎರಡು ಗಂಟೆಗಳಿಂದ ನಮ್ಮ ಸೇವೆಗಳ ಬಳಕೆಯಲ್ಲಿ ತೊಂದರೆ ಅನುಭವಿಸಿದ್ದಾರೆ ಇದಕ್ಕೆ  ಕ್ಷಮೆ ಯಾಚಿಸುತ್ತೇವೆ. ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಂಡು ಸಮಸ್ಯೆ ನಿವಾರಿಸಲಾಗಿದೆ. ಈಗ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದ್ದಾರೆ.

Exit mobile version