ಕನ್ನಡಿಗರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ

ಬೆಂಗಳೂರು, ನ. 19: ರಾಜ್ಯ ಸರ್ಕಾರವು ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕೆಂಬೇಕೆಂದು ಆದೇಶ ನೀಡಿದಾಗಿನಿಂದಲೂ ತೀವ್ರ ವಿರೋದ ವ್ಯಕ್ತವಾಗಿದೆ. ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯನ್ನು ಮಾಡಲು ಮುಂದಾಗಿದ್ದವು. ಈ ಹಿನ್ನಲೆಯಲ್ಲಿ ಕನ್ನಡಿಗರ ವಿರೋಧಕ್ಕೆ ಮಣಿದ ಸರ್ಕಾರವು ರದ್ದು ಮಾಡಿ ಆದೇಶವನ್ನು ಹೊರಡಿಸಿದೆ.

ಮರಾಠಾ ಅಭಿವೃಧ್ಧಿ ಪ್ರಾಧಿಕಾರದ ಬದಲು ನಗಮ ರಚನೆಗೆ ಬದಲಾಗಿ ನಿಗಮ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮರಾಠಾ ಸಮುದಾಯಕ್ಕೆ ಸೀಮಿತವಾಗಿ ನಿಗಮ ರಚಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮರಾಠಾ ಸಮುದಾಯಕ್ಕೆ ಸೀಮಿತವಾದ ನಿಗಮ ರಚಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಪ್ರಾಧಿಕಾರ ರಚಿಸುವಾಗ ನೂತನವಾಗಿ ಕಾಯ್ದೆ ರಚಿಸುವ ಅನಿವಾರ್ಯತೆ ಇರುತ್ತದೆ. ನಿಗಮಕ್ಕೆ ಸರ್ಕಾರವೇ ತಿರ್ಮಾನ ಕೈಗೊಳ್ಳಬಹುದಾಗಿದೆ. ಮರಾಠಾ ಸಮುದಾಯಕ್ಕೆ ಸೀಮಿತವಾಗಿ ನಿಗಮ ರಚಿಸಲಾಗುವುದು ಎಂದು ಕೇಳಿ ಬರುತ್ತಿದೆ.  

Exit mobile version