ಕಣ್ಣಿನ ಆರೋಗ್ಯಕ್ಕೆ ಸಿಂಪಲ್ ಸಲಹೆ

ಪಂಚೇದ್ರಿಯಗಳಲ್ಲೊಂದಾದ ಕಣ್ಣು ನಮ್ಮ ದೇಹದಲ್ಲಿ ಬಹು ಮುಖ್ಯ ಅಂಗ ಹಾಗೂ ಅತಿ ಸೂಕ್ಷವಾದ ಅಂಗ. ಇತ್ತೀಚಿನ ದಿನಗಳಲ್ಲಿ ಅನೇಕರು ಕಣ್ಣಿನ ದೋಷದಿಂದ ಬಳಲುತ್ತಿದ್ದಾರೆ. ಕಣ್ಣನ್ನು ಕಳೆದುಕೊಂಡರೆ ಜಗತ್ತು ನಮ್ಮ ಪಾಲಿಗೆ ಕತ್ತಲಾಗುತ್ತದೆ. ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಲ್ಲಿ, ಅತಿಯಾಗಿ ಮೊಬೈಲ್ ನೋಡುವವರಲ್ಲಿ, ತಾಂತ್ರಿಕ ಕೆಲಸಗಾರರಲ್ಲಿ, ಹೆಚ್ಚಾಗಿ ಟಿವಿ ನೋಡುವವರಲ್ಲಿ, ಲಾಪ್ ಟಾಪ್ಗಳ ಬಳಕೆ ಹೆಚ್ಚಾಗಿ ಮಾಡುವವರಲ್ಲಿ ಹಾಗೂ ವಯಸ್ಸಾದವರಲ್ಲಿ ಅತೀ ಹೆಚ್ಚು ದೃಷ್ಟಿದೋಷಗಳು ಕಾಣಿಸಿಕೊಳ್ಳುತ್ತದೆ.

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಅನೇಕ ಉಪಾಯಗಳು ಇವೆ. ಇವುಗಳಲ್ಲಿ ಮುಖ್ಯವಾಗಿ ಕಣ್ಣಿನ ಆರೋಗ್ಯಕ್ಕೆ ಬೇಕಾಗುವಂತಹ ವಿಟಮಿನ್‌ಗಳನ್ನೊಳಗೊಂಡ ತರಕಾರಿಗಳನ್ನು ಹಣ್ಣು ಹಂಪಲು, ದವಸದಾನ್ಯಗಳು ಹಾಗೂ ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.

ವಿಟಮಿನ್  ಎ, ಸಿ, ಇ ಮತ್ತು ಡಿ  ಹೆಚ್ಚಾಗಿರುವ  ಆಹಾರಗಳನ್ನು ಸೇವಿಸಬೇಕು. ಕ್ಯಾರೇಟ್ ,ಸೌತೆಕಾಯಿ, ಬೀನ್ಸ್‌, ನೆಲ್ಲಿಕಾಯಿ, ಪಪ್ಪಾಯಿ ಹಣ್ಣು, ಪೇರಳೆ ಹಣ್ಣು,  ಸೀತಾಫಲ, ಕಿತ್ತಳೆ, ದ್ರಾಕ್ಷಿ ಮುಂತಾದುವನ್ನು ಹಾಗೂ ಕೊತ್ತಂಬರಿ ಸೊಪ್ಪು ಹರಿವೆ ಸೊಪ್ಪು, ಮತ್ತು ಮೆಂತೆ ಸೊಪ್ಪು ಮುಂತಾದವುಗಳಲ್ಲಿ ವಿಟಮಿನ್‌ ಪೋಶಕಾಂಶಗಳು ಸಿಗುತ್ತವೆ. ದ್ವಿದಳ ದಾನ್ಯಗಳಾದ ಕಡ್ಲೆ, ಅಗಸೆ ಬೀಜ, ಹುರುಳಿ, ಹೆಸರುಕಾಳು ಮುಂತಾದವುಗಳಲ್ಲಿರುವ ಹೆಚ್ಚು ವಿಟಮಿನ್‌ಗಳು ಕಣ್ಣಿನ ಆರೋಗ್ಯಕ್ಕೆ ಉಪಯುಕ್ತವಾಗಿವೆ.

ಇನ್ನು ಹರಳೆಣ್ಣೆಯನ್ನು ಅಥವಾ ತೆಂಗಿನ ಎಣ್ಣೆಯನ್ನೂ ಪ್ರತೀ ವಾರ ತಲೆಗೆ ಹಚ್ಚಿ ಒಂದು ದಿನವಿಡೀ ತಲೆಯಲ್ಲಿಟ್ಟು ನಂತರ ತೊಳೆಯಬೇಕು, ಇದರಿಂದಲೂ ಕಣ್ಣು ತಂಪಾಗುತ್ತದೆ.  ವಾರಕ್ಕೊಮ್ಮೆಯಾದರೂ ಶುದ್ಧವಾದ ಗುಲಾಬಿ ನೀರನ್ನು ಕಣ್ಣಿಗೆ ಬಿಡಬೇಕು, ಕಣ್ಣಲ್ಲಿ  ದೂಳಿದ್ದರೆ ಕಣ್ಣು ಶುದ್ಧವಾಗುತ್ತದೆ. ನಾವು ಮನೆಯಲ್ಲೇ ತಯಾರಿಸಿದ ಕಾಡಿಗೆಯನ್ನು ರಾತ್ರಿ ಮುಲಗುವಾಗ ಹಚ್ಚಿಕೊಳ್ಳಬೇಕು ಹಾಗೂ ಚೆನ್ನಾಗಿ ನಿದ್ರಿಸಬೇಕು, ಇದರಿಂದಲೂ ಕಣ್ಣು ಶುದ್ಧವಾಗಿ ಕಳೆಕಳೆಯಾಗು ಇರುತ್ತದೆ. ಮುಖದ ಸೌಂಧರ್ಯವೂ ಹೆಚ್ಚುತ್ತದೆ. ಆಯಾಸವಾದ ಕಣ್ಣಿಗಳಿಗೆ ಸೌತೇಕಾಯಿಯ ತುಂಡುಗಳನ್ನು ಕಣ್ಣಿನ ಮೇಲಿಟ್ಟು ಅರ್ದ ಗಂಟೆ ಕಣ್ಣು ಮುಚ್ಚಿಕೊಂಡು ಮಲಗಿದ್ರೆ ಕಣ್ಣು ತಂಪಾಗುತ್ತದೆ. ಹಾಗೂ ದೃಷ್ಟಿ ಸರಾಗವಾಗುತ್ತದೆ.

Exit mobile version