ಸಾಂಪ್ರದಾಯಿಕ ಉಡುಗೆ ತೊಟ್ಟು ಕಾಂತಾರ ಹಾಡಿಗೆ ಕುಣಿದ ಆಂಧ್ರಪ್ರದೇಶದ ಅಧಿಕಾರಿ ; ವೀಡಿಯೋ ವೈರಲ್

AndraPradesh : ಕನ್ನಡ ಚಲನಚಿತ್ರದ ಕಿಲಾಡಿ, ಪ್ರತಿಭಾವಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಅವರ ಇತ್ತೀಚಿನ ಚಲನಚಿತ್ರ ‘ಕಾಂತಾರ’(Kantara Inspires Govt Officer) ಚಿತ್ರ ಇದೀಗ ದೇಶದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ.

ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರ ಕಾಂತಾರ ಎಂಬುದು ಸಂತಸದ ಸಂಗತಿ.

ಸದ್ಯ ಚಿತ್ರರಂಗದ ಇತಿಹಾಸದಲ್ಲಿ ದಾಖಲೆಗಳನ್ನು ಬರೆದ ಕೆಜಿಎಫ್ -2(Kantara Inspires Govt Officer) ನಂತರ ಕಾಂತಾರ ಈಗ ಎರಡನೆಯದು ಎಂಬುದು ಹೆಗ್ಗಳಿಕೆ.

ಕರ್ನಾಟಕದ ದಕ್ಷಿಣ ಭಾಗದ ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ಜಾನಪದ ಮತ್ತು ಸಂಸ್ಕೃತಿಗಳನ್ನು ಒಳಗೊಂಡಿರುವ ಈ ಚಲನಚಿತ್ರವು ಗ್ರಾಮೀಣ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿ, ಬೆಂಬಲವನ್ನು ಗಳಿಸುತ್ತಿದೆ.

ಕಾಂತಾರ ಸಿನಿಮಾ ವೀಕ್ಷಿಸಿದ ಅನೇಕರು ನಮ್ಮ ನಾಡಿನ ಸಂಸ್ಕೃತಿ, ಕಲೆಗೆ ಮಾರು ಹೋಗಿದ್ದಾರೆ. ನಮ್ಮ ಸಂಸ್ಕೃತಿ, ಅಚರಣೆಗಳು, ಕಲೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ.

ಸದ್ಯ ಇದೇ ರೀತಿ ಕಾಂತಾರ ಸಿನಿಮಾ ನೋಡಿ ಪ್ರೇರಿತರಾದ ಆಂಧ್ರಪ್ರದೇಶದ ತಹಸೀಲ್ದಾರ್(Tahasildar) ಅವರು ಕಂದಾಯ ಇಲಾಖೆಗಾಗಿ ಸಾಂಸ್ಕೃತಿಕ ಉತ್ಸವ ಏರ್ಪಡಿಸಿದ್ದರು.

https://youtu.be/lQMiDP-GDV4 ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಜನ ಜಾತ್ರೆ! ಬಸವನಗುಡಿಯಲ್ಲಿ ಕಡಲೆಕಾಯಿ ಹಬ್ಬ

ಕಾಂತಾರ ಚಿತ್ರದಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಪ್ರದರ್ಶಿಸಿದ ಜಾನಪದ ಕಲೆಯ ನೃತ್ಯವನ್ನು ಅಧಿಕಾರಿಗಳು ವೇದಿಕೆಯ ಮೇಲೆ ಮರುಸೃಷ್ಟಿಸಿದರು ಹಾಗೂ ತಮ್ಮ ನೃತ್ಯಕ್ಕೆ ಮೊದಲ ಬಹುಮಾನವನ್ನು ಕೂಡ ಪಡೆದುಕೊಂಡಿದ್ದಾರೆ.

16 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಕಾಂತಾರ ಚಿತ್ರವು ತಹಸೀಲ್ದಾರ್ ಪ್ರಸಾದ್ ರಾವ್ ಅವರಂತಹ ಅದೆಷ್ಟೋ ಮನಗಳನ್ನು ರಂಜಿಸಿ, ಮನರಂಜಿಸಿ, ಪ್ರೇರಪಿಸಿದೆ ಎಂಬುದರಲ್ಲಿ ಅನುಮಾನವೇ ಇಲ್ಲ!

https://twitter.com/krishna0302/status/1593530960762765314?s=20&t=JhbwfR5zNgj-e0PoCWRtjg

ಸಿನಿಪ್ರಿಯರಾದ ಅಧಿಕಾರಿ ರಾವ್ ಅವರು, ಕೋತವಲಸ ಕ್ಷೇತ್ರದ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಭೂತ ಕೋಲ’ದ ಆಚರಣೆಯ ಸಂದರ್ಭದಲ್ಲಿ ಧರಿಸುವ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ವೇದಿಕೆಯ ಮೇಲೆ ನೃತ್ಯ ಮಾಡಿದ್ದಾರೆ.

ಕಾಂತಾರ ಚಿತ್ರದಿಂದ ಪ್ರೇರಿತಗೊಂಡು ವೇಷಭೂಷಣದಲ್ಲಿ ಕಾಂತಾರದಲ್ಲಿ ಕಾಣಿಸಿಕೊಂಡ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಮರುಸೃಷ್ಟಿದ್ದಾರೆ.

ಈ ಮೂಲಕ ಅವರು ಸಾಂಸ್ಕೃತಿಕ ಉತ್ಸವದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅನೇಕ ಹೃದಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ(Gunturu) ಈ ಉತ್ಸವ ನಡೆದಿದ್ದು, ಆಂಧ್ರಪ್ರದೇಶದ ತಹಶೀಲ್ದಾರ್ ಅವರು ಕಂದಾಯ ಇಲಾಖೆಗಾಗಿ ನಡೆದ ಸಂಸ್ಕೃತಿ ಉತ್ಸವದಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಹಾಡಿಗೆ ನೃತ್ಯ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.

https://twitter.com/krishna0302/status/1593530980870287360?s=20&t=XIgCjfL2G_6X3EOCrgzsqA

ಪ್ರಸಾದ್ ರಾವ್ ಅವರು ಕೋತವಲಸದ ತಹಶೀಲ್ದಾರ್ ಎಂಬ ಸಂಗತಿಯ ಜೊತೆಗೆ ಅತೀ ಹೆಚ್ಚಾಗಿ ಚಿತ್ರಗಳನ್ನು ನೋಡುತ್ತಿದ್ದರು ಎನ್ನಲಾಗಿದೆ. ಪ್ರಸಾದ್ ಅವರು ಮಾಡಿದ ನೃತ್ಯಕ್ಕೆ ಪ್ರಥಮ ಬಹುಮಾನವೇ ಲಭಿಸಿದೆ.

ಕಂದಾಯ ಅಧಿಕಾರಿ ಪ್ರಸಾದ್ ರಾವ್ ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆದ ಹಿನ್ನೆಲೆ ನೆಟ್ಟಿಗರು ಮೆಚ್ಚಿ ಮಾತನಾಡಿರುವುದು ಕಮೆಂಟ್ಗಳ ಮೂಲಕ ಕಂಡುಬಂದಿದೆ.

Exit mobile version