ವಿಶ್ವದಾದ್ಯಂತ ಕಾಂತಾರ ಅಬ್ಬರ ; ಸದ್ಯದಲ್ಲೇ 300 ಕೋಟಿ ಕ್ಲಬ್ ಸೇರಲಿದೆ ಕಾಂತಾರ ಎಂಬ ದಂತಕತೆ!

Bengaluru : ರಿಷಬ್ ಶೆಟ್ಟಿ(Rishab Shetty) ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ(Kantara Towards 300 Crore) ಸಿನಿಮಾದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಕರಾವಳಿ ಸೊಗಡಿನ ‘ಕಾಂತಾರ’ ಕರ್ನಾಟಕದಲ್ಲಿ ಬಿಡುಗಡೆಯಾಗಿ ಒಂದು ತಿಂಗಳನ್ನು ಯಶಸ್ವಿಯಾಗಿ ಪೂರೈಸಿದ್ದು, 50 ದಿನಗಳತ್ತ ಮುನ್ನುಗ್ಗುತ್ತಿದ್ದರೂ ‘ಕಾಂತಾರ’ ಗುಂಗು ಮಾತ್ರ ಕಡಿಮೆಯಾಗಿಲ್ಲ.

‘ಕಾಂತಾರ’ ಹಿಂದಿ ಹಾಗೂ ತೆಲುಗು ವರ್ಷನ್ ಕೂಡ ಪ್ರೇಕ್ಷಕರ ಮನ ಸೂರೆಗೊಂಡಿದ್ದು, ಕಾಂತಾರ ಕ್ರೇಜ್ ಇನ್ನೂ ಹೆಚ್ಚಾಗಿದೆ.

ಇತ್ತ, ವಾರಾಂತ್ಯದಲ್ಲಿ ಮಲಯಾಳಂ ವರ್ಷನ್‌ ಕೂಡ ಸದ್ದು ಮಾಡುತ್ತಿದೆ. ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ‘ಕಾಂತಾರ’ ಸಿನಿಮಾದ ನಾಗಲೋಟ ಮುಂದುವರಿದಿದ್ದು,

ಬಾಕ್ಸಾಫೀಸ್‌ನಲ್ಲಿ(Box Office) ಮತ್ತೊಂದು ದಾಖಲೆ ಬರೆಯುವುದು ಖಂಡಿತ ಎನ್ನಲಾಗುತ್ತಿದೆ.

ಯಾವ ಸಿನಿಮಾ ಥಿಯೇಟರ್‌ಗೆ ಬಂದರೂ ಅಷ್ಟೇ, ‘ಕಾಂತಾರ’ದ ಮುಂದೆ ನಿಲ್ಲುವುದಕ್ಕೂ ಸಾಧ್ಯವಾಗುತ್ತಿಲ್ಲ.

ದಿನದಿಂದ ದಿನಕ್ಕೆ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ಹೌದು, ‘ಕಾಂತಾರ’ ಸಿನಿಮಾ ಹಂತ ಹಂತವಾಗಿ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡುತ್ತಲೇ ಇದ್ದು,

https://fb.watch/gxLP-qlGll/ ಶಿಕ್ಷಕರ ಹುದ್ದೆ ಆಯ್ಕೆ ಪ್ರಕ್ರಿಯೆಯಲ್ಲಿ ಮೋಸ ; ಅರ್ಹ ಮಹಿಳಾ ಅಭ್ಯರ್ಥಿಯಿಂದ ಆರೋಪ!

ಅಕ್ಷಯ್ ಕುಮಾರ್ ನಟನೆಯ ರಾಮ್‌ ಸೇತು ಹಾಗೂ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಸಿನಿಮಾಗಳು ಅದ್ದೂರಿಯಾಗಿ ರಿಲೀಸ್ ಆಗಿದ್ದರೂ,

‘ಕಾಂತಾರ’ ಸಿನಿಮಾದ ಮೇಲೆ ಮಾತ್ರ ಯಾವುದೇ ಪರಿಣಾಮ ಬೀರುತ್ತಿಲ್ಲ.

ಈಗಾಗಲೇ ಈ ಸಿನಿಮಾ 200 ಕೋಟಿ ಕ್ಲಬ್ ಸೇರಿದ್ದು, ಶೀಘ್ರದಲ್ಲಿಯೇ 300 ಕೋಟಿ ಕ್ಲಬ್‌ಗೂ ಪ್ರವೇಶಿಸಲಿದೆ ಎನ್ನುವುದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕಾಚಾರ.

ಸದ್ಯದ ಬಾಕ್ಸ್‌ ಅಫೀಸ್‌ ಭವಿಷ್ಯದ ಲೆಕ್ಕಾಚಾರಗಳ ಪ್ರಕಾರ, ಕಾಂತಾರ ಚಿತ್ರ 300 ಕೋಟಿ ಗಳಿಸಿದರೆ,

ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರದ ನಂತರ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಲಿದೆ.


ವರದಿಗಳ ಪ್ರಕಾರ ಕಾಂತಾರ ಸಿನಿಮಾ ವಿಶ್ವದಾದ್ಯಂತ ಅದ್ಭುತವಾಗಿ ಗಳಿಕೆ ಮಾಡುತ್ತಿದೆ.

ಇಲ್ಲಿಯವರೆಗೂ ವಿಶ್ವದಾದ್ಯಂತ ಕಾಂತಾರ ಸಿನಿಮಾ ಸುಮಾರು 289.21 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್‌ ವೆಬ್‌ಸೈಟೊಂದು ವರದಿ ಮಾಡಿದೆ.

ಭಾರತದಲ್ಲಿ ಎಲ್ಲಾ ಭಾಷೆಗಳನ್ನೂ ಸೇರಿ, 31 ದಿನಗಳ ಅವಧಿಯಲ್ಲಿ ಕಾಂತಾರ ಗಳಿಸಿದ್ದು, 268.21 ಕೋಟಿ ರೂ. ಹಾಗೂ ವಿದೇಶದಲ್ಲಿ 21 ಕೋಟಿ ಬಾಚಿಕೊಂಡಿದೆ ಎಂದು ವರದಿ ಮಾಡಿದೆ.

ಹೀಗಾಗಿ ಈ ವಾರಾಂತ್ಯದೊಳಗೆ ಕಾಂತಾರ 300 ಕೋಟಿ ರೂಪಾಯಿ ಗಳಿಕೆ ಮಾಡುವುದು ಖಂಡಿತ ಎನ್ನಲಾಗಿದೆ.

ಇನ್ನು, ರಿಷಬ್ ಶೆಟ್ಟಿಯ ‘ಕಾಂತಾರ’ ಸಿನಿಮಾ 300 ಕೋಟಿ ಕ್ಲಬ್ ಸೇರಿದರೆ, ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಬರೆದಂತಾಗಲಿದೆ.

2022ರಲ್ಲಿ 300 ಕೋಟಿ ಕ್ಲಬ್ ಸೇರಿದ 7ನೇ ಸಿನಿಮಾ ಎನ್ನುವ ಖ್ಯಾತಿಗೂ ಕಾಂತಾರ ಪಾತ್ರವಾಗಲಿದೆ.

ಇದನ್ನೂ ಓದಿ : https://vijayatimes.com/bengaluru-man-arrested/

ಈ ಪಟ್ಟಿಯಲ್ಲಿರುವ ಇತರ ಚಿತ್ರಗಳು ಹೀಗಿವೆ, 2022ರಲ್ಲಿ ಬಿಡುಗಡೆಯಾದ ‘ಕೆಜಿಎಫ್ 2’(KGF 2) 1230 ಕೋಟಿ ರೂ. ಗಳಿಸಿದೆ.

‘RRR’ 1144 ಕೋಟಿ ರೂ, ಪೊನ್ನಿಯಿನ್ ಸೆಲ್ವನ್ 464.70 ಕೋಟಿ ರೂ. ಬ್ರಹ್ಮಾಸ್ತ್ರ 427.88 ಕೋಟಿ ರೂ.

ಕಮಲ್ ಹಾಸನ್ ಸಿನಿಮಾ ವಿಕ್ರಂ 426 ಕೋಟಿ ರೂ. ಹಾಗೂ ದಿ ಕಾಶ್ಮೀರ್ ಫೈಲ್ಸ್ 326.95 ಕೋಟಿ ರೂ. ಗಳಿಸಿದ್ದವು.

ಈ ಸಿನಿಮಾಗಳ ಸಾಲಿಗೆ ‘ಕಾಂತಾರ’ ಶೀಘ್ರದಲ್ಲಿಯೇ ಸೇರಲಿದೆ ಎನ್ನುವುದು ಸಿನಿಪಂಡಿತರ ಲೆಕ್ಕಾಚಾರ.

ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಕಾಂತಾರ ಎನ್ನುವ ದಂತಕತೆಯಲ್ಲಿ, ಅಚ್ಯುತ್‌ ಕುಮಾರ್‌, ಕಿಶೋರ್‌, ಸಪ್ತಮಿಗೌಡ ಮುಂತಾದವರು ನಟಿಸಿದ್ದು, ಈ ಚಿತ್ರವನ್ನು ಹೊಂಬಾಳೆ ಫಿಲಮ್ಸ್‌(Hombale Films) ನಿರ್ಮಿಸಿದೆ.

ಸಿನಿಮಾ ಓಟಿಟಿ ಹಕ್ಕುಗಳು ಈಗಾಗಲೇ ಅಮೆಜಾನ್‌ ಪ್ರೈಮ್‌ ವಿಡಿಯೋಗೆ ಮಾರಾಟವಾಗಿದ್ದು, ನವೆಂಬರ್‌ ತಿಂಗಳಲ್ಲಿ ‘ಕಾಂತಾರ’ ಓಟಿಟಿಯಲ್ಲಿ ಪ್ರಸಾರಗೊಳ್ಳುವ ನಿರೀಕ್ಷೆಯಿದೆ.

Exit mobile version