ಕರ್ನಾಟಕ ಬಂದ್: ಪ್ರಯಾಣಿಕರು ಕಡಿಮೆ ಇದ್ದರು ರಸ್ತೆಗಿಳಿದ ಬಿಎಂಟಿಸಿ, ಎಂದಿನಂತೆ ಮೆಟ್ರೋ ಓಡಾಟ

Bengaluru: ಬೆಂಗಳೂರಲ್ಲಿ (Bengaluru) ಕರ್ನಾಟಕ ಬಂದ್ ಪರಿಣಾಮ ಬಹಳ ಜೋರಾಗಿದ್ದು, ಇದೀಗ ಕರ್ನಾಟಕ ಬಂದ್ ಕರೆಯೂ ಯಶಸ್ವಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಿಎಂಟಿಸಿ (BMTC), ಮೆಟ್ರೋ ಎಂದಿನಂತೆ ಓಡಾಟ ನಡೆಸುತ್ತಿವೆ ಆದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದು, ಬೆಂಗಳೂರಿನಲ್ಲಿ ಬಂದ್ ಗೆ ಬೆಳಗ್ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದು, ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೆಲವು ಬಿಎಂಟಿಸಿ ಬಸ್ ಗಳ ಓಡಾಟ ಕಂಡುಬರುತ್ತಿದೆ. ಕರ್ನಾಟಕ ಬಂದ್ ಗೆ (Karnataka Bandh) ಖಾಸಗಿ ವಾಹನಗಳ ಮಾಲೀಕರು ಹಾಗೂ ಚಾಲಕರ ಸಂಘಟನೆಗಳು ಬೆಂಬಲವನ್ನು ಸೂಚಿಸಿರುವ ಹಿನ್ನೆಲೆಯಲ್ಲಿ ಆಟೋಗಳು ಹಾಗೂ ಕ್ಯಾಬ್ ಗಳ ಸಂಖ್ಯೆ ತೀರಾ ವಿರಳವಾಗಿವೆ.

ಯಾವುದೇ ಅಹಿತಕರ ಘಟನೆಗಳು ಬಂದ್ ಹಿನ್ನಲೆಯಲ್ಲಿ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಮೆಜೆಸ್ಟಿಕ್ (Majestic) ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದನ್ನು ಖಂಡಿಸಿ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ನಗರದ ಟೌನ್ ಹಾಲ್ (Town Hall) ನಲ್ಲಿ ಪ್ರತಿಭಟನೆ ನಡೆಸಿತು.

ಪೊರಕೆಯಿಂದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ (M K Stalin) ಫ್ಲೆಕ್ಸ್ ಗೆ ಹೊಡೆದು ಪ್ರತಿಭಟನಾಕಾರರರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಸೈಕಲ್ ನಲ್ಲಿ ಖಾಲಿ ಬಾಟಲ್ ಗಳನ್ನು ಇಟ್ಟುಕೊಂಡು ಯುವಕನೊಬ್ಬ ಕಾವೇರಿಗಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.

ಪೊಲೀಸರು ಟೌನ್ ಹಾಲ್ ಗೆ ಸೈಕಲ್‌ನಲ್ಲಿ ಆಗಮಿಸಿದ ಯುವಕಯೊಬ್ಬನ್ನು ಬಳಿಕ ವಶಕ್ಕೆ ಪಡೆದುಕೊಂಡಿದ್ದಾರೆ. ಕಾವೇರಿ ಹೋರಾಟಕ್ಕೆ ಬೆಂಗಳೂರಿನ (Bengaluru) ಟೌನ್ ಹಾಲ್ ನಲ್ಲಿ‌ ಮಾಜಿ ಸೈನಿಕರು ಸಾಥ್ ನೀಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಪ್ರತಿಭಟನೆ ನಡೆಸುವ ಮೂಲಕ ಕಾವೇರಿ ಪರವಾಗಿ ಧ್ವನಿ ಎತ್ತಿದರು.

ಭವ್ಯಶ್ರೀ ಆರ್.ಜೆ

Exit mobile version