ಕಾರವಾರ-ಬೆಂಗಳೂರು ರೈಲು ಪ್ರಯಾಣ ಅವಧಿ ಕಡಿತ…!

ಉಡುಪಿ, ಫೆ, 09;  2020ರಲ್ಲಿ ಕಾರವಾರ-ಬೆಂಗಳೂರು ರೈಲು ಆರಂಭಗೊಂಡಿತ್ತು. ಪಡೀಲು ಮಾರ್ಗವಾಗಿ ಈ ರೈಲು ಸಂಚಾರ ನಡೆಸಲಿದೆ. ಈ ರೈಲಿಗೆ ಉತ್ತಮವಾದ ಸ್ಪಂದನೆಯೂ ವ್ಯಕ್ತವಾಗಿದೆ. ಕಾರವಾರ, ಉಡುಪಿ, ಕುಂದಾಪುರ ಭಾಗದ ಜನರು ಈ ರೈಲಿನ ಮೂಲಕ ರಾಜಧಾನಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ರೈಲಿನ ಪ್ರಯಾಣದ ಅವಧಿ ಬಗ್ಗೆ ಅಸಮಾಧಾವಿದೆ.

ಕಾರವಾರ-ಬೆಂಗಳೂರು ನಡುವೆ ಸಂಚರಿಸುವ ರೈಲಿನ ಪ್ರಯಾಣದ ಅವಧಿ ಕಡಿತಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ರೈಲು ಬೆಳಗ್ಗೆ 8ಗಂಟೆಗೆ ಬೆಂಗಳೂರು ನಗರವನ್ನು ತಲುಪುತ್ತಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ  ಅವರು ನೈಋತ್ಯ ರೈಲ್ವೆಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಈ ರೈಲು ಬೆಂಗಳೂರು ತಲುಪುವಾಗ ಬೆಳಗ್ಗೆ 8ಗಂಟೆಯಾಗುತ್ತಿದೆ. 7.15ಕ್ಕೆ ತಲುಪುವಂತೆ ಮಾಡಬೇಕು ಎಂದು ಒತ್ತಾಯಗೊಳಿಸಿದ್ದಾರೆ.

ಈ ರೈಲಿನಲ್ಲಿ ಬಹುತೇಕ ಸೀಟುಗಳು ವೈಟಿಂಗ್ ಇರುತ್ತವೆ. ಇಲ್ಲಿನ ಭಾಗದವರಿಗೆ ಹೆಚ್ಚಿನ ಸೀಟುಗಳು ಸಿಗಬೇಕು ಅದಕ್ಕಾಗಿ ರೈಲನ್ನು ಗೋವಾ ತನಕ ಸಂಚಾರ ನಡೆಸದೇ ಕಾರವಾರಕ್ಕೆ ಅಂತ್ಯಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಕಾರವಾರ-ಬೆಂಗಳೂರು ರೈಲಿಗೆ ಫೆ.26ರಿಂದ ಫಸ್ಟ್ ಕ್ಲಾಸ್ ಎಸಿ ಬೋಗಿ ಜೋಡಣೆಯಾಗಲಿದೆ. ಬಳಿಕ ಕೈಗಾದ ಅಧಿಕಾರಿಗಳು ಹೆಚ್ಚಾಗಿ ರೈಲನ್ನು ಬಳಕೆ ಮಾಡುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

Exit mobile version