ಬಿರು ಬೇಸಿಗೆಯಲ್ಲಿ ತಂಪಾದ ಅನುಭವ ಪಡೆಯಲು ಕರ್ನಾಟಕದ ಈ ಕೂಲ್ ಸ್ಥಳಗಳಿಗೆ ಭೇಟಿ ನೀಡಿ

Karnataka Tourist Place: ಮಕ್ಕಳಿಗೆ ಪರೀಕ್ಷೆ ಮುಗಿದಿದೆ. ಕೆಲಸದ ಟೆನ್ಶನ್ ಕೂಡಾ ಅಷ್ಟೊಂದಿಲ್ಲ ಎಲ್ಲಾದರೂ ಟ್ರಿಪ್ ಹೋಗೋಣ ಎಂಬ ಯೋಚನೆ ಮಾಡ್ತಿದ್ದರೆ ಬೇರೆ ರಾಜ್ಯಗಳಿಗೆ ಹೋಗಬೇಕೆಂದೆನಿಲ್ಲ.ಕರ್ನಾಟಕದಲ್ಲಿಯೇ (Karntaka) ತಂಪಾದ ತಾಣಗಳಿವೆ. ಅವುಗಳು ಬೇಸಿಗೆಯ ಕಾಲದಲ್ಲಿಯು ತಮ್ಮ ಆಹ್ಲಾದಕರವಾದ ಋತುಮಾನಕ್ಕೆ ತುಂಬಾ ಜನಪ್ರಿಯವಾಗಿದೆ. ಕುಟಂಬದ ಸದಸ್ಯರ ಜೊತೆ, ಸ್ನೇಹಿತರ ಜೊತೆ ಪ್ರಯಾಣ ಬೆಳೆಸಲು ಹೇಳಿ ಮಾಡಿಸಿದ ತಾಣಗಳಿವು.

ದಾಂಡೇಲಿ
ಸಾಹಸಿಗಳ ಸ್ವರ್ಗ ಎಂದೇ ಕರೆಸಿಕೊಳ್ಳುವ  ದಾಂಡೇಲಿ (Dandeli) ಪ್ರಕೃತಿ ಸೌಂದರ್ಯ ಹೊಂದಿರುವ ಅತ್ಯಂತ ಸೊಗಸಾದ ಸ್ಥಳವಾಗಿದೆ. ಇಲ್ಲಿ ಮಾಗೋಡು ಜಲಪಾತ, ದಾಂಡೇಲಿ ವನ್ಯಜೀವಿ ಅಭಯಾರಣ್ಯ, ಶಿವಾಜಿ ಕೋಟೆ, ಸಾಥೋಡಿ ಜಲಪಾತ, ಮೌಂಟೇನ್‌ ಬೈಕಿಂಗ್, ಟ್ರೆಕ್ಕಿಂಗ್, ಸೈಕ್ಲಿಂಗ್‌ (Cycling), ಕಯಾಕಿಂಗ್, ರಿವರ್ ರಾಫ್ಟಿಂಗ್‌ ಸೇರಿದಂತೆ ಇನ್ನು ಹೆಚ್ಚಿನ ಸಾಹಸಗಳನ್ನು ಹಾಗು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದಾಗಿದ್ದು ಬೇಸಿಗೆಯಲ್ಲಿ ಕುಟುಂಬ ಪ್ರವಾಸ ಮಾಡಲು ಹೇಳಿ ಮಾಡಿಸಿದ ಸ್ಥಳವಾಗಿದೆ.

ಆಗುಂಬೆ
ಹಲವಾರು ಸಿನಿಮಾಗಳಲ್ಲಿ ನೋಡಬಹುದಾದ ದಕ್ಷಿಣ ಭಾರತದ ಚಿರಾಪುರಂಜಿ ಎಂದೇ ಕರೆಸಿಕೊಳ್ಳುವ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಆಗುಂಬೆ (Agumbe) ಬಿರು ಬೇಸಿಗೆಯ ಸಮಯದಲ್ಲಿ ಭೇಟಿ ನೀಡಲು ಬೆಸ್ಟ್ ಜಾಗ. ಇಲ್ಲಿ ಅಪರೂಪದ ಸಸ್ಯಗಳು ಹಾಗು ಸಾಹಸ ಚಟುವಟಿಕೆಗಳನ್ನು ಆನಂದಿಸಬಹುದು. ಆಗುಂಬೆಯ ಪ್ರವಾಸಕ್ಕೆ ಹೋದಾಗ ನೀವು ಸಾಕಷ್ಟು ಧಾರ್ಮಿಕ ತಾಣಗಳಿಗೆ ಕೂಡಾ ಭೇಟಿ ನೀಡ ಬಹುದಾಗಿದೆ.

ಕೊಡಚಾದ್ರಿ
ಕಾಂಕ್ರೀಟ್ ಕಾಡನ್ನು ನೋಡಿ ಬೇಸರ ಹೊಂದಿದ್ದರೆ ಕೊಡಚಾದ್ರಿ ನಿಮಗೆ ಒಳ್ಳೆಯ ಸ್ಥಳ ಎನ್ನಿಸಿ ಕೊಳ್ಳುವುದರಲ್ಲಿ ಎರಡು ಮಾತಿಲ್ಲ.ಎತ್ತ ನೋಡಿದರು ನಿತ್ಯಹರಿದ್ವರ್ಣ ಕಾಡುಗಳ ಅದ್ಭುತ ನೋಟ ಕಣ್ಣಿಗೆ ಬೀಳುತ್ತದೆ. ಜಡವಾದ ಮನಸ್ಸಿಗೆ ಪಕ್ಷಿಗಳ ಕಲರವ ಹೊಸ ಉತ್ಸಾಹ ತುಂಬುತ್ತದೆ. ಟ್ರೆಕ್ಕಿಂಗ್ (Trekking) ಪ್ರೀಯರಿಗೆ ಈ ತಾಣ ಹೇಳಿ ಮಾಡಿಸಿದ ಹಾಗೆ ಇದೆ. ಪ್ರಕೃತಿಯನ್ನು ಆರಾಧಿಸುವ ಹಾಗು ಸಾಹಸ ಕೈಗೊಳ್ಳಲು ಬಯಸುವ ಮಂದಿ ಕೊಡಚಾದ್ರಿಯ (Kodachadri) ಪ್ರವಾಸ ಕೈಗೊಳ್ಳಲೇಬೇಕು.

Exit mobile version