ಕರ್ನಾಟಕ ಹೈಕೋರ್ಟ್‍ನಲ್ಲಿ ನಮಾಜ್ ದೃಶ್ಯ ಚಿತ್ರೀಕರಣ : ಎಫ್‍ಐಆರ್ ದಾಖಲು!

highcourt

ಬೆಂಗಳೂರು : ಕರ್ನಾಟಕ ಹೈಕೋರ್ಟ್(Karnataka Highcourt) ಆವರಣದಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರು ನಮಾಜ್ ಮಾಡುತ್ತಿರುವ ದೃಶ್ಯವನ್ನು ಚಿತ್ರೀಕರಣ ಮಾಡಿದ ಮತ್ತು ಅದನ್ನು ಪ್ರಸಾರ ಮಾಡಿದ ಮಾದ್ಯಮಗಳ(Media) ವಿರುದ್ದ ಹೈಕೋರ್ಟ್‍ನ ಉಸ್ತುವಾರಿ ರಿಜಿಸ್ಟರ್ ದೂರು ದಾಖಲಿಸಿದ್ದಾರೆ.

ಹೈಕೋರ್ಟ್ ಉಸ್ತುವಾರಿ ರಿಜಿಸ್ಟರ್ ಎನ್.ಜಿ. ದಿನೇಶ್ ದೂರಿನ ಅನ್ವಯ ವಿಧಾನಸೌಧ ಠಾಣೆಯ ಪೊಲೀಸರು ಹೈಕೋರ್ಟ್ ಆವರಣದಲ್ಲಿ ನಮಾಜ್ ಮಾಡಿರುವ ದೃಶ್ಯವನ್ನು ಚಿತ್ರೀಕರಿಸಿದ ಮತ್ತು ಅದನ್ನು ಪ್ರಸಾರ ಮಾಡಿದ ಮಾದ್ಯಮದ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆಗೆ ಕೈಗೊಂಡಿದ್ದಾರೆ. ಇನ್ನು ಭಾರತೀಯ ದಂಡ ಸಂಹಿಂತೆ ಪ್ರಕಾರ ವಿಧಿ 447 ಮತ್ತು ವಿಧಿ 505 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ರೀತಿಯ ದೃಶ್ಯಗಳನ್ನು ಪ್ರಸಾರ ಮಾಡುವ ಮೂಲಕ ಸಮುದಾಯಗಳ ನಡುವೆ ದ್ವೇಷ ಹರಡುವ ಮತ್ತು ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಹೀಗಾಗಿ ಈ ರೀತಿಯ ದೃಶ್ಯಗಳ ಪ್ರಸಾರಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎನ್ನಲಾಗಿದೆ. ಇನ್ನು 1.47 ನಿಮಿಷಗಳ ವಿಡಿಯೋದಲ್ಲಿ “ಕರ್ನಾಟಕ ಹೈಕೋರ್ಟ್‍ನಲ್ಲಿ ನಮಾಜ್” ಎಂಬ ಅಡಿಬರಹ ನೀಡಿ, ಮೇ 14ರಂದು ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯವನ್ನು ಪ್ರಸಾರ ಮಾಡಲಾಗಿತ್ತು.

ಮುಖ್ಯನ್ಯಾಯಾಧೀಶರ ಅನುಮತಿಯಿಲ್ಲದೇ ಕೋರ್ಟ್ ಆವರಣದಲ್ಲಿ ಚಿತ್ರೀಕರಣ ಮಾಡುವಂತಿಲ್ಲ. ಅದರಲ್ಲೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಈ ರೀತಿಯ ದೃಶ್ಯಗಳನ್ನು ಚಿತ್ರೀಕರಣ ಮಾಡುವಂತಿಲ್ಲ ಎಂದು ಹೈಕೋರ್ಟ್ ಉಸ್ತುವಾರಿ ರಿಜಿಸ್ಟರ್ ಸ್ಪಷ್ಟಪಡಿಸಿದ್ದಾರೆ.

Exit mobile version