ನಗರಾಭಿವೃದ್ಧಿ ಅಧಿಕಾರಿಗಳ ಮುಂಬಡ್ತಿಗೂ ಕೋಟಿ ರೂ. ಲಂಚ ಬೇಡಿಕೆ ; ಸಿಎಂ ಬೊಮ್ಮಾಯಿ ಅವರಿಗೆ ಲಿಖಿತ ದೂರು ಸಲ್ಲಿಕೆ!

chief minister

`ದ ಫೈಲ್‘ ಪತ್ರಿಕೆ ನೀಡಿರುವ ವರದಿಯ ಅನುಸಾರ, ಇಂಜಿನಿಯರ್‍ಗಳ ಮುಂಬಡ್ತಿಗೂ ಲಂಚ(Bribe) ಬೇಡಿಕೆಗಳು ಕೇಳಿಬಂದಿದ್ದು, ಈ ಪ್ರಕರಣ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಸಿಎಂ(CM) ಬಸವರಾಜ್ ಬೊಮ್ಮಾಯಿ(Basavaraj Bommai) ಅವರಿಗೆ ಲಿಖಿತ ಪತ್ರದ ಮೂಲಕ ದೂರು ನೀಡಲಾಗಿದೆ.

ಕಾಮಗಾರಿ ಬಾಕಿ ಮೊತ್ತ ಬಿಡುಗಡೆಗೆ ಶೇ.40 ರಷ್ಟು ಲಂಚ ಕೊಡಬೇಕು ಎಂಬ ಬೇಡಿಕೆಗಳು ಮುಂದಿಡಲಾಗುತ್ತಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ಬಲವಾದ ಆರೋಪ ಕೇಳಿ ಬಂದಿದ್ದ ಹಿನ್ನಲೆ, ಇದೀಗ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿರುವ ನಗರಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಗಳ ಮುಂಬಡ್ತಿಗೂ ಕೋಟಿ ರೂಪಾಯಿಗಳ ಲಂಚ ಕೇಳಲಾಗುತ್ತಿದೆ ಎಂಬ ಆರೋಪ ಸದ್ಯ ಬಲವಾಗಿದೆ.

ರಾಜ್ಯ ಸರ್ಕಾರದ ಜಲ ಸಂಪನ್ಮೂಲ, ಲೋಕೋಪಯೋಗಿ(PWD) ಮತ್ತು ನಗರಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳಲ್ಲಿ 40% ಲಂಚ ಕಬಳಿಸಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ವಿಚಾರಣೆ ನಡೆಸಿ ವರದಿ ನೀಡಲು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‍ಸಿಂಗ್ ಅವರಿಗೆ ಆದೇಶ ನೀಡಲಾಗಿತ್ತು. ಆದ್ರೆ ಈಗ ಅವರೇ ಮುಖ್ಯಸ್ಥರಾಗಿರುವ ಇಲಾಖೆಯಲ್ಲಿಯೇ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯೊಬ್ಬರು ಇಂಜನಿಯರ್‍ಗಳ ಮುಂಬಡ್ತಿಗೆ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಬೆತ್ತಲಾಗಿದೆ.!

image credits : The File

ಬಿಬಿಎಂಪಿಯ 65 ಇಂಜಿನಿಯರ್‍ಗಳಿಗೆ ಮುಂಬಡ್ತಿ ನೀಡಲು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಲಂಚ ಪಡೆಯಲು ಬೇಡಿಕೆ ಇಟ್ಟಿದ್ದಾರೆ. ಒಂದು ಕಡೆಯಿಂದ ಹಣ ವರ್ಗಾವಣೆ ಆದ ನಂತರವೇ ಮತ್ತೊಂದು ಕಡೆ ಆಯಾ ಸಂಬಂಧದ ಕಡತಕ್ಕೆ ಅನುಮೋದನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಸಂಬಂಧಿಸಿದ ಇಂಜಿನಿಯರ್‍ಗಳಿಗೆ ಸಂದೇಶ ರವಾನಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಈ ಕಡತವು ನಗರಾಭಿವೃದ್ಧಿ ಇಲಾಖೆಯಲ್ಲಿ ಅನುಮೋದನೆಗೆ ಇನ್ನು ಬಾಕಿ ಉಳಿದಿದೆ. ಈ ವಿಭಾಗದಲ್ಲಿ 40 ಸಹಾಯಕ ಇಂಜಿನಿಯರ್ ಹುದ್ದೆ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್(ಎಇಇ), 7 ಸಹಾಯಕ ಕಾರ್ಯನಿರ್ವಾಹಕ(ಎಇಇ) ಹುದ್ದೆಯಿಂದ ಕಾರ್ಯನಿರ್ವಾಹಕ (ಇಇ) ಹುದ್ದೆಗೆ ಮತ್ತು 5 ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಯಿಂದ ಸೂಪರಿಂಡೆಂಟ್ ಇಂಜಿನಿಯರ್(ಎಸ್‍ಇ) ಹುದ್ದೆಗೆ ಮುಂಬಡ್ತಿ ನೀಡಬೇಕಿದೆ. ಮುಂಬಡ್ತಿ ನೀಡುವ ಪ್ರಕ್ರಿಯೆಗೆ ಇಲಾಖೆಯಲ್ಲಿ ಚಾಲನೆ ನೀಡಿದ್ದ ಉನ್ನತ ಅಧಿಕಾರಿಯೊಬ್ಬರು ಅನುಮೋದನೆಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

image credits : The File

ಈ ಕಡತವನ್ನು ಅನಮೋದಿಸಬೇಕಾದರೆ ಲಂಚ ನೀಡಬೇಕೆಂದು, ನಿಮ್ಮ ಹೆಸರನ್ನು ಉಪಯೋಗಿಸಿ 4.5 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆದಿರುತ್ತಾರೆ( ಎಇ ಇಂದ ಎಇಇಗೆ ಎರಡು ಕೋಟಿ, ಎಇಇ ಇಂದ ಇಇಗೆ 1 ಕೋಟಿ ಮತ್ತು ಇಇ ಇಂದ ಎಸ್‍ಇ 1.5 ಕೋಟಿ). ಈ ಅಧಿಕ ಪ್ರಮಾಣದ ಲಂಚದ ಹಣ ಪಾವತಿಸಲು ಭ್ರಷ್ಟ ಬಿಬಿಎಂಪಿ ಇಂಜನಿಯರ್‍ಗಳು ಈಗಾಗಲೇ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿರುತ್ತಾರೆ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ಸ್ಪಷ್ಟಪಡಿಸಿದೆ.

Exit mobile version