Bengaluru : ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಯುತ್ತಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Results) ಪ್ರಕಟವಾಗಿದೆ. ಈ ಬಾರಿ ಶೇಕಡ 83.88 ಫಲಿತಾಂಶ ದಾಖಲಾಗಿದೆ. ಒಟ್ಟು 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ .
ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಗೊಳಿಸಿದೆ . 11 ಗಂಟೆ ನಂತರ karresults.nic.in ವೆಬ್ಸೈಟ್ ನಲ್ಲಿ ಫಲಿತಂಶ ಲಭ್ಯವಾಗಲಿದೆ .
625 ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳ ವಿವರ :
ಭೂಮಿಕಾ ಪೈ- ನ್ಯೂ ಮೆಕಾಲೆ ಆಂಗ್ಲ ಶಾಲೆ, ಹೊಸೂರು ರಸ್ತೆ, ಬೆಂಗಳೂರು
ಯಶಸ್ಗೌಡ- ಬಿಜಿಎಸ್ ಶಾಲೆ, ಅಗಲಗುರ್ಕಿ, ಚಿಕ್ಕಬಳ್ಳಾಪುರ ಜಿಲ್ಲೆ (Chikkaballapur District)
ಅನುಪಮಾ ಶ್ರೀಶೈಲ್ ಹಿರೆಹೋಳಿ – ಶ್ರೀಕುಮಾರೇಶ್ವರ ಶಾಲೆ,ಸವದತ್ತಿ, ಬೆಳಗಾವಿ (Belagavi)
ಭೀಮನಗೌಡ-ಆಕ್ಸ್ಫರ್ಡ್ ಆಂಗ್ಲ ಶಾಲೆ, ನಾಗರಬೆಟ್ಟ, ವಿಜಯಪುರ (Vijayatapur)
ಬಾಲಕಿಯರದ್ದೇ ಮೇಲುಗೈ
ಈ ಬಾರಿಯೂ ಎಂದಿನಂತೆ ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ . 2023 ರಲ್ಲಿ ಒಟ್ಟಾರೆ 4,25,968 ಬಾಲಕರು ಪರೀಕ್ಷೆ ಎದುರಿಸಿದ್ದು 3,41,108 ರಷ್ಟು ಅಂದರೆ 80.08% ಶೇಕಡ ತೇರ್ಗಡೆಯಾಗಿದ್ದಾರೆ . ಬಾಲಕಿಯರು 87.87 % ಶೇಕಡ ತೇರ್ಗಡೆಯಾಗಿದ್ದಾರೆ ಇದರಲ್ಲಿ 4,09,134 ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಿದ್ದು 3,59,511 ವಮಂದಿ ತೇರ್ಗಡೆಯಾಗಿದ್ದಾರೆ
ಇದನ್ನೂ ಓದಿ : https://vijayatimes.com/2023-sslc-exam-result-declared/
ಜಿಲ್ಲಾವಾರು ಫಲಿತಾಂಶ :
ದ್ವೀತಿಯ PUC ಫಲಿತಾಂಶ ದಲ್ಲಿ ಮುಂದೆ ಇದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ (Dakshina Kannada District) SSLC ಫಲಿತಾಂಶದಲ್ಲಿ ಹದಿನೆಂಟು ಮತ್ತು ಹತ್ತೊಂಬತ್ತನೇ ಸ್ಥಾನ ಗಳಿಸಿಕೊಂಡಿದೆ . ಉಡುಪಿ ಶೇ 89.49 ಗಳಿಸಿದ್ದು ,ದಕ್ಷಿಣ ಕನ್ನಡ ಶೇ. 89.47 ರಷ್ಟು ಫಲಿತಾಂಶ ಗಳಿಸಿದೆ.
ಮೇ 15 ರಿಂದ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ :
ಮೇ 15ರಿಂದ ಮೇ 21ರವರೆಗೆ ಮರುಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಮೇ 14 ರಿಂದ ಅರ್ಜಿ ಸಲ್ಲಿಸಬಹುದು . ಯಾವುದೇ ಅನುತ್ತೀರ್ಣರಾದ ವಿದ್ಯಾರ್ಥಿಗಳು ದೃತಿಗೆಡದೆ ತಾಳ್ಮೆಯಿಂದ ಇದ್ದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಎಂದು ಇದೆ ವೇಳೆ ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ .
- ಮೊಹಮ್ಮದ್ ಶರೀಫ್