ಚಿತ್ರ ಮಂದಿರಗಳಲ್ಲಿ 100% ಆಸನಗಳ ಭರ್ತಿಗೆ ಸರ್ಕಾರ ಸಮ್ಮತಿ!

Full

ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ವಿಧಿಸಿದ್ದ ನಿಯಮಗಳನ್ನು ರದ್ದುಗೊಳಿಸಿದ್ದು, ಫೆ 5 ರಿಂದ ಎಲ್ಲಾ ಚಿತ್ರಮಂದಿರಗಳಲ್ಲಿ ಶೇ 100% ಆಸನಗಳನ್ನು ಭರ್ತಿಮಾಡಲು ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಫೆಬ್ರವರಿ 5ರ ಶನಿವಾರದಿಂದ ಎಲ್ಲ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಇದರ ಜೊತೆ ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎನ್ನುವ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.

ಕರ್ನಾಟಕದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಕಳೆದ ಜನವರಿ 31ರಿಂದ ರಾತ್ರಿ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿತ್ತು. ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿತ್ತು. ತದನಂತರದಲ್ಲಿ ಹೋಟೆಲ್ಗಳಿಗೆ ಪಬ್ ಆ್ಯಂಡ್ ರೆಸ್ಟೋರೆಂಟ್,. 100 ರಷ್ಟು ಅವಕಾಶ ನೀಡಲಾಗಿತ್ತು. ಆರೋಗ್ಯ ಸಚಿವ ಕೆ. ಸುಧಾಕರ್ ಮಾಧ್ಯಮದವರೊಂದಿಗೆ ಮಾತನಾಡಿ, ಡಿಸೆಂಬರ್ ಕೊನೆ ವಾರದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಕೆಲ ಕ್ರಮ ತೆಗೆದುಕೊಂಡಿದ್ದೇವೆ. ನೈಟ್ ಕರ್ಫ್ಯೂ, ವೀಕೆಂಡ್ ಸೇರಿದಂತೆ ಹಲವು ನಿಯಮಗಳನ್ನು ತೆಗೆದುಕೊಂಡಿದ್ದೆವು.

ಇಂದು ಆಸ್ಪತ್ರೆ ದಾಖಲಾತಿ ಶೇ.5 ರಿಂದ ಶೇ.32ಕ್ಕೆ ಇಳಿಕೆಯಾಗಿದೆ. ನಾಳೆಯಿಂದ ಚಲನಚಿತ್ರ ಮಂದಿರಗಳಿಗೆ ರಿಲ್ಯಾಕ್ಸ್ 100% ವಿನಾಯ್ತಿ, 50% ನಿಯಮ ಸಡಿಲಿಸಿ, ಜಿಮ್, ಈಜುಕೊಳ, ಯೋಗ ಕೇಂದ್ರಗಳಿಗೂ 100% ಭರ್ತೀಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

Exit mobile version