ಬೆಳಗಾವಿ ಸೆ 6 : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 36 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗೆದ್ದು ಹಿನ್ನಡೆ ಅನುಭವಿಸಿದೆ. ,ಹಾಗೆ ಎಂಇಎಸ್ 2 ವಾರ್ಡ್‌ಗಳಲ್ಲಿ ಜಯಭೇರಿ ಭಾರಿಸಿದರೆ ಇನ್ನುಳಿದ 11 ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ.
58 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 36 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸುವ ಮೂಲಕ 25 ವರ್ಷದ ನಂತರ ಸ್ವತಂತ್ರ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಮಹಾನಗರ ಪಾಲಿಕೆ | ವಾರ್ಡ್ | ಬಿಜೆಪಿ | ಕಾಂಗ್ರೆಸ್ | ಎಂಇಎಸ್ | ಇತರರು |
ಬೆಳಗಾವಿ ಪಾಲಿಕೆ | 58 | 36 | 9 | 02 | 11 |