ಹದ್ದು ಮೀರಿ ವರ್ತಿಸುತ್ತಿರುವ ಸರ್ಕಾರಿ ಅಧಿಕಾರಿ

NO rules to KAS officers  | Weight ad measures department controller Sri Roopa has broken rules.

ಹದ್ದು ಮೀರಿದ ಅಧಿಕಾರಿ! ಕೆಎಎಸ್ ಅಧಿಕಾರಿಗಳಿಗೆ ಕಾನೂನು ಕಾಲ ಕಸ. ಒಂದು ಇಲಾಖೆಯಲ್ಲಿದ್ದು ಇನ್ನೊಂದು ಇಲಾಖೆಯವರಿಗೆ ಪ್ರೊಮೋಷನ್ ನೀಡಿದ ಕೆಎಎಸ್ ಅಧಿಕಾರಿ, ಮಾಪನ ಇಲಾಖೆ ನಿಯಂತ್ರಕಿ ಶ್ರೀ ರೂಪ.

ಯಸ್‌, ಇಂಥಾ ಒಂದು ಗಂಭೀರ ಆರೋಪ ಬಿಜೆಪಿ ಸರ್ಕಾರದ ಮೇಲಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಮೇಲೆ ನಿಯಂತ್ರಣವೇ ಇಲ್ಲ. ಅಧಿಕಾರಿಗಳ ಕೈಗೊಂಬೆಯಾಗಿದ್ದಾರೆ ಸಚಿವರು.

ಅಧಿಕಾರಿಗಳು ಆಡಿದ್ದೇ ಅಟ ಆಗಿದೆ. ಅವರಿಗೆ ಕಾನೂನು ಕಾಲ ಕಸ ಆಗಿದೆ ಅನ್ನೋದು ಸಾರ್ವಜನಿಕರ ನೇರ ಆರೋಪ ಆಗಿದೆ.

ಇವರು ಈ ರೀತಿ ಕಟುವಾಗಿ ಆರೋಪಕ್ಕೆ ಪೂರಕವಾದ ಸಾಕ್ಷಿ ವಿಜಯಟೈಮ್ಸ್‌ಗೆ ಸಿಕ್ಕಿದೆ. ಅದೇನು ಗೊತ್ತಾ?  ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಯಂತ್ರಕಿಯಾಗಿರುವ ಕೆಎಎಸ್‌ ಅಧಿಕಾರಿ ಶ್ರೀರೂಪ ಅವರ ಕಾನೂನನ್ನು ಕಾಲ ಕಸ ಮಾಡಿ ಕಾರ್ಯನಿರ್ವಹಿಸಿದ್ದಾರೆ.

ಕಾನೂನು ಮಾಪನ ಶಾಸ್ತ್ರ ನಿಯಂತ್ರಕಿಯಾಗಿ ಅಧಿಕಾರಿ ಸ್ವೀಕರಿಸಿದ ಶ್ರೀರೂಪ ಅವರು ತಮಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಸಹ ಕರ್ನಾಟಕ ರೂರಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ ಅಂದ್ರೆ  ಕೆಆರ್‌ಐಡಿಎಲ್‌ನ ಇಲಾಖಾ ಮುಂಬಡ್ತಿ ಸಮಿತಿಯ ಮುಖ್ಯ ಆಡಳಿತಾಧಿಕಾರಿಯ ಸ್ಥಾನದಲ್ಲಿ ನಿಂತು 40 ಕ್ಕೂ ಹೆಚ್ಚು ಮಂದಿಗೆ ಮುಂಬಡ್ತಿ ನೀಡಿದ್ದಾರೆ.

ವಿಜಯಟೈಮ್ಸ್ಗೆ ಸಿಕ್ಕಿದ ದಾಖಲೆಗಳನ್ನು ಅವಲೋಕಿಸಿದಾಗ ಕೆಎಎಸ್ ಅಧಿಕಾರಿ  ಶ್ರೀರೂಪ ಅವರು ಕರ್ತವ್ಯ ಲೋಪ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತೆ.  

ಕಾನೂನು ಮಾಪನ ಶಾಸ್ತ್ರ ನಿಯಂತ್ರಕಿಯಾಗಿ ಶ್ರೀರೂಪ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನೇನಾದ್ರೂ ನೀಡಲಾಗಿದೆಯಾ ಅಂತ ನಾವು ಆರ್‌ಟಿಐಯಲ್ಲಿ ಕೇಳಿದಾಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಇಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.

ಹಾಗಾದ್ರೆ ಶ್ರೀ ರೂಪ ಅವರು ಅಧಿಕಾರವೇ ಇಲ್ಲದೆ ಅದು ಹೇಗೆ ಬೇರೆ ಇಲಾಖೆಯ ಅಷ್ಟೊಂದು ಮಂದಿಗೆ ಮುಂಬಡ್ತಿ ಕೊಟ್ರು ಅನ್ನೋದೇ ಯಕ್ಷ ಪ್ರಶ್ನೆ.

ಈ ಬಗ್ಗೆ ಈ ರೂಪ ಅವರ ಬಳಿಯೇ ವಿಜಯಟೈಮ್ಸ್‌ ವರದಿಗಾರರು ಹೋಗಿ ಪ್ರಶ್ನಿಸಿದಾಗ ಮೇಲಾಧಿಕಾರಿಗಳ ಆಜ್ಞೆಯಂತೆ ನಾನು ಮಾಡಿದ್ದೇನೆ ಅಂತ ಹಾರಿಕೆಯ ಉತ್ತರ ಕೊಟ್ರು.

ಶ್ರೀರೂಪ ಅವರಿಗೆ ಆಜ್ಞೆ ನೀಡಿದ ಮೇಲಾಧಿಕಾರಿಗಳು ಯಾರು? ಅವರಿಗೆ ಸರ್ಕಾರದ ನಿಯಮಗಳು ತಿಳಿದಿಲ್ಲವೇ? ಇಂಥಾ ಗಂಭೀರವಾದ ಲೋಪ ಎಸಗಲು ಕಾರಣ ಏನು? ಈ ಎಲ್ಲಾ ಅಂಶಗಳ ಬಗ್ಗೆ ಸರ್ಕಾರ ಗಂಭೀರ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಅನ್ನೋದು ವಿಜಯಟೈಮ್ಸ್ ಆಗ್ರಹವಾಗಿದೆ.

ಜಗದೀಶ್‌, ವಿಜಯಟೈಮ್ಸ್‌

Exit mobile version