‘ಕಸ ಸಂಗ್ರಹಕ್ಕೆ ಶುಲ್ಕ ವಿಧಿಸಲ್ಲ’; ಆಡಳಿತಾಧಿಕಾರಿ

ಬೆಂಗಳೂರು, ಡಿ. 17: ಪೌರ ಕಾರ್ಮಿಕರ ವೇತನವನ್ನು ಹೆಚ್ಚಿಸುವ ಸಲುವಾಗಿ 2021ರ ಜನವರಿಯಿಂದ ಬೆಂಗಳೂರಿನಲ್ಲಿ ಕಸ ಸಂಗ್ರಹ ಮಾಡುವುದಕ್ಕೂ ಶುಲ್ಕ ವಿಧಿಸಲು ಮುಂದಾಗಿತ್ತು. ಈಗಾಗಲೇ ಕೊರೋನಾದಿಂದಾಗಿ ಬೇಸತ್ತ ಜನ ಈ ಬಿಬಿಎಂಪಿಯ ಈ ನಡೆಗೆ ಭಾರಿ ಸಾರ್ವಜನಿಕರು ವಿರೋಧ ವ್ಯಕ್ತವಾಗಿತ್ತು. ಬಿಬಿಎಂಪಿ ಸಾರ್ವಜನಿಕರಿಗೆ ಕೊನೆಗೂ ಮಣಿದಿದೆ. ಇಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಕಸ ಸಂಗ್ರಹಕ್ಕೆ ಶುಲ್ಕ ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

ನಿನ್ನೆ ಬಿಬಿಎಂಪಿ ಮೂಲಗಳು “ಪೌರಕಾರ್ಮಿಕರ ವೇತನವನ್ನು ಹೆಚ್ಚಿಸುವ ಸಲುವಾಗಿ ಜನವರಿ 1ರಿಂದ ಪಾಲಿಕೆ ಕಸ ಸಂಗ್ರಹಣೆ  ಮಾಡಲು ಸಹ ಶುಲ್ಕ ವಿಧಿಸಲಿದ್ದು, ಮನೆಗಳಿಂದ 200 ರೂ. ಹಾಗೂ ವಾಣಿಜ್ಯ ಸಂಕೀರ್ಣಗಳಿಂದ 500 ರೂ. ಶುಲ್ಕವನ್ನು ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದವು.   

Exit mobile version