ಕೆಇಎ ಪರೀಕ್ಷೆ ಅಕ್ರಮ ಪ್ರಕರಣ: ಪೊಲೀಸ್ ತನಿಖೆಯಲ್ಲಿ ವಾಟ್ಸ್​ಆ್ಯಪ್ ಚಾಟ್ ಬಯಲು

Yadgiri: ಯಾದಗಿರಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್​ಡಿಎ ಪರೀಕ್ಷೆಯಲ್ಲಿನ (KEA exam illegal case) ಅಕ್ರಮ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಮತ್ತೊಂದು

KEA exam illegal case

ವಾಟ್ಸಪ್ ಚಾಟ್ ಬಯಲಾಗಿದ್ದು, ಮತ್ತೊಂದೆಡೆ ಕಲ್ಬುರ್ಗಿಯಲ್ಲಿ ನಡೆದ ಈ ಪರೀಕ್ಷಾ ಅಕ್ರಮದ ಕಿಂಗ್​ಪಿನ್​ ಆರ್​ಡಿ ಪಾಟೀಲ್ (RD Patil)​ ಆನ್‌ಲೈನ್‌ ಗೇಮ್​ಗಳಲ್ಲಿ ಹಣ ಹೂಡಿಕೆ ಮಾಡಿ ಆಟ ಆಡುತ್ತಿದ್ದ

ವಿಚಾರ ಬೆಳಕಿಗೆ ಬಂದಿದೆ. ವಾಟ್ಸ್​ಆ್ಯಪ್​ನಲ್ಲಿ ಕೋಡ್​ವರ್ಡ್ ಮೂಲಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಳುಹಿಸಿದ್ದು, ಅಕ್ರಮದ ಪ್ರಮುಖ ಆರೋಪಿ ಸಿದ್ದರಾಮ ಅಲಿಯಸ್ ಪುಟ್ಟು ಮೊಬೈಲ್​ನಿಂದ ಬಂದಿದ್ದ

ಉತ್ತರಗಳ ಪ್ರತಿ ಇದಾಗಿದೆ. ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ಅಭ್ಯರ್ಥಿಗೆ ಪ್ರಶ್ನೆ ಪತ್ರಿಕೆಯಲ್ಲಿದ್ದ (KEA exam illegal case) ಅಕ್ಷರಗಳ ಆಧಾರದಲ್ಲಿ ಉತ್ತರಗಳು ಬಂದಿವೆ.

ಸಾಮಾನ್ಯ ಜ್ಞಾನ, ಕನ್ನಡ ಹಾಗೂ ಕಂಪ್ಯೂಟರ್ (Computer) ಮೂರು ವಿಷಯಗಳ ಉತ್ತರಗಳನ್ನು ಈ ಕೋಡ್​​ವರ್ಡ್ (Code word) ಮೂಲಕ ರವಾನೆ ಮಾಡಿದ್ದು, ಏಳು ಅಕ್ಷರದ ಉತ್ತರವಿದ್ದರೆ ಏಳು ಅಂತ ಬರೆದು

ವಾಟ್ಸ್​ಆ್ಯಪ್​ (WhatsApp) ಮೂಲಕ ಕಳುಹಿಸಲಾಗಿದೆ. ಈ ಆರೋಪಿ ಪ್ರಕರಣದ ಕಿಂಗ್​ಪಿನ್ ಆರ್​ಡಿ ಪಾಟೀಲ್ ಗ್ಯಾಂಗ್​ಗೆ ಸೇರಿದವ ಎನ್ನಲಾಗುತ್ತಿದೆ.

ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್​ಪಿನ್ ಆರ್​ಡಿ ಪಾಟೀಲ್​ಗೆ ಆನ್‌ಲೈನ್‌ ಗೇಮ್​ಗಳಲ್ಲಿ (Online game) ಹಣ ಹೂಡಿಕೆ ಮಾಡಿ ಆಟ ಆಡುವ ಚಾಳಿ ಹೊಂದಿದ್ದನು ಎಂದು ತಿಳಿದುಬಂದಿದೆ.

ಆನ್ ಲೈನ್​ನಲ್ಲಿ ಕ್ಯಾಸಿನೊದಲ್ಲಿ ಆರ್ ಡಿ ಪಾಟೀಲ್ ಗೇಮ್ ಆಡುತ್ತಿದ್ದನು. MPC 91 ನಲ್ಲಿ ನಿತ್ಯವು ಆಟವಾಡುತ್ತಿದ್ದ.

ಕೆಲವೇ ತಿಂಗಳಲ್ಲಿ 30 ಲಕ್ಷಕ್ಕೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದನು. ಆನ್‌ಲೈನ್ ಗೇಮ್‌ಗಾಗಿ ಮೂರು ಮೊಬೈಲ್ ನಂಬರ್ ಅನ್ನು (Mobile Number) ಬಳಕೆ ಮಾಡುತ್ತಿದ್ದು, ಆ ಮೂಲಕ ಮೂರು ಅಕೌಂಟ್​ಗಳಲ್ಲಿನ

ಅಕ್ರಮವಾಗಿ ಬಂದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದನು. ಈ ಎಲ್ಲಾ ವಿಚಾರಗಳು ಅಪಾರ್ಟ್ಮೆಂಟ್‌ನಲ್ಲಿ‌ (Apartment) ಸಿಕ್ಕ ಮೊಬೈಲ್‌ ಪರಿಶೀಲನೆ ವೇಳೆ ಬಯಲಿಗೆ ಬಂದಿದೆ.

ಇದನ್ನು ಓದಿ: ಚರ್ಮದ ಸಮಸ್ಯೆ, ರಕ್ತದೊತ್ತಡ, ಬಂಜೆತನ ನಿವಾರಣೆ ಮಾಡಲು ಈ ಹಣ್ಣುಗಳನ್ನು ಸೇವಿಸಿ.

Exit mobile version