Thiruvananthapuram: ಕೊಲ್ಲಂನ ಮುತ್ತುಪಿಲಕ್ಕಾಡು ಶ್ರೀ ಪಾರ್ಥಸಾರಥಿ (Shree Parthasarathy) ದೇವಸ್ಥಾನದ ಆವರಣದಲ್ಲಿ (Kerala HC new order) ಕೇಸರಿ ಧ್ವಜ ಕಟ್ಟಲು ಅನುಮತಿ
ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ (High Court) ವಜಾಗೊಳಿಸಿದೆ. ದೇವಾಲಯಗಳು ಆಧ್ಯಾತ್ಮಿಕ ಸಮಾಧಾನ ಮತ್ತು ನೆಮ್ಮದಿಯ ದಾರಿದೀಪಗಳಾಗಿ ನಿಲ್ಲುತ್ತವೆ, ಅವುಗಳ ಪಾವಿತ್ರ್ಯತೆ
ಮತ್ತು ಪೂಜ್ಯತೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಂತಹ ಪವಿತ್ರ ಆಧ್ಯಾತ್ಮಿಕ ಕೇಂದ್ರಗಳು ರಾಜಕೀಯ ತಂತ್ರಗಳು ಮತ್ತು ಉದ್ದೇಶಗಳು ಬಳಕೆಯಾಗಬಾರದು. ಅರ್ಜಿದಾರರು ದೇವಾಲಯದಲ್ಲಿ ನಿರ್ವಹಿಸಬೇಕಾದ
ಪ್ರಶಾಂತ ಮತ್ತು ಪವಿತ್ರ ವಾತಾವರಣದೊಂದಿಗೆ ಸ್ಪಷ್ಟವಾಗಿ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಇನ್ನು ಮುತ್ತುಪಿಲಕ್ಕಾಡು (Muthupilakka) ಶ್ರೀ ಪಾರ್ಥಸಾರಥಿ ದೇವಸ್ಥಾನದ ಭಕ್ತರೆಂದು ಹೇಳಿಕೊಳ್ಳುವ ಇಬ್ಬರು ವ್ಯಕ್ತಿಗಳು ಕೇರಳ ಹೈಕೋರ್ಟ್ಗೆ ಕೇಸರಿ ಧ್ವಜ ಕಟ್ಟಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.
ವಿಶೇಷ ಸಂದರ್ಭಗಳಲ್ಲಿ ಮತ್ತು ಹಬ್ಬಗಳ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಕೇಸರಿ ಧ್ವಜವನ್ನು ಹಾಕುವ ಅವರ ಪ್ರಯತ್ನಗಳನ್ನು ಪ್ರತಿವಾದಿಗಳು, ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ತಡೆಯುತ್ತಾರೆ.
ಹೀಗಾಗಿ ಧ್ವಜ ಕಟ್ಟಲು ಅಡ್ಡಿಯಾಗದಂತೆ ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶನ (Kerala HC new order) ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು.
ಅರ್ಜಿದಾರರಿಗೆ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಧ್ವಜಗಳು ಮತ್ತು ಹೂಗೊಂಚಲುಗಳಿಂದ ದೇವಾಲಯವನ್ನು ಅಲಂಕರಿಸಲು ಅವಕಾಶ ನೀಡುವುದು ದೇವಸ್ಥಾನವನ್ನು ರಾಜಕೀಯ
ರಣಾಂಗಣವಾಗಿ ಬಳಸಲು ಅನುಮತಿಸಿದಂತಾಗುತ್ತದೆ ಎಂದು ಪ್ರತಿವಾದಿಗಳು ವಾದಿಸಿದ್ದರು. ಅರ್ಜಿದಾರರ ಕ್ರಮಗಳಿಂದಾಗಿ ದೇವಾಲಯದ ಆವರಣದಲ್ಲಿ ಹಲವಾರು ಘರ್ಷಣೆಗಳು ನಡೆದಿವೆ, ಅವರಲ್ಲಿ
ಒಬ್ಬರು ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ವಾದಿಸಿದ್ದರು. ಈ ನಡುವೆ ದೇವಸ್ಥಾನದ ಆಡಳಿತ ಸಮಿತಿಯು ಯಾವುದೇ ರಾಜಕೀಯ ಪಕ್ಷಗಳ ಅಥವಾ ಸಂಘಟನೆಗಳ
ಧ್ವಜಗಳು, ಬ್ಯಾನರ್ ಇತ್ಯಾದಿಗಳನ್ನು “ಕಾಣಿಕೆ ಪೆಟ್ಟಿಗೆ” ಯ 100 ಮೀಟರ್ ವ್ಯಾಪ್ತಿಯೊಳಗೆ ಸ್ಥಾಪಿಸುವುದನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿದೆ.

ಈ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರು ತಾವು ಪ್ರಾರ್ಥಿಸಿದಂತೆ ದೇವಾಲಯದ ಆಚರಣೆಗಳನ್ನು ನಡೆಸಲು ಯಾವುದೇ ಕಾನೂನುಬದ್ಧ ಅಧಿಕಾರವನ್ನು ಪ್ರದರ್ಶಿಸಿಲ್ಲ. ಹೀಗಾಗಿ ಅವರಿಗೆ
ಧ್ವಜಗಳನ್ನು ಸ್ಥಾಪಿಸಲು ಅನುಮತಿಸಲಾಗುವುದಿಲ್ಲ ಎಂದು ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನು ಓದಿ: ಜನನ ಪ್ರಮಾಣ ಪತ್ರ ಕಡ್ಡಾಯ: ಅಕ್ಟೋಬರ್ 1 ರಿಂದ ಜನನ, ಮರಣ ಮಾಹಿತಿಗೆ ಡಿಜಿಟಲ್ ಟಚ್