ಶಬರಿಮಲೆ ಭಕ್ತರೇ, ಕೇರಳ ಹೈಕೋರ್ಟ್‌ನಿಂದ ಬಿದ್ದಿದೆ ಈ ತೀರ್ಪು! ಇದನ್ನು ಓದಿ ಬೆಟ್ಟ ಹತ್ತಿ

Thiruvananthapuram : ಕೇರಳದ(Kerala) ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತೆರಳುವ ಭಕ್ತರೇ ನಿಮಗೆ ಕೇರಳ ಹೈಕೋರ್ಟ್(Kerala High Court order) ಒಂದು ತೀರ್ಪು ಪ್ರಕಟಿಸಿದೆ.

ಆ ತೀರ್ಪನ್ನ ಓದಿ ನೀವು ಶಬರಿಮಲೆ ಬೆಟ್ಟ ಹತ್ತಬೇಕು. ಆ ತೀರ್ಪು ಏನು ಗೊತ್ತಾ? ಇನ್ಮುಂದೆ ನೀವು ಶಬರಿಮಲೆಗೆ ಹೋಗುವಾಗ ಫಿಲಂ ಸ್ಟಾರ್,

ರಾಜಕಾರಣಿಗಳ ಫೋಟೋ ಪೋಸ್ಟರ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ಕೇರಳ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.


ಇತ್ತಿಚೆಗೆ ಅಯ್ಯಪ್ಪ ಸನ್ನಿಧಿಗೆ ತೆರಳುವ ಸಂದರ್ಭಗಳಲ್ಲಿ ನಟ ಪುನೀತ್ ರಾಜ್‌ಕುಮಾರ್(Puneeth Rajkumar) ರವರ ಭಾವಚಿತ್ರಗಳನ್ನು ಹಲವು ಯಾತ್ರಿಗಳು ತೆಗೆದುಕೊಂಡು ಹೋದ ಹಲವು ಉದಾಹರಣೆಗಳಿವೆ.

ಆದರೆ ಇದಕ್ಕೆಲ್ಲ ಈಗ ಹೈಕೋರ್ಟ್ ನಿಂದ ಬ್ರೇಕ್ ಬಿದ್ದಿದೆ. ಇನ್ನು ಮುಂದೆ ಹೀಗೆ ಪೋಟೋಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ.

ಯಾತ್ರಾರ್ಥಿಗಳು ಶಬರಿಮಲೆ ಸನ್ನಿಧಾನಕ್ಕೆ ದೊಡ್ಡ ದೊಡ್ಡ ನಟರ ಪೋಟೋ,

ಅದಲ್ಲದೆ ರಾಜಕಾರಣಿಗಳ ಭಾವಚಿತ್ರಗಳನ್ನು ಹಾಗೂ ಬೇರೆ ಬೇರೆ ಪೋಸ್ಟರ್‌ಗಳು ಮತ್ತು ಬೃಹತ್ ಛಾಯಾಚಿತ್ರಗಳನ್ನು ತರುತ್ತಿರುವ ಬಗ್ಗೆ

ಶಬರಿಮಲೆ ಭಕ್ತರೊಬ್ಬರು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಮೇಲ್(Kerala High Court order) ಕಳುಹಿಸಿದ್ದರು.

ಇದನ್ನೂ ಓದಿ : https://vijayatimes.com/kantara-oscar-qualifying-round/

ಈ ದೂರಿನ ಆಧಾರದ ಮೇಲೆ ನ್ಯಾಯಾಲಯವು ಈ ವಿಚಾರವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿತು.

ಇದಕ್ಕೆ ಸಂಭದಪಟ್ಟಂತೆ ವಿಚಾರಣೆ ನಡೆಸುವ ಸಂದರ್ಭದಲ್ಲಿ, ಡ್ರಮ್ ವಾದಕ ಶಿವಮಣಿ(Shivamani) ರವರು ಅಲ್ಲಿಯೂ ಪ್ರದರ್ಶನ ನೀಡಿದ್ದರು ಎಂಬ ಸುದ್ದಿ ನ್ಯಾಯಾಲಯಕ್ಕೆ ತಿಳಿದುಬಂದಿತ್ತು.

ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರ (Anil K.Narendra) ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ ಕುಮಾರ್(PG Ajith Kumar) ನೇತೃತ್ವದಲ್ಲಿ ವಿಭಾಗಿಯ ಪೀಠ ಯಾತ್ರಿಕರೊಬ್ಬರ ಈ ದೂರಿನ ಆಧಾರದ ಮೇಲೆ ವಿಚಾರಣೆಯನ್ನು ನಡೆಸಿ,

ಪ್ರತಿಯೊಬ್ಬ ಅಯ್ಯಪ್ಪನ ಭಕ್ತ ತನ್ನ ಪೂಜಾ ಆದಾರವನ್ನು ತಿರುವಾಂಕೂರು ದೇವಸ್ಥಾನ ಮಂಡಳಿ ಪದ್ಧತಿಯಂತೆ ಸಾಂಪ್ರದಾಯಿಕವಾಗಿ ಅನುಸರಿಸುವಂತೆ ನೋಡಿಕೊಳ್ಳಬೇಕೆಂದು ನ್ಯಾಯಲಯ ನಿರ್ದೇಶನ ನೀಡಿದೆ.

ಆದ್ದರಿಂದಲೇ ಶಬರಿಮಲೆ ಸನ್ನಿಧಾನಂನ ಸೋಪಾನಂ ಮುಂದೆ ಯಾತ್ರಾರ್ಥಿಕರು ಡೋಲು ಬಾರಿಸಲು ಸೋಪಾನಂ ಅಧಿಕಾರಿ ಅನುಮತಿ ನೀಡಬಾರದು ಎಂದು ಟಿಡಿಬಿ(TDB) ತಿಳಿಸಿದೆ.

ದೇವರನ್ನು ಪೂಜಿಸುವ ಹಕ್ಕು ಸಾಂಪ್ರದಾಯಕ್ಕೆ ಅನುಗುಣವಾಗಿರಬೇಕು, ಯಾತ್ರೆಗಳು ಸೆಲೆಬ್ರಿಟಿಗಳ ಫೋಟೋ ಅಥವಾ ಪೋಸ್ಟರ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ಈ ಬಗ್ಗೆ ಟ್ರಾವಂಕೂರ್ ದೇವಸ್ವಂ ಬೋರ್ಡಿಗೆ ಹೈ ಕೋರ್ಟ್ ಆದೇಶ ನೀಡಿದೆ.

ಇದನ್ನೂ ಓದಿ : https://vijayatimes.com/bengaluru-metro-pillar-collapse/

ಹಾಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ(Sabarimala Ayyappa Swami) ಡ್ರಮ್ಮರ್ ಅಥವಾ ಬೇರೆ ಸಂಗೀತ ಉಪಕರಣ ಬಳಸುವಂತಿಲ್ಲ, ಆದರೆ ಇತ್ತೀಚಿಗೆ ಶಬರಿಮಲೆಯಲ್ಲಿ ಶಿವಮಣಿ ಬ್ರಹ್ಮರ ಡ್ರಮ್ಮರ್ ಬಳಸಿದ್ದರು ಎಂಬ ಕಾರಣಕ್ಕೆ ಕೇರಳ ಹೈಕೋರ್ಟ್ ಸುಮೊಟೊ(Suo Moto) ಪ್ರಕರಣ ದಾಖಲಿಸಿಕೊಂಡಿದೆ.

ಇಂತಹ ಘಟನೆಗಳು ಮರುಕಳಿಸದಂತೆ ಮಂಡಳಿಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೈಕೋರ್ಟ್ ತಿಳಿಸಿದೆ.

Exit mobile version