‘ಕೆಜಿಎಫ್’(KGF) ಈ ಹೆಸರು ಸೃಷ್ಟಿಸಿದ ಕ್ರೇಜ್ ಹಾಗು ಈ ಸಿನಿಮಾ ಧೂಳೆಬ್ಬಿಸಿದ ಪರಿ ನಿಮ್ಗೆಲ್ಲಾ ಗೊತ್ತೇ ಇದೆ.
ಈಗ ಕೆಜಿಎಫ್ 2 (KGF Chapter 2) ಚಿತ್ರದ ರಿಲೀಸ್ಗೆ ಅಭಿಮಾನಿಗಳು ದೀರ್ಘಕಾಲದಿಂದ ಕಾದಿದ್ದಾರೆ. ಇದೀಗ ಈ ಸಿನೆಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡ ದೇಶಾದ್ಯಂತ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಇದರೊಂದಿಗೆ ಚಿತ್ರದ ರಿಲೀಸ್ ಬಗ್ಗೆ ಹೊಸ ಮಾಹಿತಿಗಳನ್ನು ನೀಡಲಾಗುತ್ತಿದೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದ್ದು, ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಿನಿಮಾ ಬಗ್ಗೆ ನಿತ್ಯ ಒಂದೊಂದು ಅಪ್ಡೇಟ್ ಸಿಗುತ್ತಲೇ ಇದೆ. ಆದ್ರೆ ಕೆಜಿಎಫ್ ಚಾಪ್ಟರ್ 1 ರಂತಯೇ ಕಮಾಲ್ ಮಾಡುತ್ತಾ ಕೆಜಿಎಫ್-2, ಎಲ್ಲಾ ರೆಕಾರ್ಡ್ಸ್ ಗಳನ್ನ ಧೂಳಿಪಟ ಮಾಡುತ್ತಾ ಅನ್ನೋದನ್ನ ಕಾದು ನೋಡ್ಬೇಕು. ಇನ್ನು, ಕೆಜಿಎಫ್ 2’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್’(Hombale films) ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿದೆ.
ಕರ್ನಾಟಕದಲ್ಲಿ ಈ ಚಿತ್ರದ ಮುಂಗಡ ಬುಕ್ಕಿಂಗ್ ಯಾವಾಗ ಶುರುವಾಗುತ್ತೆ ಅಂತ ಅಭಿಮಾನಿಗಳು ಕಾತುರದಿಂದ ಕಾಯ್ತಾಯಿದ್ರು. ಸದ್ಯ ಈಗ ಆ ಕಾತುರಕ್ಕೆ ಉತ್ತರ ದೊರಕಿದೆ. ಇದೆ ಏಪ್ರಿಲ್ 10 ರಿಂದ ಮುಂಗಡ ಬುಕಿಂಗ್ ಅವಕಾಶ ಕಲ್ಪಿಸಲಾಗಿದೆ. ಇದೀಗ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದು, ಈ ಬಗ್ಗೆ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಹೀಗಾಗಿ ಅಂದಿನಿಂದ ಅಭಿಮಾನಿಗಳು ಏಪ್ರಿಲ್ 14ರಂದು ತೆರೆಕಾಣಲಿರುವ ಚಿತ್ರಕ್ಕೆ ಟಿಕೆಟ್ಗಳನ್ನು ಕಾಯ್ದಿರಿಸಬಹುದಾಗಿದೆ.

ಕೆಜಿಎಫ್ 2’ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದ್ದು, ಸಂಜಯ್ ದತ್, ರವೀನಾ ಟಂಡನ್, ಬಹುಭಾಷಾ ನಟ ಪ್ರಕಾಶ್ ರಾಜ್, ಅಚ್ಯುತ್ ಕುಮಾರ್ ಮೊದಲಾದವರು ಬಣ್ಣಹಚ್ಚಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಭುವನ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ 'ಕೆಜಿಎಫ್ 2’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಇದನ್ನು ನೋಡಿದ ಸೆನ್ಸಾರ್ ಸದಸ್ಯರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಉಮೈರ್ ಸಾಂಧು ಹೆಸರಿನ ಸಾಗರೋತ್ತರ ಸೆನ್ಸಾರ್‌ಬೋರ್ಡ್ ಸದಸ್ಯ ತಾವು ‘ಕೆಜಿಎಫ್ 2’ ಸಿನಿಮಾದ ಟ್ರೈಲರ್ ನೋಡಿರುವುದಾಗಿ ಹೇಳಿಕೊಂಡಿದ್ದಾರೆ.
ಟ್ರೈಲರ್ ಬಗ್ಗೆ ಸಹ ಹೇಳಿದ್ದಾರೆ. ‘ಈ ಟ್ರೈಲರ್ ಅದ್ಭುತವಾಗಿದೆ, ಗೂಸ್ಬಂಪ್ಸ್ ಮತ್ತು ಮೈಂಡ್ಬ್ಲೋಯಿಂಗ್ ಆಗಿದೆ. ಯಶ್‌ಗೆ ನಾವು ದೊಡ್ಡ ಅಭಿನಂದನೆಗಳು ಎಂದು ಪೋಸ್ಟ್ ಮಾಡಿದ್ದಾರೆ. ಕೆಜಿಎಫ್ ಚಾಪ್ಟರ್ 2’ ಚಿತ್ರದ ಟ್ರೇಲರ್ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಇದರ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಹಾಡುಗಳ ವಿಚಾರಕ್ಕೆ ಬಂದ್ರೆ ಅಲ್ಲೂ ಸೈ ಎನ್ನಿಸಿಕೊಂಡಿದೆ ಕೆಜಿಎಫ್-2. ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರದ ತೂಫಾನ್ ಹಾಡು ಭರ್ಜರಿ ಸದ್ದು ಮಾಡ್ತಿದೆ, ಹಾಗೇ ಮಾತೃ ಪ್ರೇಮವನ್ನು ಸಾರುವ ‘ ಗಗನ ನೀ..’ ಹಾಡು ಬುಧವಾರ ಬಿಡುಗಡೆಯಾಗಿದ್ದು, 22 ಗಂಟೆಯಲ್ಲಿ 2.7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.
