ಡಿಸೆಂಬರ್ 13ರೊಳಗೆ ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸ್ತೇವೆ : ಖಲಿಸ್ತಾನ ಉಗ್ರ ಪನ್ನು ಬೆದರಿಕೆ

New Delhi: ಖಲಿಸ್ತಾನಿ (Khalistan) ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು (Gurupatwant Singh Panna) ಡಿಸೆಂಬರ್ 13 (Khalistan Pannun Viral Video) ಅಥವಾ ಅದಕ್ಕಿಂತ

ಮೊದಲು ಭಾರತದ ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಹೇಳುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾನೆ. 2001ರಲ್ಲಿ ಭಯೋತ್ಪಾದಕರು ನಡೆಸಿದ ಸಂಸತ್ತಿನ ದಾಳಿಯ 22ನೇ ವಾರ್ಷಿಕೋತ್ಸವ

ಡಿಸೆಂಬರ್ (December) 13 ರಂದೇ (Khalistan Pannun Viral Video) ನಡೆಯಲಿದೆ.

2001ರ ಸಂಸತ್ ಮೇಲಿನ ದಾಳಿಯ ಅಪರಾಧಿ ಅಫ್ಜಲ್ ಗುರುವಿನ ಪೋಸ್ಟರ್ ಅನ್ನು ಒಳಗೊಂಡಿರುವ ವೀಡಿಯೊದಲ್ಲಿ ‘ದೆಹಲಿ ಬನೇಗಾ ಖಲಿಸ್ತಾನ್’ (Delhi Banega Khalistan)

(ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ) ಎಂಬ ಶೀರ್ಷಿಕೆಯೊಂದಿಗೆ ಪನ್ನುನ್, ಭಾರತೀಯ ಏಜೆನ್ಸಿಗಳು ತನ್ನನ್ನು ಕೊಲ್ಲುವ ಸಂಚು ವಿಫಲವಾಗಿದೆ ಎಂದು ಹೇಳಿಕೊಂಡಿದ್ದಾನೆ. ಇನ್ನು ಗುರುಪತ್ವಂತ್

ಸಿಂಗ್ ಪನ್ನುನ ಬೆದರಿಕೆ ವಿಡಿಯೋ ಕಾಣಿಸಿಕೊಂಡ ನಂತರ ಭಾರತದ ಭದ್ರತಾ ಏಜೆನ್ಸಿ (Security Agency of India)ಗಳು ಹೆಚ್ಚು ಅಲರ್ಟ್ನಲ್ಲಿವೆ.

ಮೂಲಗಳ ಪ್ರಕಾರ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಭಾರತ ವಿರೋಧಿ ನಿರೂಪಣೆಯನ್ನು ಪ್ರಚಾರ ಮಾಡುವ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸಲು ಪನ್ನುನ್ಗೆ ನಿರ್ದೇಶನಗಳನ್ನು

ನೀಡಿದೆ ಎಂದು ಭಾರತೀಯ ಎಜೆನ್ಸಿಗಳು ಹೇಳಿವೆ. ಇನ್ನು ಡಿಸೆಂಬರ್ 4ರಂದು ಆರಂಭವಾಗಿರುವ ಸಂಸತ್ ಅಧಿವೇಶನ ಡಿಸೆಂಬರ್ 22ರವರೆಗೆ ನಡೆಯಲಿದೆ.

ಇನ್ನು ಗುರುಪತ್ವಂತ್ ಸಿಂಗ್ ಪನ್ನು ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಮೇರಿಕಾ ಮೂಲದ ಸಿಖ್ಸ್ ಫಾರ್ ಜಸ್ಟಿಸ್ (Sikhs for Justice) ನ ಮುಖ್ಯಸ್ಥನಾಗಿದ್ದು, ಭಾರತೀಯ ತನಿಖಾ ಸಂಸ್ಥೆಗಳಿಗೆ

ಬೇಕಾಗಿದ್ದಾನೆ. ಭಾರತದಲ್ಲಿ ಈತನ ಮೇಲೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನನ್ನು ಕೊಲ್ಲಲು ಭಾರತೀಯ ಏಜೆನ್ಸಿಗಳು ಸಂಚು ರೂಪಿಸಿದ್ದವು ಎಂಬ ಆರೋಪ ಕೇಳಿ ಬಂದಿದೆ.

ಅಮೇರಿಕಾದ ಫೆಡರಲ್ ಪ್ರಾಸಿಕ್ಯೂಟರ್ಗಳು (US Federal Prosecutors) 52 ವರ್ಷದ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರನ್ನು ಪನ್ನುನ್ನನ್ನು ಕೊಲ್ಲುವ ವಿಫಲ ಸಂಚಿನಲ್ಲಿ ಬಂಧಿಸಿದ್ದಾರೆ.

ಈ ವಿಚಾರವಾಗಿ ಭಾರತ ಮತ್ತು ಅಮೇರಿಕಾದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ. ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಸಂಚಿನ ತನ್ನ ಪಾತ್ರವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಇದನ್ನು ಓದಿ: ರೈಲು ಇಂಡಿಯಾ ಕಂಪನಿಯಲ್ಲಿ ವಿವಿಧ ಉದ್ಯೋಗಾವಕಾಶ ; ಇಂದೇ ಅರ್ಜಿ ಸಲ್ಲಿಸಿ

Exit mobile version