ಕೆನಡಾ, ಯುಎಸ್, ಬ್ರಿಟನ್ನಲ್ಲಿ ಭಾರತೀಯ ರಾಜತಾಂತ್ರಿಕರನ್ನು ಕೊಲ್ಲುವಂತೆ ಖಲಿಸ್ತಾನಿಗಳಿಂದ ಕರೆ

ಕೆನಡಾ, ಯುಎಸ್ ಮತ್ತು ಬ್ರಿಟನ್ನ (Khalistan rallies on July 8) ಹಲವಾರು ನಗರಗಳಲ್ಲಿನ ಭಾರತೀಯ ರಾಜತಾಂತ್ರಿಕರನ್ನು ಕೊಲ್ಲುವಂತೆ ನಿಷೇಧಿತ ಖಲಿಸ್ತಾನಿ ಸಂಘಟನೆ ಕರೆ ನೀಡಿರುವುದು ಭಾರೀ

ವಿವಾದಕ್ಕೆ ಕಾರಣವಾಗಿದೆ. ಭಾರತ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.

ಕೆನಡಾದ (Canada) ಗ್ರೇಟರ್ ಟೊರೊಂಟೊ ಪ್ರದೇಶದ ಭಾರತ್ ಮಾತಾ ಮಂದಿರದ ಮುಂಭಾಗದಲ್ಲಿ ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕುವ ಖಾಲಿಸ್ತಾನ್

(Khalistan) ಪರ ಪೋಸ್ಟರ್ ಹಾಕಲಾಗಿದ್ದು, ಭಾರತೀಯ ರಾಜತಾಂತ್ರಿಕರನ್ನು ಕೊಲ್ಲುವಂತೆ ಕರೆ (Khalistan rallies on July 8) ನೀಡಲಾಗಿದೆ.

ಇನ್ನು ಕೆನಡಾ, ಯುಎಸ್ (UK) ಮತ್ತು ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಅಲ್ಲಿಯ ಪೊಲೀಸ್ ಇಲಾಖೆ ರಕ್ಷಣೆ ನೀಡಿದೆಯಾದರೂ, ರಾಜಕೀಯ ನಾಯಕತ್ವ ಮತ್ತು ವಾಕ್ ಸ್ವಾತಂತ್ರ್ಯದ

ಹೆಸರಿನಲ್ಲಿ ಕೆನಡಾ ಪ್ರತಿಭಟನೆಯನ್ನು ಸಮರ್ಥಿಸುತ್ತಿದೆ. ಭಾರತೀಯ ರಾಜತಾಂತ್ರಿಕರಿಗೆ ಭದ್ರತೆ ನೀಡಲಾಗಿದೆ. ಆದರೆ ಭಾರತೀಯ ರಾಜತಾಂತ್ರಿಕರನ್ನು ಬಹಿರಂಗವಾಗಿ ಗುರಿಯಾಗಿಸಿಕೊಂಡು

ರ್ಯಾಲಿಗಳನ್ನು (Rally) ನಡೆಸುತ್ತಿರುವ ಉಗ್ರಗಾಮಿ ಸಂಘಟಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.

ಭಾರತ ನೀಡಿದ ಎಚ್ಚರಿಕೆಯ ನಂತರ ಈ ದೇಶಗಳ ಕಾನೂನು ಜಾರಿ ಸಂಸ್ಥೆಗಳಿಂದ ಭಾರತೀಯ ರಾಜತಾಂತ್ರಿಕರು ಮತ್ತು ಭಾರತೀಯ ರಾಜತಾಂತ್ರಿಕ ಆವರಣಗಳಿಗೆ ರಕ್ಷಣೆ ನೀಡಲಾಗಿದೆ. ಭಾರತವು

ಈಗಾಗಲೇ ಯುಎಸ್, ಕೆನಡಾ ಮತ್ತು ಯುಕೆ ಸರ್ಕಾರಗಳೊಂದಿಗೆ ಭಯೋತ್ಪಾದಕ ಪನ್ನು ಪ್ರಕರಣವನ್ನ ಚರ್ಚಿಸಿದ್ದು, ಪನ್ನು ಈ ದೇಶಗಳ ಆಂತರಿಕ ಭದ್ರತಾ ಏಜೆನ್ಸಿಗಳಿಂದ (Agency) ರಕ್ಷಣೆ ಪಡೆಯುತ್ತಿದ್ದಾನೆ.

CIA, FBI, CSIS ಮತ್ತು MI-5 ಗುಪ್ತಚರ ಏಜೆನ್ಸಿಗಳೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೂಲಕ ಈ ಸಮಸ್ಯೆಯ ಗಂಭೀರತೆಯ ಕುರಿತು ಪ್ರಸ್ತಾಪಿಸಲಾಗಿದೆ.

ಇನ್ನು ಕಳೆದ ಕೆಲ ದಿನಗಳಿಂದ ವಿದೇಶಗಳಲ್ಲಿ ಅಡಗಿ ಕುಳಿತು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಅನೇಕ ಖಲಿಸ್ತಾನಿ (Khalistan) ನಾಯಕರನ್ನು ಭಾರತದ ಎಜೆನ್ಸಿಗಳು ಸದ್ದಿಲ್ಲದೇ ಕೊಂದು

ಹಾಕಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಖಲಿಸ್ತಾನಿ ನಾಯಕರನ್ನು ಭಾರತ ವಿದೇಶಗಳಲ್ಲೇ ಕೊಂದು ಹಾಕುತ್ತಿರುವುದರಿಂದ ಇಡೀ ಸಂಘಟನೆಯ ಶಕ್ತಿ ಕುಂದುತ್ತಿದೆ. ಹೀಗಾಗಿ ಭಾರತದ ವಿರುದ್ದ ಖಲಿಸ್ತಾನ

ಹೋರಾಟವನ್ನು ಮತ್ತಷ್ಟು ಬಲಪಡಿಸಲು ಭಾರತ ವಿರುದ್ದವಾಗಿ ಬಹಿರಂಗ ರ್ಯಾಲಿಗಳನ್ನು ನಡೆಸಲು ಖಲಿಸ್ತಾನಿಗಳು ಮುಂದಾಗಿದ್ದಾರೆ. ಅದರ ಭಾಗವಾಗಿಯೇ ಅಮೇರಿಕಾ (America) , ಬ್ರಿಟನ್ ಮತ್ತು

ಕೆನಡಾಗಳಲ್ಲಿ ಅನೇಕ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತ ಸರ್ಕಾರ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

Exit mobile version