ರಾಮಮಂದಿರ ಬಿಡಿ, ಉದ್ಯೋಗದ ಬಗ್ಗೆ ಮಾತನಾಡಿ ಮೋದಿಯವರೇ ; ಖರ್ಗೆ ಗುಡುಗು

Bengaluru : ಬಿಜೆಪಿ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡ್ತೀವಿ ಅನ್ನೋ ಭರವಸೆ(kharge statement about Ram mandir) ಕೊಟ್ಟು ಅಧಿಕಾರಕ್ಕೆ ಬಂದಿದೆ ಆದ್ರೆ,

ಅದ್ರ ಬಗ್ಗೆ ಪ್ರಧಾನಿ ಮೋದಿಯವರು(Narendra modi) ತುಟಿಯೇ ಬಿಚ್ಚುತ್ತಿಲ್ಲ, ಅಮಿತ್‌ ಶಾ(Amit shah) ಅವರು ಗಡುವು ಕೊಡ್ತಿಲ್ಲ.

ಆದ್ರೆ ಸರ್ಕಾರಕ್ಕೆ ಸಂಬಂಧವೇ ಇಲ್ಲದ ರಾಮಮಂದಿರದ ಉದ್ಘಾಟನೆಯ ದಿನಾಂಕವನ್ನು ಘೋಷಿಸುತ್ತಾರೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಗುಡುಗಿದ್ದಾರೆ.

ರಾಮಮಂದಿರ ಉದ್ಘಾಟನೆಯ ದಿನಾಂಕವನ್ನು ಘೋಷಿಸಿದ ಕೇಂದ್ರ ಸಚಿವ,

ಬಿಜೆಪಿ ಪಕ್ಷದ ನಾಯಕ ಅಮಿತ್ ಶಾ ನಡೆಯ ವಿರುದ್ಧ ಕಾಂಗ್ರೆಸ್‌ ರಾಷ್ಟ್ರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಮತ್ತು ಪುತ್ರ ಪ್ರಿಯಾಂಕ್‌ ಖರ್ಗೆ(kharge statement about Ram mandir) ವಾಗ್ದಾಳಿ ನಡೆಸಿದ್ದಾರೆ.

ರಾಮಮಂದಿರ ಉದ್ಘಾಟನೆಯ ದಿನಾಂಕವನ್ನು ಘೋಷಿಸುವ ಅಮಿತ್‌ ಶಾ ಅವರು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಮಧ್ಯೆ ಉದ್ಯೋಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಗಡುವನ್ನು ಇಟ್ಟುಕೊಳ್ಳುವತ್ತ ಗಮನ ಹರಿಸುವುದು ಒಳಿತು ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಅಮಿತ್‌ ಶಾ ಅವರನ್ನು ಟೀಕಿಸಿದ ಶಾಸಕ ಪ್ರಿಯಾಂಕ್ ಖರ್ಗೆ, “ಮುಂದಿನ ವರ್ಷ ಜನವರಿ 1 ರೊಳಗೆ ರಾಮಮಂದಿರ ಸಿದ್ಧವಾಗಲಿದೆ ಎಂದು ಅಮಿತ್‌ ಶಾ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೇವಲ ದೇವಸ್ಥಾನಕ್ಕೆ ಮಾತ್ರವಲ್ಲದೆ ಸರ್ಕಾರಿ

ಉದ್ಯೋಗದ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಆರ್ಥಿಕತೆಯನ್ನು ಸುಧಾರಣೆಗೆ ತರಲು ಗಡುವನ್ನು ನಿಗದಿಪಡಿಸಲು ಸೂಚಿಸಬೇಕು.

ಇದಕ್ಕೂ ಮುನ್ನ, ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಮ ಮಂದಿರದ ಉದ್ಘಾಟನಾ ದಿನಾಂಕವನ್ನು ಅಮಿತ್‌ ಶಾ ಅವರು ಘೋಷಿಸಿದ ಬೆನ್ನಲ್ಲೇ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ನೀವು ಪೂಜಾರಿ ಅಲ್ಲ ರಾಜಕಾರಣಿ! ದೇಶವನ್ನು ರಕ್ಷಿಸುವುದು ನಿಮ್ಮ ಕರ್ತವ್ಯ, ರೈತರಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಒದಗಿಸುವುದರ ಬಗ್ಗೆ ಚಿಂತಿಸಿ ವಿನಃ ದೇವಸ್ಥಾನದ ಬಗ್ಗೆ ಘೋಷಣೆ ಮಾಡುವುದಲ್ಲ ಎಂದು ಖರ್ಗೆ ಹೇಳಿದರು.

ಹರಿಯಾಣದ ಪಾಣಿಪತ್‌ನಲ್ಲಿ(Panipat) ಗ್ರ್ಯಾಂಡ್ ಓಲ್ಡ್ ಪಾರ್ಟಿಯ ಭಾರತ್ ಜೋಡೋ(Bharat jodo) ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ,

ಬಿಜೆಪಿ ನಾಯಕತ್ವದ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಬಿಜೆಪಿ ಅವರು ದೊಡ್ಡ ಸುಳ್ಳುಗಾರರು. ಎರಡು ಕೋಟಿ ಉದ್ಯೋಗ ಭರವಸೆ ನೀಡಿ ಅಧಿಕಾರಕ್ಕೆ ಬಂದರು.

ಆದರೆ ಯಾರಿಗೂ ಉದ್ಯೋಗ ಸಿಕ್ಕಿಲ್ಲ. 15 ಲಕ್ಷ ರೂಪಾಯಿ ಕೊಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ವಾರ ತ್ರಿಪುರಾದ ಸಬ್ರೂಮ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ಕಳೆದ ವಾರ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಜನವರಿ 1, 2024 ರೊಳಗೆ ಲೋಕಸಭೆ ಚುನಾವಣೆ ನಡೆಯುವ ವರ್ಷಕ್ಕೆ ಸಿದ್ಧಗೊಳಿಸಲಾಗುವುದು ಎಂದು ಘೋಷಿಸಿದರು.

Exit mobile version